Job: ಸರ್ಕಾರಿ ಸಾರಿಗೆಯಲ್ಲಿ 2500 ಹುದ್ದೆಗಳು ಖಾಲಿ ಖಾಲಿ; PUC ಪಾಸ್ ಆಗಿದ್ರೆ ಸಾಕು, ಕೈತುಂಬಾ ಸಂಬಳ!

Job: ಕೆಲಸಕ್ಕಾಗಿ ಹುಡುಕುತ್ತಿರುವ ಯುವಕರಿಗೆ ಇವತ್ತಿನ ಈ ಲೇಖನದಲ್ಲಿ ನಾವು ಬೆಂಗಳೂರಿನ ಮಹಾನಗರ ಸಾರಿಗೆಯಲ್ಲಿ 2500 ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಆಹ್ವಾನ ಬಂದಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಈ ಕೆಲಸಕ್ಕಾಗಿ ಬೇಕಾಗಿರುವಂತಹ ಅರ್ಹತೆಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಇವತ್ತಿನ ಈ ಆರ್ಟಿಕಲ್ ಮೂಲಕ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ ಬನ್ನಿ.

 ಬೇಕಾಗಿರುವ ಅರ್ಹತೆಗಳು

ಯಾವುದೇ ಸರ್ಕಾರಿ ಕೆಲಸಕ್ಕೆ ಸೇರೋದಕ್ಕಿಂತ ಮುಂಚೆ ಅದಕ್ಕೆ ಬೇಕಾಗಿರುವಂತಹ ಅರ್ಹತೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ಮೊದಲಿಗೆ ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾತನಾಡುವುದಾದರೆ ಸೆಕೆಂಡ್ ಪಿಯುಸಿ ಪಾಸ್ ಆಗಿರಬೇಕು ಇಲ್ಲವೇ ಮೂರು ವರ್ಷಗಳ ಡಿಪ್ಲೋಮಾ ಪಾಸ್ ಮಾಡಿರಬೇಕು. ಜೇ ಓ ಸಿ ಹಾಗು ಜೆ ಎಲ್ ಸಿ ಕೋರ್ಸ್ಗಳ ಅಭ್ಯರ್ಥಿಗಳನ್ನು ಅರ್ಹತೆಯ ಮಾಪನದಿಂದ ಹೊರಹಾಕಲಾಗಲಾಗಿದೆ‌. ಮುಕ್ತ ವಿಶ್ವವಿದ್ಯಾನಿಲಯದಿಂದ ಪಿಯುಸಿ ಅಥವಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೂ ಕೂಡ ಈ ಕೆಲಸಕ್ಕೆ ಅರ್ಹತೆ ಇರುವುದಿಲ್ಲ.

ಮೋಟಾರ್ ವಾಹನ ನಿರ್ವಹಣೆ ಮಾಡಲು ಬೇಕಾಗಿರುವಂತಹ ಲೈಸೆನ್ಸ್ ಅನ್ನು ಕೂಡ ಅವರು ಹೊಂದಿರಬೇಕಾಗಿರುತ್ತದೆ ಮಾತ್ರವಲ್ಲದೆ, ಬ್ಯಾಡ್ಜ್ ಕೂಡ ಪ್ರಮುಖವಾಗಿ ಬೇಕಾಗಿರುತ್ತದೆ. ಅರ್ಜಿ ಸಲ್ಲಿಸುವಂತಹ ಪುರುಷರ ಎತ್ತರ 160cm ಹಾಗೂ ಮಹಿಳೆಯರ ಎತ್ತರ 150cm ಕನಿಷ್ಠ ಪಕ್ಷ ಇರಬೇಕು. ವಯೋಮಾನ್ಯತೆ ಬಗ್ಗೆ ಮಾತನಾಡುವುದಾದರೆ ಇದೇ ಏಪ್ರಿಲ್ 10ಕ್ಕೆ ಸರಿಹೊಂದುವಂತೆ ಅವರ ವಯಸ್ಸು ಕನಿಷ್ಠ ಪಕ್ಷ 18 ಆಗಿರಬೇಕು.

ಇನ್ನು ಗರಿಷ್ಠ ವಯೋಮಿತಿಯ ಬಗ್ಗೆ ಮಾತನಾಡುವುದಾದರೆ ಸಾಮಾನ್ಯ ವರ್ಗದವರಿಗೆ 35 ವರ್ಷ ಮೀರಿರಬಾರದು. 2A 2B 3A 3B ಅಭ್ಯರ್ಥಿಗಳ ವಯಸ್ಸು 38 ವರ್ಷ ಮೀರಿರಬಾರದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40ವರ್ಷ ಮೀರಿರಬಾರದು. ಮಾಜಿ ಸೈನಿಕ ಹಾಗೂ ಇಲಾಖೆಯ ಅಭ್ಯರ್ಥಿಗಳಿಗೆ ವಯೋಮಾನ್ಯತೆ 45 ವರ್ಷಕ್ಕಿಂತ ಮೇಲಿರಬಾರದು.

 ಸಿಗುವ ಸಂಬಳ

ಒಂದು ವೇಳೆ ಆಯ್ಕೆಯಾದರೆ ಒಂದು ವರ್ಷಗಳ ಕಾಲ ನಿರ್ವಾಹಕ ಹುದ್ದೆಗೆ ತರಬೇತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಮಾಸಿಕ ಭತ್ಯೆಯ ರೂಪದಲ್ಲಿ 9100 ಹಣವನ್ನು ನೀಡಲಾಗುತ್ತದೆ. ನಿಜವಾದ ಸಂಬಳದ ಬಗ್ಗೆ ಮಾತನಾಡುವುದಾದರೆ ಮಾಸಿಕವಾಗಿ 18660 ಯಿಂದ 25300 ರೂಪಾಯಿ ಗಳನ್ನು ನೀಡಲಾಗುತ್ತದೆ.

 ಅರ್ಜಿ ಸಲ್ಲಿಕೆ

http://kea.kar.nic.in ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಕ್ಲಿಕ್ ಮಾಡುವ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಉಳಿದ ಮಾರ್ಗಗಳಿಗೆ ಅರ್ಜಿ ಸಲ್ಲಿಕೆ 750 ರೂಪಾಯಿ ಆಗಿದ್ದು, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ ಒಂದು, ಹಾಗೂ ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500 ರೂಪಾಯಿಗಳ ಅರ್ಜಿ ಶುಲ್ಕವನ್ನು ವಿಧಿಸಲಾಗುತ್ತದೆ. ಮಾರ್ಚ್ ಹತ್ತರಂದು ಅರ್ಜಿ ಸಲ್ಲಿಕೆ ಮಾಡುವಂತಹ ದಿನಾಂಕ ಪ್ರಾರಂಭವಾಗುತ್ತದೆ ಹಾಗೂ ಏಪ್ರಿಲ್ ಹತ್ತಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ವಾಗಿರುತ್ತದೆ.

ಶುಲ್ಕ ಪಾವತಿ ಮಾಡುವುದಕ್ಕೆ ಏಪ್ರಿಲ್ 13 ಕೊನೆಯ ದಿನಾಂಕವಾಗಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ನೀವು ಯಾವ ರೀತಿಯಲ್ಲಿ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಅನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ನೀವು ತಯಾರಿ ನಡೆಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿ ನಡೆಸುವಂತಹ ಸಾಮಾನ್ಯ ಪರೀಕ್ಷೆಯಲ್ಲಿ 75 ಅಂಕಗಳನ್ನು ಗಮನಕ್ಕೆ ತೆಗೆದುಕೊಂಡರೆ ನಿಮ್ಮ ಶೈಕ್ಷಣಿಕ ಅರ್ಹತೆಯ 25 ಅಂಕವನ್ನು ಕೂಡ ಇಲ್ಲಿ ಪರಿಗಣಿಸಲಾಗುತ್ತದೆ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Comments are closed.