Serial: ಗುಂಡಣ್ಣ ಮೇಲೆ ಕೈ ಮಾಡಲು ಹೊರಟ ತಾಂಡವ್ ಭಾಗ್ಯನ ಚಾಲೆಂಜ್ ನಲ್ಲಿ ಕೊನೆಗೂ  ಸೋಲ್ತಾನಾ? ಶ್ರೇಷ್ಠಾ ಕಥೆ ಅಧೋಗತಿ!

Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಇತ್ತೀಚಿನ ದಿನಗಳ ಎಪಿಸೋಡ್ ನಲ್ಲಿ ಸಾಕಷ್ಟು ಟ್ವಿಸ್ಟ್ ಹಾಗು ಟರ್ನ್ ಗಳು ಕಾಣಿಸುತ್ತಿವೆ. ಅಮ್ಮ ಮನೆ ಬಿಟ್ಟು ಹೋಗ್ತಾಳೆ ಅನ್ನೋದಾಗಿ ತಿಳಿದ ಗುಂಡಣ್ಣ ಈಗ ತಂದೆಯ ಬಳಿ ಯಾಕೆ ಅಮ್ಮನಿಗೆ ಹುಷಾರಿಲ್ಲ ಅನ್ನೋದಾಗಿ ಸುಳ್ಳು ಹೇಳಿದ್ರಿ ಅನ್ನೊದಾಗಿ ಪ್ರಶ್ನೆ ಕೇಳ್ತಾನೆ. ಈ ಪ್ರಶ್ನೆಗೆ ತಾಂಡವ್ ಗೆ ಯಾವ ಉತ್ತರ ನೀಡಬೇಕು ಅನ್ನೋದಾಗಿ ತಿಳಿತಾ ಇಲ್ಲ. ಗುಂಡಣ್ಣ ಅಮ್ಮ ಬೇಕೆ ಬೇಕು ಅನ್ನೋದಾಗಿ ಹಠ ಹಿಡಿಯೋದಕ್ಕೆ ಪ್ರಾರಂಭ ಮಾಡುತ್ತಾನೆ ಆ ಕಡೆ ತಾಂಡವ್ಗೆ ಗುಂಡಣ್ಣನ ಮನ ಒಲಿಸುವುದಕ್ಕೆ ಕೂಡ ಆಗೋದಿಲ್ಲ. ಈ ಕಡೆ ಶ್ರೇಷ್ಠ ಮಾತ್ರ ತಾಂಡವ್ ನನ್ನವನಾಗಬೇಕು ಹಾಗೂ ಅವನಿಂದ ಭಾಗ್ಯ ದೂರ ಆಗಬೇಕು ಎಂಬುದಾಗಿ ಕನಸು ಕಾಣ್ತಾ ಇದ್ದಾಳೆ.

ಇದೇ ಕಾರಣಕ್ಕಾಗಿ ರೆಸ್ಟೋರೆಂಟ್ ನಲ್ಲಿ ಅರೇಂಜ್ ಮಾಡಿದ ಎಲ್ಲಾ ಅರೇಂಜ್ಮೆಂಟ್ ಗಳನ್ನ ಹಾಳು ಮಾಡಿ ತಾಂಡವ ನನ್ನ ಜೊತೆಗೆ ಕರೆದುಕೊಂಡು ಹೋಗಬೇಕು ಅನ್ನೋದಾಗಿ ಆಕೆ ಯೋಚನೆ ಮಾಡಿಕೊಂಡಿರುತ್ತಾಳೆ. ತಾಂಡವ್ ಮಾತ್ರ ತನ್ನ ಮಕ್ಕಳ ಬಗ್ಗೆ ಯೋಚನೆ ಮಾಡಿಕೊಂಡು ಇರ್ತಾನೆ. ಇದೇ ಸಂದರ್ಭದಲ್ಲಿಯೇ ಗುಂಡಣ್ಣ ಅಮ್ಮನನ್ನು ಕರೆದುಕೊಂಡು ಬರಬೇಕು ಅನ್ನೋದಾಗಿ ತನ್ನ ತಂದೆಯ ಬಳಿ ಹಠ ಹಿಡಿಯುವುದಕ್ಕೆ ಪ್ರಾರಂಭ ಮಾಡುತ್ತಾನೆ.

ಆದರೆ ಈ ಮಾತಿಗೆ ತಾಂಡವ ಮಾತ್ರ ಒಪ್ಪಿಗೆ ನೀಡುವುದಿಲ್ಲ. ಗುಂಡಣ್ಣ ಮಾತ್ರ ಅಮ್ಮ ಬೇಕೇ ಬೇಕು ಅನ್ನೋದಾಗಿ ಓಡೋದಕ್ಕೆ ಪ್ರಾರಂಭ ಮಾಡುತ್ತಾನೆ. ಆ ಸಂದರ್ಭದಲ್ಲಿ ತಾಂಡವ್ ಏನು ತೋಚದೆ ಗುಂಡಣ್ಣನ ತಡೀತಾನೆ ಹಾಗೂ ಹೊಡೆಯುವುದಕ್ಕೆ ಕೈ ಕೂಡ ಎತ್ತುತ್ತಾನೆ. ಇದರಿಂದ ಶಾಕ್ ಆದ ಗುಂಡಣ್ಣ ಪ್ರಜ್ಞೆ ತಪ್ಪಿ ಬೀಳ್ತಾನೆ. ಇದೇ ಸಂದರ್ಭದಲ್ಲಿ ಆ ಕಡೆ ತಾಯಿ ಭಾಗ್ಯಗೆ ಕೂಡ ಮನಸ್ಸಿನಲ್ಲಿ ಏನೋ ತಳಮಳ ಪ್ರಾರಂಭವಾಗಿರುತ್ತದೆ.

ಈ ಕಡೆ ಭಾಗ್ಯ ಕಾಲಿಗೆ ಗಾ-ಯ ಮಾಡಿಕೊಂಡಿರುತ್ತಾಳೆ. ಅತ್ತ ಕಡೆ ವೈದ್ಯರು ಗುಂಡಣ್ಣನಿಗೆ ಟ್ರೀಟ್ಮೆಂಟ್ ಮಾಡಿ ಆತ ಪ್ರಜ್ಞೆಗೆ ಬಂದಿರುತ್ತಾನೆ. ಹಾಗಿದ್ರೂ ಕೂಡ ಅಮ್ಮ ಬೇಕು ಅನ್ನೋದನ್ನ ಮಾತ್ರ ಆತ ನಿಲ್ಲಿಸಿರುವುದಿಲ್ಲ. ಈ ಕಡೆ ಭಾಗ್ಯಳನ್ನು ನೋಡಿದ್ರೆ ತಾಂಡವ್ ಗೆ ಆಗುವುದಿಲ್ಲ. ಆದರೆ ಏನು ಮಾಡಬೇಕು ಅನ್ನೋದನ್ನ ತಿಳಿಯದೆ ತಾಂಡವ್ ಡಾಕ್ಟರ್ ಹೇಳಿರುವ ಪ್ರಕಾರ ಭಾಗ್ಯಳಿಗೆ ಕರೆ ಮಾಡಿ ರೆಸಾರ್ಟ್ ಗೆ ಬಾ ಅನ್ನೋದಾಗಿ ಕರೀತಾನೆ. ಇದನ್ನು ನೋಡಿ ಕುಸುಮ ಈ ರೀತಿ ಯಾರಾದರೂ ಆಕೆಯನ್ನು ಕರೀತಾರ ಅನ್ನೋದಾಗಿ ಹೇಳ್ತಾಳೆ.

ಅದಕ್ಕೆ ಕೋಪದಿಂದ ನಾನು ಇರೋದೇ ಹೀಗೆ ಅನ್ನೋದಾಗಿ ತಾಂಡವ್ ಕುಸುಮಳಿಗೆ ಕೋಪದಿಂದ ಉತ್ತರಿಸುತ್ತಾನೆ. ಈ ಕಡೆ ಭಾಗ್ಯದ ಮನಸ್ಸಿನಲ್ಲಿ ಕೂಡ ಏನೋ ದೊಡ್ಡ ಅನಾಹುತ ಆಗಿದೆ ಹೀಗಾಗಿ ನಾನು ಈ ಕೂಡಲೇ ಹೋಗಲೇಬೇಕು ಅನ್ನೋದಾಗಿ ಆಕೆ ನಿರ್ಧಾರ ಮಾಡಿರುತ್ತಾಳೆ. ಮುಂದೆ ಇವರಿಬ್ಬರ ಭೇಟಿಯಲ್ಲಿ ಏನಾಗಬಹುದು ಅನ್ನೋದೇ ಪ್ರತಿಯೊಬ್ಬ ಪ್ರೇಕ್ಷಕರ ಮನಸ್ಸಿನಲ್ಲಿ ಕುತೂಹಲ ಮೂಡುವಂತೆ ಮಾಡಿದೆ.

Comments are closed.