Namrutha Gowda: ಮೇಕಪ್ ಇಲ್ಲದೆ ಕಾಣಿಸಿಕೊಂಡ ನಮೃತ ಗೌಡ; ಮೇಕಪ್ ನಂತರದ ಪೋಟೋ ನೋಡಿ ಹೆಂಗ್ ಇದ್ದವಳು ಹೆಂಗ್ ಆದ್ಲು ಗುರು ಅಂತ ಟ್ರೋಲ್ ಮಾಡಿದ ನೆಟ್ಟಿಗರು!

Namrutha Gowda: ಕನ್ನಡ ಕಿರುತೆರೆಯ ಧಾರವಾಹಿಗಳ ಲೋಕದಲ್ಲಿ ಪ್ರಖ್ಯಾತವಾಗಿರುವಂತಹ ನಾಗಿಣಿ ಹಾಗೂ ಪುಟ್ಟಗೌರಿ ಮದುವೆ ಧಾರವಾಹಿಗಳ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವಂತಹ ನಟಿ ಅಮೃತ ಗೌಡ. ಸದ್ಯದ ಮಟ್ಟಿಗೆ ನೋಡುವುದಾದರೆ ಇತ್ತೀಚಿಗಷ್ಟೇ ಮುಗಿದಿರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಕೂಡ ಇನ್ನಷ್ಟು ಅಭಿಮಾನಿಗಳನ್ನು ನಮೃತಗೌಡ ಸಂಪಾದಿಸಿದ್ದಾರೆ ಎನ್ನಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಸಂಖ್ಯಾತ ಅಭಿಮಾನಿಗಳನ್ನು ನಮೃತ ಗೌಡ ಹೊಂದಿದ್ದಾರೆ.

ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಪ್ರೊಫೆಷನಲ್ ಜೀವನಕ್ಕೆ ಸಂಬಂಧಪಟ್ಟಂತಹ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ನಮೃತ ಗೌಡ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ತಮ್ಮ ಮೇಕಪ್ ವಿಡಿಯೋವನ್ನು ಹಂಚಿಕೊಂಡಿದ್ದು ಅದರಲ್ಲಿ ಅವರ ನೋ ಮೇಕಪ್ ಲುಕ್ ನೋಡಿ ಈಗ ಅಭಿಮಾನಿಗಳು ಆಶ್ಚರ್ಯದಿಂದ ಕಾಮೆಂಟ್ ಮಾಡುತ್ತಿದ್ದಾರೆ. ನಮೃತ ಗೌಡ ಅವರಿಗೆ ಈ ವಿಡಿಯೋದಲ್ಲಿ ಮೇಕಪ್ ಮಾಡುವ ತಯಾರಿ ನಡೀತಿತ್ತು. ಅದರಲ್ಲಿ ಅವರ ನೋ ಮೇಕಪ್ ಲುಕ್ ನೋಡಿ ಅಭಿಮಾನಿಗಳು ಹೌಹಾರಿದ್ದಾರೆ.

ಮೇಕಪ್ನಲ್ಲಿ ಅಷ್ಟೊಂದು ಚೆನ್ನಾಗಿ ಕಾಣುವಂತಹ ನಮೃತ ಗೌಡ ಅವರು ಈ ರೀತಿ ಕಾಣ್ತಾಇದ್ದಾರೆ ನಿಜಕ್ಕೂ ಕೂಡ ಅವರೇನಾ ಅಂಯ ಕಾಮೆಂಟ್ ಮಾಡೋ ಮಟ್ಟಕ್ಕೆ ಎಲ್ಲರಿಗೂ ಆಶ್ಚರ್ಯವನ್ನು ತರಿಸಿತ್ತು. ಕೆಲವರು ಟೀಕೆ ಮಾಡಿದರೆ ಇನ್ನು ಕೆಲವರು ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಎಂಬುದಾಗಿ ಹೊಗಳಿದ್ದಾರೆ. ಇನ್ನು ಇದು ನಡೆದಿರೋದು ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಕಾರ್ತಿಕ್ ಮಹೇಶ್ ಹಾಗೂ ನಮೃತ ಗೌಡ ಇಬ್ಬರ ಮದುವೆ ಕಾರ್ಯಕ್ರಮದ ರೀತಿಯ ಫೋಟೋಶೂಟ್ ಸಂದರ್ಭದಲ್ಲಿ. ಈ ಫೋಟೋಶೂಟ್ ನೋಡಿ ಸಾಕಷ್ಟು ಜನ ನಿಜಕ್ಕೂ ಕೂಡ ಇವರಿಬ್ಬರೂ ಮದುವೆ ಆಗುತ್ತಿದ್ದಾರೆ ಅನ್ನೋ ಮಟ್ಟಕ್ಕೆ ಕನ್ಫ್ಯೂಸ್ ಆಗಿದ್ರು.

ಇವಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಫೋಟೋ ಹಾಗೂ ವಿಡಿಯೋಗಳಲ್ಲಿ ಕಾರ್ತಿಕ್ ಮಹೇಶ್ ಮದುವೆ ಗಂಡಿನ ರೀತಿಯಲ್ಲಿ ಹಾಗೂ ನಮೃತ ಗೌಡ ಮದುವೆ ಹೆಣ್ಣಿನ ರೀತಿಯಲ್ಲಿ ಅಲಂಕಾರಗೊಂಡಿದ್ದಾರೆ. ಇದೊಂದು ಜಾಹಿರಾತು ಚಿತ್ರಿಕರಣ ಆಗಿತ್ತು ಆದರೆ ಸಾಕಷ್ಟು ಜನರು ಇವರಿಬ್ಬರು ಮದುವೆ ಆಗೇ ಬಿಟ್ಟರೆ ಅನ್ನೋ ರೀತಿಯಲ್ಲಿ ಗೊಂದಲಕ್ಕೆ ಬಿದ್ದಿದ್ರು. ಅಷ್ಟರ ಮಟ್ಟಿಗೆ ಇವರಿಬ್ಬರ ಫೋಟೋಶೂಟ್ ವಿಭಿನ್ನ ಹಾಗೂ ನ್ಯಾಚುರಲ್ ಆಗಿತ್ತು. ಕೆಲವರಂತೂ ಕಾರ್ತಿಕ್ ಮಹೇಶ್ ಅವರನ್ನ ಗುರಿಯಾಗಿರಿಸಿಕೊಂಡು ಸಂಗೀತ ಅಕ್ಕನ ಬಿಟ್ಟು ಅನ್ನೋ ರೀತಿಯಲ್ಲಿ ಕೂಡ ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸಾಕಷ್ಟು ಕಡೆಗಳಲ್ಲಿ ನಮೃತಗೌಡ ಹಾಗೂ ಇತರ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಪಾರ್ಟಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿಂದಿಗಿಂತಲೂ ಹೆಚ್ಚಿನ ಜನಪ್ರಿಯತೆ ಹಾಗೂ ಸದ್ದನ್ನು ಮಾಡುತ್ತಿದ್ದಾರೆ ಎನ್ನಬಹುದಾಗಿದೆ. ನಮೃತ ಗೌಡ ಅವರ ವಿಚಾರದಲ್ಲಿ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫಾಲೋವರ್ಸ್ ಗಳ ಸಂಖ್ಯೆ ಕೂಡ ಬಿಗ್ ಬಾಸ್ ಮನೆಯಿಂದ ಹೋಗಿ ಬಂದ ನಂತರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ನಮೃತ ಗೌಡ ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ನಟಿಸಿದ್ರು ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ.

Comments are closed.