Government Job: ತಿಂಗಳಿಗೆ 60,000 ಸಂಬಳ ನೀಡುವ ಸರ್ಕಾರಿ ಕೆಲಸ; ತಕ್ಷಣ ಅರ್ಜಿ ಸಲ್ಲಿಸಿ!

Government Job: ಯಾರ ಬಳಿ ಕೆಲಸ ಇಲ್ಲವೋ ಅವರು ಒಂದು ವೇಳೆ ಕೆಲಸ ಹುಡುಕುತ್ತಾ ಇದ್ರೆ ಖಂಡಿತವಾಗಿ ಇವತ್ತು ನಾವು ಹೇಳಲು ಹೊರಟಿರುವ ಈ ಸುದ್ದಿಯನ್ನು ಓದಲೇಬೇಕು. ಭಾರತೀಯ ಮಸಾಲೆ ಮಂಡಳಿಯ ಬಳಿ ಒಂದು ಕನ್ಸಲ್ಟೆಂಟ್ ಹುದ್ದೆ ಖಾಲಿಯಿದ್ದು, ಒಂದು ವೇಳೆ ಆಸಕ್ತಿ ಹೊಂದಿದ್ರೆ ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಇವತ್ತು ಅಂದರೆ ಮಾರ್ಚ್ 5ನೇ ತಾರೀಕು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

 ಕೆಲಸಕ್ಕೆ ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳು ಹಾಗೂ ಇತರ ಮಾಹಿತಿ

ಭಾರತೀಯ ಮಸಾಲೆ ಮಂಡಳಿಯ ಈ ಹುದ್ದೆಗೆ ಆಯ್ಕೆಯಾಗುವಂತಹ ಅಭ್ಯರ್ಥಿಯ ವಿದ್ಯಾರ್ಹತೆಯ ಬಗ್ಗೆ ಮಾತನಾಡುವುದಾದರೆ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ಅಥವಾ ಶಿಕ್ಷಣ ಮಂಡಳಿಯಿಂದ ಕಡ್ಡಾಯವಾಗಿ ಪಿಎಚ್ಡಿ ಪಡೆದುಕೊಂಡಿರಬೇಕು ಎಂಬುದಾಗಿ ತಿಳಿಸಲಾಗಿದೆ. ಮಂಡಳಿಯ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯಸ್ಸು ಮಾರ್ಚ್ 5ನೇ ತಾರೀಕಿಗೆ ಗರಿಷ್ಠವಾಗಿ 63 ವರ್ಷ ವಯಸ್ಸನ್ನು ಮೀರಿರಬಾರದು ಎಂಬುದಾಗಿ ತಿಳಿಸಲಾಗಿದೆ. ಇನ್ನು ವಯೋಮಿತಿಯ ಸಡಿಲಿಕೆಯನ್ನು ಮೀಸಲಾತಿಯ ಅನುಸಾರವಾಗಿ ನೋಡಿಕೊಳ್ಳಲಾಗುತ್ತದೆ.

ಆಯ್ಕೆ ಪ್ರಕ್ರಿಯೆಯನ್ನು ಮೊದಲಿಗೆ ಅವರ ಕ್ವಾಲಿಫಿಕೇಷನ್ ಅಂದರೆ ವಿದ್ಯಾರ್ಹತೆಯನ್ನು ನೋಡಿಕೊಂಡು ನಂತರ, ಅವರ ವರ್ಕ್ ಎಕ್ಸ್ಪೀರಿಯನ್ಸ್ ಹಾಗೂ ಪ್ರೆಸೆಂಟೇಷನ್ ನೋಡಿದ ನಂತರ ಕೊನೆಯದಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂಬಳದ ಬಗ್ಗೆ ಮಾತನಾಡುವುದಾದರೆ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿಗಳವರೆಗೆ ಸಂಬಳವನ್ನು ನೀಡಲಾಗುತ್ತದೆ. ಇನ್ನು ಈ ಹುದ್ದೆ ಖಾಲಿ ಇರುವ ಹಾಗೂ ಕೆಲಸ ಮಾಡಬೇಕಾಗಿರುವ ಸ್ಥಳ ಹಾಸನ ಜಿಲ್ಲೆಯಾಗಿದೆ.

ಫೆಬ್ರವರಿ 15ನೇ ತಾರೀಕಿನಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು ಹಾಗೂ ಇಂದು ಅಂದರೆ ಮಾರ್ಚ್ 5ರಂದು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿದೆ.

 ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಫಾರ್ಮ್ ಅನುಸರಿಯಾದ ರೀತಿಯಲ್ಲಿ ಭರಿಸಿ ನಂತರ ಕಾರ್ಯದರ್ಶಿ

ಮಸಾಲೆ ಮಂಡಳಿ

ಸುಗಂಧ ಭವನ

NH ಬೈ ಪಾಸ್

ಪಲರಿವಟ್ಟಂ.P.O.

ಕೊಚ್ಚಿ-682025 ಈ ಅಡ್ರೆಸ್ಸ್ ಗೆ ಕಳುಹಿಸಬಹುದಾಗಿದೆ. ಇಲ್ಲವಾದಲ್ಲಿ ಸಾಫ್ಟ್ ಕಾಪಿಯನ್ನು [email protected] ಈ ಅಧಿಕೃತ ವೆಬ್ಸೈಟ್ಗೆ ಮೇಲ್ ಕೂಡ ಮಾಡಬಹುದಾಗಿದೆ.

ಸಂಬಂಧಪಟ್ಟಂತಹ ಅಧಿಕಾರಿಗಳು ನೀವು ಕಳುಹಿಸಿದಂತಹ ರೆಸ್ಯುಮ್ ಹಾಗೂ ಇನ್ನಿತರ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ನಂತರ ಶಾರ್ಟ್ ಲಿಸ್ಟ್ ಮಾಡಿದ ನಂತರ ಸಂದರ್ಶನ ಹಾಗೂ ಉಳಿದ ಪ್ರಕ್ರಿಯೆಗಳ ಮೂಲಕ ಸರಿಯಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಈ ಕೆಲಸವನ್ನು ನೀಡುತ್ತಾರೆ. ಆದರೆ ಎಲ್ಲರೂ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವ ವಿಚಾರ ಎಂದರೆ ಆಯ್ಕೆಯಾಗುವಂತಹ ಅಭ್ಯರ್ಥಿಗಳು ಹಾಸನದಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಹೀಗಾಗಿ ಒಂದು ವೇಳೆ ನೀವು ವಿಶೇಷವಾಗಿ ಹಾಸನದ ಮೂಲ ನಿವಾಸಿಗಳಾಗಿದ್ದರೆ ಈ ಕೆಲಸಕ್ಕಾಗಿ ಸುಲಭವಾಗಿ ಪ್ರಯತ್ನ ಪಡಬಹುದಾಗಿದೆ.

Comments are closed.