Mahadev: ಈ ರಾಶಿಯವರಿಗೆ ಮಾತ್ರ ಯಾವ ಸಮಸ್ಯೆ ಬಾರದಂತೆ ತಡೆಯುತ್ತಾನೆ ಪರಶಿವ; ನಿಮ್ಮ ರಾಶಿ ಶಿವನಿಗೆ ಯಾಕೆ ಇಷ್ಟ ಗೊತ್ತಾ?

Mahadev: ಮಹಾಶಿವನನ್ನು ಇಷ್ಟಪಡದ ಭಕ್ತಾಭಿಮಾನಿಗಳು ಯಾರಿದ್ದಾರೆ ನೀವೇ ಹೇಳಿ. ಶಿವನು ಒಲಿದರೆ ಜೀವನದಲ್ಲಿ ಯಾವುದೇ ಕಷ್ಟ ಇರೋದಿಲ್ಲ ಅನ್ನುವುದಾಗಿ ಪ್ರತಿಯೊಬ್ಬರು ಕೂಡ ನಂಬುತ್ತಾರೆ. ಶಿವನ ಬಳಿ ಒಳ್ಳೆಯ ಮನಸ್ಸಿನಿಂದ ಕೈ ಮುಗಿದು ಬೇಡಿದರೆ ಪ್ರತಿಯೊಂದು ಇಷ್ಟಾರ್ಥಗಳು ಹಾಗೂ ಕಾರ್ಯಗಳು ಸಿದ್ಧಿಯಾಗುತ್ತವೆ ಎಂಬುದಾಗಿ ನಂಬಲಾಗುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಿವನು ಇಷ್ಟ ಪಡುವಂತಹ ರಾಶಿಗಳು ಯಾವುವು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

 ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರು ಮನಸಾರೆ ಪರಮಶಿವನನ್ನು ಆರಾಧನೆ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಶಿವನಿಗೆ ಕನ್ಯಾ ರಾಶಿಯವರು ಎಂದರೆ ತುಂಬಾ ಇಷ್ಟ. ಕನ್ಯಾ ರಾಶಿಯವರು ಬೇಡುವಂತಹ ಪ್ರತಿಯೊಂದು ಬೇಡಿಕೆಗಳನ್ನು ಕೂಡ ಪೂರೈಸುತ್ತಾನೆ ಪರಮಶಿವ. ಶಿವನ ಕೃಪೆಗಾಗಿ ಕೆಲಸದಲ್ಲಿ ಕೂಡ ಕನ್ಯಾ ರಾಶಿಯವರಿಗೆ ಸಾಕಷ್ಟು ಅದೃಷ್ಟ ಸಂಪಾದನೆ ಆಗಲಿ. ಆರ್ಥಿಕವಾಗಿ ಒಂದು ವೇಳೆ ಕನ್ಯಾ ರಾಶಿಯವರು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ರೆ ಆ ಸಮಸ್ಯೆಯಿಂದ ಕನ್ಯಾ ರಾಶಿಯವರು ಕೂಡಲೇ ಹೊರಬರುತ್ತಾರೆ.

 ಮಕರ ರಾಶಿ (Capricorn)

ಮಕರ ರಾಶಿಯವರು ಎಂದರೆ ಕೂಡ ಶಿವನಿಗೆ ಪಂಚಪ್ರಾಣ. ಮಕರ ರಾಶಿಯವರು ಜೀವನದಲ್ಲಿ ಬೇಡುವಂತಹ ಪ್ರತಿಯೊಂದು ಬೇಡಿಕೆಗಳ ಪೂರೈಕೆಯನ್ನು ಶಿವ ಮಾಡುತ್ತಾನೆ ಹಾಗೂ ಅವರ ಜೀವನದಲ್ಲಿ ಯಾವುದೇ ಕೊರತೆ ಇಲ್ಲದಂತೆ ಶಿವ ನೋಡಿಕೊಳ್ಳುತ್ತಾನೆ. ವ್ಯಾಪಾರದಲ್ಲಿ ಕೂಡ ಮಕರ ರಾಶಿಯವರು ಯಶಸ್ವಿಯಾಗುತ್ತಾರೆ. ಶಿವನ ಆಶೀರ್ವಾದದಿಂದಾಗಿ ಈ ಉದ್ಯಮದಿಂದಲೂ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಶಿವನ ಆಶೀರ್ವಾದದಿಂದಾಗಿ ಯಾವುದೇ ಹೊಸ ಹುದ್ದೆ ಮಾತ್ರ ಕೆಲಸವನ್ನು ಪ್ರಾರಂಭ ಮಾಡಿದ್ರು ಕೂಡ ಅದರಲ್ಲಿ ನಿಮ್ಮ ಯಶಸ್ಸು ಖಂಡಿತ ಕಟ್ಟಿಟ್ಟ ಬುತ್ತಿಯಾಗಿದೆ. ಹೊಸ ಕೆಲಸಗಳು ಕೂಡ ನಿಮಗೆ ಉತ್ತಮ ಫಲವನ್ನು ಕರುಣಿಸಲಿವೆ.

 ಮೇಷ ರಾಶಿ (Aries)

ಶಿವನ ಬೆವರಿನಿಂದ ಉದ್ಭವ ಆಗಿರುವಂತಹ ಮಂಗಳನ ಗ್ರಹ ಮೇಷ ರಾಶಿ ಆಗಿರುತ್ತದೆ. ಇದೇ ಕಾರಣಕ್ಕಾಗಿ ಮೇಷ ರಾಶಿ ಎಂದರೆ ಶಿವನಿಗೂ ಕೂಡ ಇಷ್ಟ. ಇದೇ ಕಾರಣಕ್ಕಾಗಿ ಮಹಾದೇವನ ಆಶೀರ್ವಾದ ಮೇಷ ರಾಶಿಯವರ ಮೇಲೆ ವಿಶೇಷವಾಗಿ ಇರುತ್ತದೆ. ಶಿವನ ಆಶೀರ್ವಾದದ ಕೃಪೆಯಿಂದಾಗಿ ಅದೃಷ್ಟ ಕೂಡ ಚೆನ್ನಾಗಿ ಇರಲಿದ್ದು ಮಾಡುವಂತ ಎಲ್ಲಾ ಕೆಲಸಗಳಲ್ಲಿ ಕೂಡ ಗೆಲುವನ್ನು ಸಂಪಾದನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹೊಸ ಕೆಲಸಕ್ಕೆ ಕೂಡ ಶಿವನ ಕೃಪೆ ಇರಲಿದೆ.

 ವೃಶ್ಚಿಕ ರಾಶಿ (Scorpion)

ಶಿವನ ಇಷ್ಟವಾದ ರಾಶಿಗಳಲ್ಲಿ ವೃಶ್ಚಿಕ ರಾಶಿ ಕೂಡ ಒಂದಾಗಿದ್ದು ಇವರು ಯಾವುದೇ ಕೆಲಸವನ್ನು ಸುಲಭವಾಗಿ ಶಿವನ ಕೃಪೆಯಿಂದಾಗಿ ಮಾಡುತ್ತಾರೆ. ಶಿವರಾತ್ರಿಯ ವಿಶೇಷ ದಿನದಂದು ಶಿವನನ್ನು ವಿಶೇಷವಾಗಿ ಪೂಜೆ ಮಾಡುವ ಮೂಲಕ ನೀವು ಆತನ ವಿಶೇಷ ಕೃಪೆಗೆ ಪಾತ್ರರಾಗಬಹುದಾಗಿದೆ. ಶಿವ ನಿಮ್ಮ ಮನಸ್ಸಿನಲ್ಲಿರುವಂತಹ ಪ್ರತಿಯೊಂದು ಆಸೆಗಳನ್ನು ಕೂಡ ಸಂಪೂರ್ಣಗೊಳಿಸಲಿದ್ದಾನೆ. ಶಿವನ ಮೇಲಿನ ಭಕ್ತಿ ಹಾಗೂ ಪೂಜಾ ಕಾರ್ಯಗಳು ನಿಮ್ಮಲ್ಲಿ ಇರುವಂತಹ ಪುಣ್ಯ ಸಂಪಾದನೆಯ ಅಂಶವನ್ನು ಹೆಚ್ಚಿಸಲು.

 ವೃಷಭ ರಾಶಿ (Taurus)

ಶಿವ ಇಷ್ಟ ಪಡುವಂತ ರಾಶಿಗಳಲ್ಲಿ ವೃಷಭ ರಾಶಿಯವರು ಕೂಡ ಒಬ್ಬರಾಗಿದ್ದು ಹಣದ ವಿಚಾರದಲ್ಲಿ ವೃಷಭ ರಾಶಿಯವರು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಜೀವನದಲ್ಲಿ ಆರ್ಥಿಕ ಲಾಭದ ಜೊತೆಗೆ ಸಂತೋಷ ಕೂಡ ಹೆಚ್ಚಾಗಲಿದೆ. ಯಾವುದೇ ಉದ್ಯಮ ಮಾಡಿದ್ರು ಕೂಡ ಹಣದಲ್ಲಿ ಲಾಭ ಆಗೋದು ಖಂಡಿತ.

 ಸಿಂಹ ರಾಶಿ (Leo)

ಶಿವನ ಕೃಪಾಕಟಾಕ್ಷದಿಂದಾಗಿ ಸಿಂಹರಾಶಿಯವರ ಕನಸುಗಳು ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಜಾತಕದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯವಹಾರ ಮಾಡಿದ್ರೆ ಲಾಭ ಆಗುವುದು ಖಂಡಿತ ಎಂಬುದಾಗಿ ತಿಳಿಸಲಾಗಿದೆ. ಯಾವುದೇ ದೋಷ ಇದ್ರೂ ಕೂಡ ನಿಮ್ಮ ಜಾತಕದಲ್ಲಿ ಶಿವನ ಕೃಪೆಯಿಂದಾಗಿ ಅವೆಲ್ಲ ನಿವಾರಣೆ ಆಗುತ್ತದೆ. ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಪಡೆಯುವಂತಹ ಸಿಂಹ ರಾಶಿಯವರು ಜೀವನದಲ್ಲಿ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಿದರೂ ಕೂಡ ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ.

Comments are closed.