Ananth Ambani: ಅನಂತ್ ಅಂಬಾನಿ ಭಾವಿ ಪತ್ನಿ ರಾಧಿಕಾ ಡ್ಯಾನ್ಸ್ ಮಾಡುವಾಗ ಈ ರೀತಿ ಮಾಡಿದ್ದು ನೋಡಿ ಹೆಚ್ಚಾಯಿತು ಅಭಿಮಾನಿಗಳ ಸಂಖ್ಯೆ.

Ananth Ambani: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕೂಡ ನಮಗೆ ಕಾಣಿಸುವಂತಹ ಕಂಟೆಂಟ್ ಅಂದ್ರೆ ಅದು ಅಂಬಾನಿ ಮಗನ ಮದುವೆಯ ಪೂರ್ವಭಾವಿ ತಯಾರಿಯ ಕಾರ್ಯಕ್ರಮದ ವಿಡಿಯೋಗಳು. ದೇಶ ವಿದೇಶದಿಂದ ಸೆಲೆಬ್ರಿಟಿಗಳು ಅಂಬಾನಿ ಕುಟುಂಬದಿಂದ ನಡೆಯುತ್ತಿರುವಂತಹ ಈ ಕಾರ್ಯಕ್ರಮಕ್ಕೆ ಗುಜರಾತ್ ನಲ್ಲಿರುವಂತಹ ಜಾಮ್ ನಗರಕ್ಕೆ ಆಗಮಿಸಿ ಮೂರು ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮೂರು ದಿನಗಳ ಕಾಲ ನಡೆದಿರುವಂತಹ ಈ ಕಾರ್ಯಕ್ರಮಕ್ಕೆ ಅಂಬಾನಿ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ರಿಹಾನ ಅವರಂತಹ ಅಮೆರಿಕದ ಗಾಯಕಿಯರನ್ನು ಕೂಡ ಕೇವಲ ಒಂದು ರಾತ್ರಿ ಹಾಡು ಹಾಡೋದಕ್ಕೆ 40 ರಿಂದ 50 ಕೋಟಿ ರೂಪಾಯಿ ಕೊಟ್ಟು ಕಾರಿಸಿದ್ದಾರೆ ಅಂದ್ರೆ ಅಂಬಾನಿ ಮನೆತನದ ಶ್ರೀಮಂತಿಗೆ ಎಷ್ಟಿದೆ ಅನ್ನೋದನ್ನ ನೀವು ಅಂದಾಜು ಹಾಕಬಹುದು.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರವರ ಮದುವೆಯ ಪೂರ್ವಭಾವಿ ಕಾರ್ಯಕ್ರಮದ ಎಂಜಾಯ್ಮೆಂಟ್ ನಲ್ಲಿ ಅಮೆರಿಕಾದ ಗಾಯಕ ಆಗಿರುವಂತಹ ಎಕಾನ್ ರವರ ಜೊತೆಗೆ ರಾಧಿಕಾ ಮರ್ಚೆಂಟ್ ಕುಣಿದಿರುವಂತಹ ಒಂದು ವಿಡಿಯೋ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಈ ವೈರಲ್ ಆಗಿರುವಂತಹ ವಿಡಿಯೋದ ಮೂಲಕವೇ ರಾಧಿಕಾ ಮರ್ಚೆಂಟ್ ರವರ ಅಭಿಮಾನಿಗಳ ಬಳಗ ಕೂಡ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಬಹುದಾಗಿದ್ದು, ಎಲ್ಲರೂ ಕೂಡ ರಾಧಿಕಾ ಮರ್ಚೆಂಟ್ ರವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಕೋನ್ ಹಾಡು ಹೇಳುತ್ತಿರಬೇಕಾದರೆ ಅವರ ಜೊತೆಗೆ ರಾಧಿಕಾ ಮರ್ಚೆಂಟ್ ಅವರನ್ನು ಕೂಡ ತಮ್ಮ ಜೊತೆಗೆ ನೃತ್ಯ ಮಾಡುವಂತೆ ಆಹ್ವಾನ ಮಾಡುತ್ತಾರೆ ಆ ಸಂದರ್ಭದಲ್ಲಿ ರಾಧಿಕಾ ಮರ್ಚೆಂಟ್ ಅವರ ಎದೆಯ ಸೀಳು ಕಾಣುತ್ತಿರುವುದು ಅವರಿಗೆ ಕ್ಯಾಮರಾದಲ್ಲಿ ಕಂಡು ಬರುತ್ತದೆ. ಕೂಡಲೇ ರಾಧಿಕಾ ಮರ್ಚೆ ತಮ್ಮ ಜಾಕೆಟ್ ನಿಂದ ಅದನ್ನು ಮರೆಮಾಚುತ್ತಾರೆ. ಒಬ್ಬ ಭಾರತೀಯ ಸಂಸ್ಕೃತಿಯ ಹೆಣ್ಣು ಮಗಳು ಯಾವ ರೀತಿಯಲ್ಲಿ ಇರಬೇಕು ಆ ರೀತಿಯಲ್ಲಿ ಇದ್ದೀರಾ ಮೇಡಂ ಎನ್ನುವುದಾಗಿ ನೆಟ್ಟಿಗರು ಪ್ರತಿಯೊಬ್ಬರು ಕೂಡ ರಾಧಿಕಾ ಮರ್ಚೆಂಟ್ ರವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಅಂಬಾನಿ ಮನೆತನದ ಸೊಸೆ, ಮದುವೆಗೂ ಮುಂಚೆನೇ ಮನೆತನದ ಗೌರವ ಹಾಗೂ ಪ್ರತಿಷ್ಠೆಯನ್ನು ಯಾವ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕು ಎನ್ನುವುದನ್ನ ಕಲಿತ ಹಾಗಿದೆ ಅನ್ನುವುದಾಗಿ ಪ್ರತಿಯೊಬ್ಬರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ನೋಡಿರುವಂತಹ ಎಲ್ಲರೂ ಕೂಡ ನಿಮ್ಮ ಮುಖದಲ್ಲಿರುವ ಸೌಂದರ್ಯ ಅಲ್ಲ ನಿಮ್ಮ ಮನಸ್ಸಿನ ಈ ಸೌಂದರ್ಯ ನಿಮ್ಮನ್ನು ಎಲ್ಲರೂ ಮೆಚ್ಚುವ ಹಾಗೆ ಮಾಡುತ್ತಿದೆ ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದಿನ್ನು ಕೇವಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಆಗಿದ್ದು ಮದುವೆ ಜುಲೈ ತಿಂಗಳಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ. ಬಿಲ್ ಗೇಟ್ಸ್, ಮಾರ್ಕ್ ಝುಕರ್ಬರ್ಗ್ ಅವರಿಂದ ಹಿಡಿದು ಪ್ರಪಂಚದ ಶ್ರೀಮಂತರು ಹಾಗೂ ಖ್ಯಾತ ಸೆಲೆಬ್ರಿಟಿಗಳು ಕೂಡ ಈ ಮದುವೆಗೆ ಆಗಮಿಸಿದ್ದಾರೆ.

Comments are closed.