Kannada serial: ಬಯಲಾಯ್ತು ಬೂಧಿ ಮುಚ್ಚಿದ ಕೆಂಡದಂತಿದ್ದ ಸತ್ಯ; ಪಾಪದ್ ಹುಡ್ಗ ರಾಜೇಶ್ ಸಾವು ಸಾಧನಾ ಕೈಯಿಂದ!

Kannada serial: ನಮಸ್ಕಾರ ಸ್ನೇಹಿತರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವಂತಹ ಕೆಂಡಸಂಪಿಗೆ ಧಾರವಾಹಿ ದಿನೇದಿನೇ ತನ್ನ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತಿದೆ ಎಂದು ಹೇಳಬಹುದಾಗಿದೆ. ರಾಜೇಶನ ಮ-ರ್ಡರ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಕಂಡುಬಂದಿದ್ದು ಸಾಧನ ವಿರುದ್ಧ ಈ ಪ್ರಕರಣದಲ್ಲಿ ವಿಜಿಯಮ್ಮನ ಬಳಿ ಬಲವಾದ ಸಾಕ್ಷ್ಯಾಧಾರ ದೊರೆತಿದ್ದು ಅದನ್ನ ತೀರ್ಥಂಕರ್ ಗೆ ನೀಡುವುದಕ್ಕೆ ತಯಾರಾಗಿದ್ದಾಳೆ. ಈಗ ಅದನ್ನ ತೀರ್ಥಂಕರ್ ಗೆ ಆಕೆ ಕೊಡ್ತಾಳ ಅಥವಾ ಏನಾಗುತ್ತೆ ಅನ್ನೋದೇ ಧಾರವಾಹಿಯ ಕುತೂಹಲಕರ ವಿಚಾರವಾಗಿದೆ ಅನ್ನಬಹುದಾಗಿದೆ.

ತೀರ್ಥಂಕರ್ ಪ್ರತಿಭಟನೆ ಮಾಡಬೇಕು ಎನ್ನುವುದಾಗಿ ನಿರ್ಧರಿಸಿದ್ದ ಸಂದರ್ಭದಲ್ಲಿ ರಾಜೇಶ್ ತಾನು ನೀರನ್ನು ಪೆಟ್ರೋಲ್ ಅಂತೆ ಸುರಿದುಕೊಂಡು ಬೆಂ-ಕಿ ಹಚ್ಚಿಕೊಳ್ಳುತ್ತೇನೆ ಎನ್ನುವ ರೀತಿಯಲ್ಲಿ ನಾಟಕ ಮಾಡಲು ಹೊರಟಿದ್ದ. ಈ ಉಪಾಯ ಸಾಧನಾಗೆ ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಆತನ ವಿರೋಧಿಗಳ ಜೊತೆಗೆ ಸೇರಿ ಸಾಧನ ಆತನನ್ನು ಮುಗಿಸುವಂತಹ ಉಪಾಯವನ್ನು ಹೂಡುತ್ತಾಳೆ. ಕಾಶಿಗೆ ರಾಜೇಶ್ ನನ್ನು ಮುಗಿಸುವಂತಹ ಸುಪಾರಿ ನೀಡುತ್ತಾಳೆ.

ನೀರಿನ ಬದಲಾಗಿ ಪೆಟ್ರೋಲ್ ನಾನಿಡುತ್ತೇನೆ ಆತನನ್ನು ಮುಗಿಸುವ ಜವಾಬ್ದಾರಿ ನಿನ್ನದು ಅನ್ನೋದಾಗಿ ಸಾಧನ ಕಾಶಿ ಜೊತೆಗೆ ಡೀಲ್ ಒಪ್ಪಂದ ಮಾಡಿಕೊಂಡಿದ್ದಳು. ಇದೇ ಕಾರಣಕ್ಕಾಗಿ ಸಾಧನ ಕಾಶಿ ಮತ್ತು ವಿಜಯಮ್ಮನಿಗೆ 25 ಲಕ್ಷ ರೂಪಾಯಿಗಳ ಹಣವನ್ನು ಕೂಡ ನೀಡಿದ್ಲು. ಈ ಸಂದರ್ಭದಲ್ಲಿ ಕಾಶಿ ಹಾಗೂ ವಿಜಿಯಮ್ಮ ಡೀಲ್ ಕೊಟ್ಟಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿದ್ರು ಹಾಗೂ ಅದನ್ನೇ ಈಗ ತೀರ್ಥಂಕರ್ ಗೆ ಕೊಡುವುದಕ್ಕೆ ಹೊರಟಿದ್ದಾರೆ.

ತಾನು ಮಾಡಿರುವಂತಹ ಈ ಕೆಲಸಕ್ಕೆ ಯಾವುದೇ ರೀತಿಯ ಸಾಕ್ಷಿ ಇಲ್ಲ ಅನ್ನೋದಾಗಿ ಸಾಧನ ಖುಷಿಯಾಗಿ ನೆಮ್ಮದಿಯಿಂದ ಇದ್ಲು ಆದ್ರೆ, ಈಗ ಆ ವಿಡಿಯೋ ವಿಜಿಯಮ್ಮನ ಬಳಿ ಇದೆ ಅನ್ನುವುದಾಗಿ ತಿಳಿದು ಕಾಶಿಗೆ ಆ ಸಾಕ್ಷಿಯನ್ನು ಮುಗಿಸೋಕೆ ಆದೇಶ ನೀಡಿದ್ದಾಳೆ. ತೀರ್ಥಂಕರ್ ಗೆ ವಿಡಿಯೋಸಾಕ್ಷಿಯನ್ನು ನೀಡಬೇಕು ಅನ್ನೋದು ವಿಜಿಯಮ್ಮ ಓಡೋಡಿ ಬರ್ತಾ ಇದ್ದಾಳೆ ನಿಜ ಆದ್ರೆ ಆದರೆ ಅದನ್ನ ತೀರ್ಥಂಕರಿಗೆ ಆಕೆಗೆ ತಲುಪಿಸುವುದಕ್ಕೆ ಸಾಧ್ಯವಾಗುತ್ತಾ, ಇಲ್ಲ ಅದಕ್ಕಿಂತ ಮುಂಚೆನೇ ಆಕೆಯ ಪ್ರಾಣಕ್ಕೆ ಅಪಾಯ ಬರುತ್ತೋ ಅನ್ನೋದೇ ಈಗ ಪ್ರತಿಯೊಬ್ಬರೂ ಕಾತರದಿಂದ ಕಾಯುತ್ತಿರುವಂತಹ ಸನ್ನಿವೇಶ.

ಸದ್ಯದ ಮಟ್ಟಿಗೆ ಕೆಂಡಸಂಪಿಗೆ ಧಾರವಾಹಿ ನೋಡುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಅನ್ನೋದಾಗಿ ಕುತೂಹಲ ಭರಿತರಾಗಿ ಈ ದೃಶ್ಯಕ್ಕಾಗಿ ಕಾಯುತ್ತಿದ್ದಾರೆ. ಯಾಕೆಂದ್ರೆ ವಿಜಿಯಮ್ಮ ತೀರ್ಥಂಕರ್ ಗೆ ಈ ವಿಡಿಯೋ ಸಾಕ್ಷ್ಯವನ್ನು ನೀಡಿದರೆ ಸಾಧನ ಕಥೆ ಮುಂದೆ ಏನಾಗುತ್ತೆ ಅನ್ನೋದು ಕೂಡ ಮತ್ತೊಂದು ಕುತೂಹಲಕರ ವಿಚಾರ. ದಿನೇ ದಿನೇ ಇದೇ ಕಾರಣದಿಂದಾಗಿ ಕೆಂಡಸಂಪಿಗೆ ಧಾರವಾಹಿಯ ಪ್ರೇಕ್ಷಕರಿಗೆ ಇದೊಂದು ಸನ್ನಿವೇಶವನ್ನು ನೋಡುವಂತಹ ಕುತೂಹಲ ಇಮ್ಮಡಿಯಾಗುತ್ತಿದೆ. ಈ ರೀತಿಯ ಸಸ್ಪೆನ್ಸ್ ಹಾಗೂ ಕ್ವಾಲಿಟಿ ಕಂಟೆಂಟ್ ಮೂಲಕವೇ ಕನ್ನಡದ ಕಿರುತೆರೆಯ ಧಾರವಾಹಿಗಳ ಮೇಲೆ ಪ್ರೇಕ್ಷಕರ ಇಂಟರೆಸ್ಟ್ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಬಹುದಾಗಿದೆ.

Comments are closed.