Anant Ambani: 100 ರೂಪಾಯಿ ಮುಯಿ ಕೊಟ್ಟ ಅಜ್ಜಿ- ಇದನ್ನು ನೋಡಿ ಅಂಬಾನಿ ಮಗ ಮಾಡಿದ್ದೇನು ಗೊತ್ತೇ? ಕ್ಯಾಮೆರಾ ಹಿಂದೆ ನಡೆದದ್ದು ಏನು ಗೊತ್ತೇ?

Anant Ambani: ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗುಜರಾತಿನ ಜಾಮ್ ನಗರದಲ್ಲಿ ಅಂಬಾನಿ ಕುಟುಂಬದ ಸಂಭ್ರಮದ ಸಮಾರಂಭ ನಡೆದಿದೆ‌. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರವರ ಮದುವೆಯ ಪೂರ್ವಭಾವಿ ಕಾರ್ಯಕ್ರಮ ಮೂರು ದಿನಗಳ ವರೆಗೆ ಇಲ್ಲಿ ಅದ್ದೂರಿಯಾಗಿ ನಡೆದಿದ್ದು ಸರಿಸುಮಾರು ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ನಡೆದಿರುವಂತಹ ಸಾಕಷ್ಟು ಘಟನೆಗಳು ಕ್ಯಾಮರಾ ಕಣ್ಣಿನಲ್ಲಿ ಕಾಣಿಸಿಕೊಂಡಿದ್ದು ಇದರಿಂದಾಗಿ ಸಾಮಾನ್ಯ ಜನರು ಕೂಡ ಅಂಬಾನಿ ಕುಟುಂಬದ ಮೇಲೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ನಡೆದಿರುವಂತಹ ಒಂದು ಪ್ರತ್ಯೇಕ ಘಟನೆಯ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹೌದು ಕೋಟ್ಯಾಧೀಶ್ವರ ಆಗಿದ್ರು ಕೂಡ ಅನಂತ್ ಅಂಬಾನಿ ಒಬ್ಬ ವೃದ್ಧ ಮಹಿಳೆ ನೀಡಿರುವಂತಹ ನೂರು ರೂಪಾಯಿ ಮುಯ್ಯಿ ಅನ್ನು ಯಾವುದೇ ಅಹಂಕಾರವನ್ನು ತೋರ್ಪಡಿಸದೆ ಪಡೆದುಕೊಳ್ಳುವ ಮೂಲಕ ತಮ್ಮ ಸಿಂಪ್ಲಿಸಿಟಿಯನ್ನು ಮರೆದಿದ್ದಾರೆ ಎಂದು ಹೇಳಬಹುದಾಗಿದೆ. ಅಜ್ಜಿಯ ಆ ಉಡುಗೊರೆಯನ್ನು ಅನಂತ್ ಅಂಬಾನಿ ತೆಗೆದುಕೊಂಡಿರುವಂತಹ ದೃಶ್ಯ ಕೂಡ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಲಕ್ಷಾಂತರ ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವಂತಹ ಆಗರ್ಬ ಶ್ರೀಮಂತರು ಸೆಲೆಬ್ರಿಟಿಗಳು ಆಗಮಿಸಿದ್ದರು.

ಅವರು ತಾವು ಕೋಟ್ಯಂತರ ರೂಪಾಯಿ ಬೆಲೆಬಾಳುವಂತಹ ಉಡುಗೊರೆಗಳನ್ನು ಕೂಡ ನವಜೋಡಿಗಳಿಗೆ ನೀಡಿದ್ದಾರೆ. ಅದರ ನಡುವೆ ಈಗ ಈ ಅಜ್ಜಿ ನೀಡಿರುವಂತಹ ನೂರು ರೂಪಾಯಿಗಳನ್ನು ಸ್ವೀಕರಿಸಿರುವಂತಹ ಅನಂತ್ ಅಂಬಾನಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಕೇವಲ ಹಣದಿಂದ ಮಾತ್ರವಲ್ಲ ಮನಸ್ಸಿನಿಂದಲೂ ಕೂಡ ಈ ಹುಡುಗ ಶ್ರೀಮಂತ ಎನ್ನುವುದಾಗಿ ನೆಟ್ಟಿಗರು ಕಾಮೆಂಟ್ ಮಾಡಲು ಕಾರಣವಾಗಿದೆ ಎಂದು ಹೇಳಬಹುದಾಗಿದೆ.

ಮೊದಲಿಗೆ ರಾಧಿಕಾ ಮರ್ಚೆಂಟ್ ಅವರಿಗೆ ಅಜ್ಜಿ ಹೂಗುಚ್ಛವನ್ನು ನೀಡಿದ ನಂತರ ಪಕ್ಕದಲ್ಲಿ ನಿಂತಿದ್ದ ಅವರ ಭಾವಿಪತಿ ಆಗಿರುವಂತಹ ಅನಂತ್ ಅಂಬಾನಿ ಅವರಿಗೆ ಅಜ್ಜಿ ಸಂಪ್ರದಾಯದ ಪ್ರಕಾರ 100 ರೂಪಾಯಿ ನೀಡಿದ್ದು ಈ ಸಂದರ್ಭದಲ್ಲಿ ಯಾವುದೇ ಹಮ್ಮು ಬಿಮ್ಮನ್ನು ತೋರಿಸದೆ ಅನಂತ್ ಆ ಹಣವನ್ನು ಸ್ವೀಕರಿಸಿದ್ದಾರೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವಂತಹ ಶಾರುಖ್ ಖಾನ್ 5 ಕೋಟಿ ರೂಪಾಯಿ ಬೆಲೆಬಾಳುವಂತಹ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವಂತಹ ಮಾಹಿತಿ ಕೂಡ ಲಭ್ಯವಾಗಿದೆ.

ಇನ್ನು ದೀಪಿಕಾ ಮತ್ತು ರಣವೀರ್ ಸಿಂಗ್ ದಂಪತಿಗಳು ಒಂದು ಕೋಟಿ ರೂಪಾಯಿ ಬೆಲೆಬಾಳುವಂತಹ ವಜ್ರದ ರೋಲೆಕ್ಸ್ ವಾಚ್ ಅನ್ನು ನೀಡಿದ್ದಾರೆ. ಇದೇ ರೀತಿಲಿ ಮದುವೆಯಲ್ಲಿ ಕಾಣಿಸಿಕೊಂಡ ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಬೇರೆ ಬೇರೆ ರೀತಿಯಲ್ಲಿ ಬೆಲೆಬಾಳುವಂತಹ ಉಡುಗೊರೆಗಳನ್ನು ನೀಡಿದ್ದಾರೆ.

ಇದು ಕೇವಲ ಮದುವೆಯ ಪೂರ್ವಭಾವಿ ಕಾರ್ಯಕ್ರಮವಾಗಿದ್ದು ಮದುವೆ ಜುಲೈ ತಿಂಗಳಿನಲ್ಲಿ ನಡೆಯಲಿದೆ. ಕೇವಲ ಮದುವೆಯ ಪೂರ್ವಭಾವಿ ಕಾರ್ಯಕ್ರಮಕ್ಕೆ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವಂತಹ ಅಂಬಾನಿ ಕುಟುಂಬ ಮದುವೆಗೆ ಇನ್ನಷ್ಟು ಖರ್ಚು ಮಾಡಬಹುದು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.

ಕೇವಲ ಹಣವನ್ನು ಐಷಾರಾಮಿ ಕಾರ್ಯಕ್ರಮಗಳಿಗೆ ಖರ್ಚು ಮಾಡುವುದಕ್ಕೆ ಮಾತ್ರವಲ್ಲದೇ, ರಿಲಯನ್ಸ್ ಟ್ರಸ್ಟ್ ಮೂಲಕ ಬಡಜನರ ಉದ್ದಾರಕ್ಕಾಗಿ ಕೂಡ ಅಂಬಾನಿ ಕುಟುಂಬ ಕಳೆದ ಸಾಕಷ್ಟು ವರ್ಷಗಳಿಂದ ಹಣವನ್ನು ಕೋಟ್ಯಾಂತರ ರೂಪಾಯಿ ಲೆಕ್ಕಾಚಾರದಲ್ಲಿ ಖರ್ಚು ಮಾಡಿಕೊಂಡು ಬರುತ್ತಿದೆ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗಿರುತ್ತದೆ.

Comments are closed.