Pension Scheme: ಗಂಡ ಹೆಂಡತಿ ಇಬ್ಬರೂ ಕುಳಿತಲ್ಲೇ ಪ್ರತಿ ತಿಂಗಳು ರೂ. 10,000 ಪಡೆಯಬಹುದು; ಇದಕ್ಕೆ ಸರ್ಕಾರವೇ ಗ್ಯಾರಂಟಿ!

Pension Scheme: ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು , ಅವುಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ತಿಂಗಳಿಗೆ 10,000 ಪಡೆಯುವಂತಹ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ದುಡಿಯುವ ಕೈಗಳಿಗೆ ಶಕ್ತಿ ಇಲ್ಲದೆ ಇರುವಂತಹ ವೃದ್ಧಾಪ್ಯದ ಸಂದರ್ಭದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ವೃದ್ಧಾಪ್ಯದಲ್ಲಿ ಪ್ರತಿ ತಿಂಗಳಿಗೆ 10,000 ನೀಡುವಂತಹ ಯೋಜನೆಯನ್ನು ಅಟಲ್ ಪೆನ್ಷನ್ ಯೋಜನೆ (Atal Pension Scheme) ಎಂಬುದಾಗಿ ಕರೆಯಲಾಗುತ್ತದೆ. ಲೇಖನದಲ್ಲಿ ಮಾಡೋಣ.

ಈ ಯೋಜನೆಯನ್ನು ಪ್ರಾರಂಭಿಸಲು ನಿಮ್ಮ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕು. ಗಂಡ ಹೆಂಡತಿ ಇಬ್ಬರೂ ಕೂಡ ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡಿಸಿಕೊಳ್ಳಬಹುದಾಗಿದೆ. ಇಬ್ಬರಿಗೂ 60 ವರ್ಷ ಆದ ನಂತರ ತಲ ಐದು ಸಾವಿರ ರೂಪಾಯಿಗಳಂತೆ ಪ್ರತಿ ತಿಂಗಳಿಗೆ ಇಬ್ಬರಿಗೂ ಕೂಡ ಒಟ್ಟಾರೆಯಾಗಿ 10,000 ಪಿಂಚಣಿ ದೊರಕುತ್ತದೆ. 60 ವರ್ಷಗಳ ನಂತರ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 5000 ವರೆಗೂ ಕೂಡ ಪಿಂಚಣಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಎರಡು ಕೋಟಿಗಿಂತಲೂ ಹೆಚ್ಚಿನ ಜನರು ಅಟಲ್ ಪೆನ್ಷನ್ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ನೋಂದಾವಣೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಇಲ್ಲವೇ ಆರು ತಿಂಗಳಿಗೆ ಒಮ್ಮೆ ಎನ್ನುವ ರೀತಿಯಲ್ಲಿ ನೀವು ಕಂತನ್ನು ಕಟ್ಟಬಹುದಾಗಿದೆ. ಎಷ್ಟು ಕಡಿಮೆ ಹಣವನ್ನು ಕಟ್ಟಬಹುದು ಎಂದರೆ 42 ರಿಂದ 210ಗಳನ್ನು ಕೂಡ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಕಡಿಮೆ ಹೂಡಿಕೆ ಮೂಲಕವೂ ಉತ್ತಮ ಲಾಭವನ್ನು ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ. 18ನೇ ವಯಸ್ಸಿಗೆ ನೀವು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದನ್ನು ಪ್ರಾರಂಭ ಮಾಡಿದರೆ 20 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕಾಗಿರುತ್ತದೆ. ನೀವು ಎಷ್ಟು ಹಣವನ್ನು ಕಟ್ಟಿದ್ದೀರ ಅದರ ಮೇಲೆ ಲೆಕ್ಕಾಚಾರ ಮಾಡಿ ನಿಮಗೆ ಹಣವನ್ನು ನೀಡಲಾಗುತ್ತದೆ.

ಎಲ್ಲ ನ್ಯಾಷನಲ್ ಬ್ಯಾಂಕ್ ಗಳಲ್ಲಿ ನೀವು ಅಟಲ್ ಪೆನ್ಷನ್ ಯೋಜನೆಯನ್ನು ಪ್ರಾರಂಭ ಮಾಡಬಹುದಾಗಿದ್ದು ಪೋಸ್ಟ್ ಆಫೀಸ್ನಲ್ಲಿ ಕೂಡ ಈ ಯೋಜನೆಯನ್ನು ಪ್ರಾರಂಭಿಸಬಹುದಾದ ಅವಕಾಶವಿದೆ. ಸರಿಯಾದ ರೀತಿಯಲ್ಲಿ ಇದರ ಅರ್ಜಿ ಫಾರ್ಮ್ ಅನ್ನು ತುಂಬಿಸಿ ಅರ್ಜಿ ಸಲ್ಲಿಸಿದರೆ ಸಾಕು ಇದರ ಪ್ರಕ್ರಿಯ ಪ್ರಾರಂಭವಾಗುತ್ತದೆ. 60 ವರ್ಷ ದಾಟಿದ ನಂತರ ನಿಮಗೆ ಪ್ರತಿ ತಿಂಗಳಿಗೆ 1000 ರೂಪಾಯಿ ಹಣ ಬರಬೇಕು ಅಂದ್ರೆ ನೀವು ಪ್ರತಿ ತಿಂಗಳಿಗೆ 42 ರೂಪಾಯಿಗಳನ್ನು ಕಟ್ಟಬೇಕು. ಪ್ರತಿ ತಿಂಗಳಿಗೆ ನೀವು 210ಗಳನ್ನು ಕಟ್ಟಿಕೊಂಡು ಹೋದರೆ 60 ವರ್ಷಗಳ ನಂತರ ಪ್ರತಿ ತಿಂಗಳಿಗೆ 5,000 ಸಿಗುತ್ತದೆ. ಇನ್ನು ಗಂಡ ಹೆಂಡತಿ ಇಬ್ಬರೂ ಕೂಡ ಜಂಟಿಯಾಗಿ ಯೋಜನೆಯಲ್ಲೇ ಹೂಡಿಕೆ ಮಾಡಬಹುದಾಗಿದೆ. ವೃದ್ಧಾಪ್ಯದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಮಾಡುವಂತಹ ಕೆಲಸವನ್ನು ಈ ಯೋಜನೆ ಮಾಡುತ್ತದೆ.

Comments are closed.