Rajyoga: ಮೀನ ರಾಶಿಯಲ್ಲಿ ನಡೆಯಲಿದೆ ಬುಧ ಹಾಗೂ ಸೂರ್ಯರ ಸಂಯೋಗ. ಬುಧಾದಿತ್ಯ ರಾಜಯೋಗದಲ್ಲಿ ಲಾಭ ಪಡೆಯುವ ರಾಶಿಗಳು ಯಾವುವು ಗೊತ್ತಾ?

Rajyoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಮಾರ್ಚ್ 15ರಂದು ಮೀನ ರಾಶಿಗೆ ಗ್ರಹಗಳ ರಾಜ ಎಂದು ಕರೆಯಲ್ಪಡುವಂತಹ ಸೂರ್ಯ ಮೀನ ರಾಶಿಗೆ ಕಾಲಿಡಲಿದ್ದಾನೆ. ಇನ್ನು ಈ ಮೀನ ರಾಶಿಯಲ್ಲಿ ಆಗಲೇ ಬುಧ ಕೂಡ ವಿರಾಜಮಾನ ಆಗಿದ್ದಾನೆ. ಇವರಿಬ್ಬರ ಸಂಯೋಗದಿಂದಾಗಿ ಮಾರ್ಚ್ 15 ರಿಂದ ಬುಧಾದಿತ್ಯ ರಾಜಯೋಗ ಪ್ರಾರಂಭವಾಗಲಿದ್ದು ಇದರಿಂದಾಗಿ ನಾಲ್ಕು ರಾಶಿಯವರಿಗೆ ವಿಶೇಷವಾದ ಅದೃಷ್ಟ ಕೂಡಿ ಬರಲಿದ್ದು ಆ ಅದೃಷ್ಟವಂತ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 ಕರ್ಕ ರಾಶಿ (Cancer)

ಈ ವಿಶೇಷವಾದ ರಾಜಯೋಗದಿಂದಾಗಿ ಕರ್ಕ ರಾಶಿಯವರಿಗೆ ಕೆಲಸದ ಕ್ಷೇತ್ರದಲ್ಲಿ ಅಂದುಕೊಂಡಂತಹ ರೀತಿಯಲ್ಲಿ ಕೆಲಸ ಸಿಗಲಿದೆ. ಸಾಕಷ್ಟು ಸಮಯಗಳಿಂದ ಇವರು ಅನುಭವಿಸುತ್ತಿರುವ ಅಂತಹ ಹಣಕಾಸಿನ ಸಮಸ್ಯೆ ನಿವಾರಣೆ ಆಗಲಿದ್ದು ಹೊಸ ಹೊಸ ಆದಾಯದ ಮೂಲಗಳು ಇವರ ಜೀವನದಲ್ಲಿ ಹರಿದು ಬರಲಿದೆ. ಹಣದ ವಿಚಾರದಲ್ಲಿ ಕರ್ಕ ರಾಶಿಯವರು ಯಾವುದೇ ರೀತಿಯ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಅನುಭವಿಸಲು ಸಾಧ್ಯವಿಲ್ಲ.

 ಕನ್ಯಾ ರಾಶಿ (Virgo)

ವ್ಯಾಪಾರ ಮಾಡುವಂತಹ ಕನ್ಯ ರಾಶಿಯವರಿಗೆ ಈ ವಿಶೇಷವಾದ ರಾಜಯೋಗ ವ್ಯಾಪಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ತಂದು ಕೊಡಲಿದೆ. ಒಂದು ವೇಳೆ ನೀವು ಪರಸ್ಪರ ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಸಿಗದೇ ಕಾಯುತ್ತಿದ್ದರೆ ಈ ಸಂದರ್ಭದಲ್ಲಿ ಮನೆಯವರು ಕೂಡ ನಿಮ್ಮ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಿ ನಿಮ್ಮಿಬ್ಬರ ಮದುವೆ ಆಗುವಂತಹ ಸಾಧ್ಯತೆ ದಟ್ಟವಾಗಿದೆ.

 ಮಕರ ರಾಶಿ (Capricorn)

ಮಕರ ರಾಶಿಯವರ ವ್ಯಾಪಾರ ಹಾಗೂ ವ್ಯವಹಾರ ಉದ್ಯಮಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅಥವಾ ಶತ್ರುಗಳ ಕಾಟ ಇದ್ದರೆ ಈ ಸಂದರ್ಭದಲ್ಲಿ ಸೂರ್ಯ ಹಾಗೂ ಬುಧನ ಸಂಯೋಗದಿಂದ ಎಲ್ಲವೂ ನಿವಾರಣೆ ಆಗಲಿದೆ. ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆದುಕೊಳ್ಳಲಿದ್ದೀರಿ. ಹಣಕಾಸಿನ ಸಮಸ್ಯೆಗಳು ಕೂಡ ಈ ಸಂದರ್ಭದಲ್ಲಿ ದೂರ ಆಗಲಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

 ಮೀನ ರಾಶಿ (Pisces)

ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಈ ವಿಶೇಷವಾದ ರಾಜಯೋಗ ನಿರ್ಮಾಣ ಆಗ್ತಿರೋದು ಮೀನ ರಾಶಿಯಲ್ಲಿ. ಕೆಲಸ ಮಾಡುತ್ತಿರುವವರಿಗೆ ತಾವು ಮಾಡುತ್ತಿರುವಂತಹ ಕೆಲಸದಿಂದಾಗಿ ಸಮಾಜದಲ್ಲಿ ಹೆಚ್ಚಿನ ಗೌರವ ಹಾಗೂ ಪ್ರೀತಿಯನ್ನು ಪಡೆದುಕೊಳ್ಳುವಂತಹ ಅವಕಾಶ ನಿರ್ಮಾಣವಾಗಲಿದೆ. ಸಾಕಷ್ಟು ಸಮಯಗಳಿಂದ ಮದುವೆ ಆಗದೆ ಉಳಿದುಕೊಂಡಿರುವವರಿಗೆ ಮದುವೆ ಆಗುವುದಕ್ಕೆ ಕಂಕಣ ಭಾಗ್ಯ ಹುಡುಕಿಕೊಂಡು ಬರಲಿದೆ. ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳಿಗೂ ನಿಮ್ಮದೇ ಆದ ರೀತಿಯಲ್ಲಿ ಪರಿಹಾರವನ್ನು ಹುಡುಕಿಕೊಳ್ಳುವಂತಹ ಪರಿಸ್ಥಿತಿ ಕೂಡ ಇದೆ. ನಿಮ್ಮ ಕಷ್ಟದ ಸಂದರ್ಭದಲ್ಲಿ ನಿಮ್ಮ ಮನೆಯವರ ಹಾಗೂ ಸ್ನೇಹಿತರ ಸಾಥ್ ಕೂಡ ಸಿಗಲಿದೆ.

ಇದೇ ನಾಲ್ಕು ರಾಶಿಯವರು ಸ್ನೇಹಿತರೇ, ಮೀನ ರಾಶಿಯಲ್ಲಿ ಬುಧ ಹಾಗೂ ಸೂರ್ಯರ ಸಂಯೋಗದಿಂದಾಗಿ ಅದೃಷ್ಟವನ್ನು ಸಂಪಾದನೆ ಮಾಡಲಿರುವಂತಹ ಅದೃಷ್ಟವಂತರು. ನಿಮ್ಮ ರಾಶಿ ಈ ಲಿಸ್ಟ್ ನಲ್ಲಿ ಇಲ್ಲದೆ ಹೋದಲ್ಲಿ ಪ್ರತಿದಿನ ಸೂರ್ಯ ನಮಸ್ಕಾರ ಹಾಗೂ ಸೂರ್ಯನಿಗೆ ನೀರನ್ನು ಅರ್ಘ್ಯ ರೂಪದಲ್ಲಿ ನೀಡುವ ಮೂಲಕ ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

Comments are closed.