Vastu Tips: ನೀವು ಎಂದ್ದರೂ ಜೀವನದಲ್ಲಿ ಈ ತಪ್ಪನ್ನು ಮಾಡಿದರೆ  ಲಕ್ಷ್ಮಿ ದೇವಿ ತಪ್ಪಿಯೂ ನಿಮ್ಮನ್ನು ತಿರುಗಿಯೂ ನೋಡುವುದಿಲ್ಲ ನೆನಪಿರಲಿ!

Vastu Tips: ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಹಣ ಅಂದರೆ ಲಕ್ಷ್ಮಿಯ (Goddess Lakshmi) ಕೃಪೆ ಇರಬೇಕು ಎಂಬುದಾಗಿ ಪ್ರತಿದಿನ ಎದ್ದು ತಕ್ಷಣ ಬೇಡಿಕೊಳ್ಳುತ್ತಾರೆ. ಹಣ ಎಂದರೆ ಯಾರಿಗೆ ತಾನೇ ಬೇಡ ಹೇಳಿ. ಪ್ರತಿಯೊಬ್ಬರು ಕೂಡ ಲಕ್ಷ್ಮಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರಲಿ ಎಂಬುದಾಗಿ ದಿನನಿತ್ಯದ ಪೂಜೆಯಲ್ಲಿ ಬೇಡಿಕೊಳ್ಳುತ್ತಾರೆ. ಲಕ್ಷ್ಮಿಯ ಕೃಪಾಕಟಾಕ್ಷ ಇದ್ರೆ ಮಾತ್ರ ಜೀವನದಲ್ಲಿ ಪ್ರತಿಯೊಬ್ಬರು ಬಳಿ ಹಣದ ಹರಿವು ಹರಿದು ಬರುತ್ತದೆ. ಇಲ್ಲವಾದರೆ ನೀವು ಕೋಟ್ಯಾಂತರ ರೂಪಾಯಿ ಹೊಂದಿರುವಂತಹ ರಾಜ ಆಗಿದ್ದರು ಕೂಡ ಲಕ್ಷ್ಮಿಯ ಕೋಪದಿಂದಾಗಿ ಭಿಕ್ಷುಕ ಆಗುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ.

 ಹೀಗಾಗಿ ಲಕ್ಷ್ಮಿ ದೇವಿಗೆ ಕೋಪ ಬರುವಂತಹ ಕೆಲಸಗಳನ್ನು ಯಾವತ್ತೂ ಕೂಡ ಮಾಡಬಾರದು. ನಾವು ಕೆಲವೊಮ್ಮೆ ನಮಗೆ ಗೊತ್ತಿರದೆ ಮಾಡುವಂತಹ ಕೆಲಸದಿಂದಾಗಿ ಕೂಡ ಲಕ್ಷ್ಮಿದೇವಿ ಕೋಪದಿಂದ ಆ ಮನೆಯನ್ನು ಬಿಟ್ಟು ಹೊರಗೆ ಹೋಗುತ್ತಾಳೆ ಎಂಬುದನ್ನು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ. ಹಾಗಿದ್ರೆ ಬನ್ನಿ ಆ ಕಾರಣಗಳು ಏನು ಅಥವಾ ಆ ಕೆಲಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

1. ಯಾವತ್ತೂ ಕೂಡ ಅಸಹಾಯಕರಿಗೆ ಅಥವಾ ಭಿಕ್ಷುಕರಿಗೆ ಹಣವನ್ನು ನೀಡುವ ಸಂದರ್ಭದಲ್ಲಿ ನೀವು ಹಣವನ್ನು ಬಿಸಾಡುವ ಅಥವಾ ಆ ಹಣಕ್ಕೆ ಅವಮರ್ಯಾದೆ ಮಾಡುವಂತಹ ಕೆಲಸವನ್ನು ಯಾವತ್ತೂ ಕೂಡ ಮಾಡಬೇಡಿ. ನಿರ್ಗತಿಕರಿಗೆ ಹಣವನ್ನು ನೀಡುವಾಗ ಮರ್ಯಾದೆಯಿಂದ ಹಣವನ್ನು ನೀಡಿ ಅದರಿಂದಾಗಿ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ. ಇಲ್ಲವಾದಲ್ಲಿ ಆಕೆ ಕೋಪಗೊಳ್ಳುತ್ತಾಳೆ.

2. ಇನ್ನೊಂದು ಕೆಟ್ಟ ಅಭ್ಯಾಸ ನಮ್ಮ ಜನರಲ್ಲಿದೆ. ಅದೇನೆಂದರೆ ಯಾವತ್ತೂ ಕೂಡ ನಾಲಿಗೆಯಲ್ಲಿರುವ ಎಂಜಲನ್ನು ಬಳಸಿಕೊಂಡು ಹಣವನ್ನು ಎಣಿಸುವಂತಹ ಕೆಲಸವನ್ನು ನಮ್ಮಲ್ಲಿ ಸಾಮಾನ್ಯವಾಗಿ ಜನರು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಅಭ್ಯಾಸವನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು ಯಾಕೆಂದರೆ, ಈ ರೀತಿ ನಾಲಿಗೆಯಲ್ಲಿ ಇರುವಂತಹ ಎಂಜಲನ್ನು ಲಕ್ಷ್ಮಿ ದೇವಿಯ ಪ್ರತೀಕವಾಗಿರುವಂತಹ ಹಣವನ್ನು ಎಣಿಸುವ ಸಂದರ್ಭದಲ್ಲಿ ಬಳಸಿಕೊಳ್ಳುವುದು ಲಕ್ಷ್ಮಿ ದೇವಿಗೆ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಂದು ವೇಳೆ ನೀವು ನೋಟುಗಳನ್ನು ಎಣಿಸುವಂತಹ ಅವಶ್ಯಕತೆ ಇದ್ದರೆ ಪೌಡರ್ ಗಳನ್ನು ಬಳಸಿ.

3. ಒಂದು ವೇಳೆ ನೀವು ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಕೆಲವೊಮ್ಮೆ ನಿಮಗೆ ಹಣ ಸಿಗಬಹುದು. ಯಾವತ್ತೂ ಕೂಡ ಹಣವನ್ನು ನೆಲಕ್ಕೆ ಬಿಸಾಡಬಾರದು ಒಂದು ವೇಳೆ ಆ ರೀತಿ ನೆಲಕ್ಕೆ ಬಿದ್ದಂತಹ ಹಣ ನಿಮಗೆ ಸಿಕ್ಕರೆ ಅದನ್ನು ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸಿ ನಂತರ ನಿಮ್ಮ ಜೇಬಿಗೆ ಇಟ್ಟುಕೊಳ್ಳಿ. ಆಗ ಲಕ್ಷ್ಮಿ ದೇವಿಗೆ ನೀವು ಮರ್ಯಾದೆ ಸಲ್ಲಿಸಿದಂತಾಗುತ್ತದೆ.

4. ಇನ್ನು ಹಣವನ್ನು ಎಲ್ಲೆಂದರಲ್ಲಿ ಇಡುವುದು ಕೂಡ ಲಕ್ಷ್ಮೀದೇವಿಗೆ ಅವಮರ್ಯಾದೆಯನ್ನು ನೀಡಿದಂತಾಗುತ್ತದೆ. ಕೆಲವರು ತಮ್ಮ ದಿಂಬಿನ ಕೆಳಗೆ ಇಲ್ಲವೇ ಹಾಸಿಗೆಯ ಕೆಳಗೆ ಹಣವನ್ನು ಇಟ್ಟುಕೊಳ್ಳುವುದು ಸರ್ವೇಸಾಮಾನ್ಯವಾಗಿರುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಈ ರೀತಿ ಹಣವನ್ನು ಇಟ್ಟುಕೊಳ್ಳುವುದು ಸರಿಯಲ್ಲ ಹಣವನ್ನು ಇಟ್ಟುಕೊಳ್ಳುವುದಕ್ಕೆ ಅದರದೇ ಆದಂತಹ ಕೆಲವೊಂದು ಜಾಗಗಳಿರುತ್ತವೆ, ಉದಾಹರಣೆಗೆ ಬೀರುವಿನಲ್ಲಿ ಹಣವನ್ನು ಸುರಕ್ಷಿತವಾಗಿ ಇರುವುದು ಸರಿಯಾದ ಮಾರ್ಗ ಆಗಿರುತ್ತದೆ.

5. ಯಾವತ್ತೂ ಕೂಡ ಆಹಾರವನ್ನು ಹಾಗೂ ಹಣವನ್ನು ಎರಡು ಕೂಡ ಒಂದೇ ಸ್ಥಳದಲ್ಲಿ ಜೊತೆಯಾಗಿ ಇಟ್ಟುಕೊಳ್ಳುವುದು ಕೂಡ ಲಕ್ಷ್ಮೀದೇವಿಗೆ ಅವಮರ್ಯಾದೆ ಮಾಡಿದಂತಾಗುತ್ತದೆ. ಎರಡನ್ನು ಕೂಡ ಒಟ್ಟಿಗೆ ಇಟ್ಟುಕೊಳ್ಳುವುದು ಸರಿಯಾದ ಕ್ರಮವಲ್ಲ ಹೀಗಾಗಿ ಒಂದು ವೇಳೆ ನೀವು ನಿಮ್ಮ ಹಣ ಇಡುವಂತಹ ವ್ಯಾನಿಟಿ ಬ್ಯಾಗ್ ನಲ್ಲಿ ಆಹಾರ ಪದಾರ್ಥಗಳನ್ನು ಕೂಡ ಇಟ್ಟುಕೊಂಡಿದ್ರೆ ಇನ್ಮುಂದೆ ಆ ಕೆಲಸವನ್ನು ಮಾಡೋದಕ್ಕೆ ಹೋಗಬೇಡಿ ಇದರಿಂದಾಗಿ ನಿಮಗೆ ಹಣದ ಕೊರತೆ ಮುಂದಿನ ದಿನಗಳಲ್ಲಿ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

Comments are closed.