Mahalakshmi Rajyoga: ಮಹಾಲಕ್ಷ್ಮಿ ಯೋಗ  ಈ ಮೂರು ರಾಶಿಯವರ ಜೀವನದಲ್ಲಿ ತರುವ ಬದಲಾವಣೆ ಅಂತಿಂಥದ್ದಲ್ಲ, ನೀವು ಮುಟ್ಟಿದ್ದೇಲ್ಲಾ ಚಿನ್ನ ಕಣ್ರೀ!

Mahalakshmi Rajyoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ಹಬ್ಬಕ್ಕಿಂತ ಮುಂಚೆ ಮಂಗಳ ಹಾಗೂ ಶುಕ್ರ ಸಂಯೋಜನೆ ಆಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದಾಗಿ ಸಾಕಷ್ಟು ಶುಭ ಫಲಿತಾಂಶಗಳು ಉಂಟಾಗಲಿವೆ. ಮಂಗಳನನ್ನು ಗ್ರಹಗಳ ಸೇನಾಧಿಪತಿ ಹಾಗೂ ಶುಕ್ರನನ್ನು ಶುಭ ಕಾರಕ ಎಂಬುದಾಗಿ ಪರಿಗಣಿಸಲಾಗುತ್ತದೆ. ಇವರಿಬ್ಬರ ಜೊತೆ ಸೇರಿದರೆ ಉಂಟಾಗುವಂತಹ ಮಹಾಲಕ್ಷ್ಮಿ ಯೋಗ ನಿಜಕ್ಕೂ ಕೂಡ ಪ್ರತಿಯೊಬ್ಬರ ಜೀವನದಲ್ಲಿ ಅದರಿಂದ ಸರ್ಕಾರಾತ್ಮಕ ಫಲಿತಾಂಶವನ್ನು ಪಡೆಯುವವರಿಗೆ ದೊಡ್ಡ ಮಟ್ಟದ ಲಾಭ ಸಿಗಲಿದೆ.

ಕುಂಭ ರಾಶಿಗೆ ಈಗಾಗಲೇ ಮಾರ್ಚ್ 7ರಂದು ಶುಭ ಕಾರಕ ಶುಕ್ರ ಗ್ರಹ ಪ್ರವೇಶಿಸಿದ್ದು ಮಾರ್ಚ್ 15 ರಂದು ಗ್ರಹಗಳ ಸೇನಾಧಿಪತಿ ಆಗಿರುವ ಮಂಗಳ ಕೂಡ ಕಾಲಿಡಲಿದ್ದಾನೆ. ಇದರಿಂದ ಉಂಟಾಗುವಂತಹ ಮಹಾಲಕ್ಷ್ಮಿ ಯೋಗದಿಂದಾಗಿ ಅದೃಷ್ಟವನ್ನು ಪಡೆಯಲಿರುವ ಆ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

 ಮೇಷ ರಾಶಿ (Aries)

ಮಹಾಲಕ್ಷ್ಮಿ ಯೋಗದಿಂದಾಗಿ ಮೇಷ ರಾಶಿಯವರಿಗೆ ತಮ್ಮ ಕೆಲಸದ ಕ್ಷೇತ್ರದಲ್ಲಿ ಸಾಕಷ್ಟು ಶುಭ ಫಲಿತಾಂಶಗಳನ್ನು ಪಡೆಯುವಂತಹ ಸಾಧ್ಯತೆ ಹೆಚ್ಚಾಗಿದೆ. ಆದಾಯ ಕೂಡ ಗಣನೀಯವಾಗಿ ಹೆಚ್ಚಳವಾಗಲಿದೆ. ಮಾಡುವಂತ ವ್ಯಾಪಾರದಲ್ಲಿ ಕೈ ತುಂಬಾ ಲಾಭವನ್ನು ಸಂಪಾದನೆ ಮಾಡಲಿದ್ದೀರಿ ಹಾಗೂ ಹೊಸ ಮನೆ ಹಾಗೂ ವಾಹನವನ್ನು ಖರೀದಿಸುವಂತಹ ಅವಕಾಶ ಕೂಡ ಮೇಷ ರಾಶಿಯವರದ್ದಾಗಲಿದೆ.

 ಮಿಥುನ ರಾಶಿ (Gemini)

ತಾಯಿ ಮಹಾಲಕ್ಷ್ಮಿಯ ವಿಶೇಷವಾದ ಆಶೀರ್ವಾದದಿಂದಾಗಿ ಮಿಥುನ ರಾಶಿಯವರ ಕೈತುಂಬ ಹಣದ ಸಂಪಾದನೆ ಆಗಲಿದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ರೀತಿಯಲ್ಲಿ ಯಶಸ್ಸನ್ನು ಮೀನ ರಾಶಿಯವರು ಪಡೆದುಕೊಳ್ಳಲಿದ್ದಾರೆ. ಒಂದು ವೇಳೆ ಮಿಥುನ ರಾಶಿಯವರು ಈ ಸಮಯದಲ್ಲಿ ಹೊಸ ಕೆಲಸವನ್ನು ಅಥವಾ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಉತ್ತಮವಾದ ಶುಭ ಸಮಯವಾಗಿದೆ. ಮಿಥುನ ರಾಶಿಯವರು ತಮ್ಮ ಕೆಲಸದಿಂದಾಗಿ ಬೇರೆಯವರ ಜೀವನದಲ್ಲಿ ಕೂಡ ಸಕಾರಾತ್ಮಕ ಬದಲಾವಣೆಯನ್ನು ತರುವುದಕ್ಕೆ ಮುಖ್ಯ ಕಾರಣೀಕರ್ತರಾಗಲಿದ್ದಾರೆ.

 ವೃಶ್ಚಿಕ ರಾಶಿ (Scorpion)

ವೃಶ್ಚಿಕ ರಾಶಿಯವರು ಯಾವುದೇ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು ಕೂಡ ಅದರ ಲಾಭ ಅವರಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ತಾವು ಮಾಡುವಂತಹ ಕೆಲಸದಲ್ಲಿ ಪ್ರಮೋಷನ್ ಜೊತೆಗೆ ಸಂಬಳದ ಹೆಚ್ಚಳವನ್ನು ಕೂಡ ಪಡೆಯಲಿದ್ದಾರೆ. ವ್ಯಾಪಾರದಲ್ಲಿ ಕೂಡ ಅನೇಕ ಮಟ್ಟದ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ವೃಶ್ಚಿಕ ರಾಶಿಯವರು ಹೊಂದಿದ್ದಾರೆ. ಯಾವುದೇ ಕಡೆಗಳಲ್ಲಿ ನೀವು ಏನೇ ಕೆಲಸ ಮಾಡಿದರೂ ಕೂಡ ಅದಕ್ಕೊಂದು ಅರ್ಥ ಇರುತ್ತದೆ ಹಾಗೂ ಅದರಿಂದ ನೀವು ಲಾಭ ಸಂಪಾದನೆಯನ್ನು ಮಾಡಲಿದ್ದೀರಿ.

ಸಾಕಷ್ಟು ದಿನಗಳಿಂದ ಅರ್ಧಕ್ಕೆ ನಿಂತಿರುವಂತಹ ನಿಮ್ಮ ಕೆಲಸಗಳು ಕೂಡ ಪೂರ್ಣವಾಗಿ ಸಿದ್ಧವಾಗಲಿವೆ. ಸಾಕಷ್ಟು ಸಮಯಗಳಿಂದ ನೀವು ಖರೀದಿಸಬೇಕು ಎನ್ನುವಂತಹ ಆಸ್ತಿ ಮನೆ ಹಾಗೂ ವಾಹನಗಳನ್ನು ಖರೀದಿ ಮಾಡುವಂತಹ ಅವಕಾಶವನ್ನು ಮಹಾಲಕ್ಷ್ಮಿ ನಿಮಗಾಗಿ ತಂದುಕೊಡಲಿದ್ದಾಳೆ. ಯಾವುದೇ ಕಷ್ಟವನ್ನು ಎದುರಿಸುವಂತಹ ಆತ್ಮವಿಶ್ವಾಸ ನಿಮ್ಮಲ್ಲಿ ಬೆಳೆಯಲಿದೆ

Comments are closed.