Business Ideas: ಬಂಡವಾಳ ಇಲ್ಲದಿದ್ರೂ ಪರವಾಗಿಲ್ಲ, ಆದ್ರೆ ಕೈತುಂಬಾ ಹಣವನ್ನು ಮಾತ್ರ ಗಳಿಸಬಹುದು; ಅಂಥ ಸೂಪರ್ ಡೂಪರ್ ಬ್ಯುಸನೆಸ್ ಯಾವುದು ಗೊತ್ತಾ?

Business Ideas: ಸಾಕಷ್ಟು ಜನರಿಗೆ ತಮ್ಮ ಜೀವನದಲ್ಲಿ ಬೇಕಾಗಿರುವಂತಹ ಅಗತ್ಯತೆಗಳನ್ನು ಪೂರೈಕೆ ಮಾಡಲು ಹಣ ಬೇಕಾಗಿರುತ್ತದೆ ಇದು ಪ್ರತಿಯೊಬ್ಬರ ಅಗತ್ಯತೆ ಕೂಡ ಹೌದು. ಅನುಕೂಲ ಇರುವವರು ತಮ್ಮ ಮನೆಯಲ್ಲಿ ಇರುವಂತಹ ಹಣವನ್ನು ಉಪಯೋಗಿಸಿಕೊಳ್ಳುತ್ತಾರೆ ಆದರೆ ಕೆಲವರು ತಾವು ಕೆಲಸ ಮಾಡಿಯೇ ತಮ್ಮ ಅವಶ್ಯಕತೆಗಳನ್ನು ಅದರಿಂದ ಬರುವಂತಹ ಸಂಬಳದ ಹಣದಿಂದ ಪೂರೈಸಿಕೊಳ್ಳಬೇಕಾಗುತ್ತದೆ.

ಆದರೆ ಪ್ರತಿಯೊಬ್ಬರಿಗೂ ಕೂಡ ಬೇರೆಯವರ ಕೈಕೆಳಗೆ ಕೆಲಸ ಮಾಡುವಂತಹ ಇಷ್ಟ ಇರುವುದಿಲ್ಲ. ಅಂತಹ ವ್ಯಕ್ತಿಗಳಿಗೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಂತಹ ಒಂದು ಬಿಸಿನೆಸ್ ಐಡಿಯನ್ನು ಹೇಳಲು ಇವತ್ತು ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಆಸಕ್ತಿಯನ್ನು ಹೊಂದಿದ್ದರೆ ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

ಎಸ್ ಇ ಒ (SEO)

ಇದರ ಅರ್ಥ ಸರ್ಚ್ ಎಂಜಿನ್ ಆಪ್ಟಿಮೈಸೇಶನ್. ಪ್ರತಿಯೊಂದು ದೊಡ್ಡ ಮಟ್ಟದ ಅಥವಾ ಚಿಕ್ಕಮಟ್ಟದ ವ್ಯವಹಾರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುವಂತಹ ಪ್ರಯತ್ನದಲ್ಲಿ ಇರುತ್ತವೆ. ಆ ಸಂದರ್ಭದಲ್ಲಿ ಈ ಬಿಸಿನೆಸ್ ಖಂಡಿತವಾಗಿ ಉತ್ತಮ ರೀತಿಯಲ್ಲಿ ಸಹಾಯಕ್ಕೆ ಬರುತ್ತದೆ. ಸರ್ಚ್ ಇಂಜಿನ್ ಫಲಿತಾಂಶಗಳನ್ನು ಗ್ರಾಹಕರಿಗೆ ಒಳ್ಳೆಯ ರೀತಿಯಲ್ಲಿ ತೋರುವ ರೀತಿಯಲ್ಲಿ ಬರುವ ಹಾಗೆ ಮಾಡುವುದನ್ನು ಈ ವಿಶೇಷವಾದ ಬಿಸಿನೆಸ್ ನೋಡಿಕೊಳ್ಳುತ್ತದೆ. ಒಟ್ಟಾರೆಯಾಗಿ ಕಂಪನಿಯ ಪ್ರಾಡಕ್ಟ್ ಗಳನ್ನು ಗ್ರಾಹಕರಿಗೆ ಅಂತರ್ಜಾಲದಲ್ಲಿ ಸರಿಯಾದ ಮಾಡುವ ಕೆಲಸವನ್ನು ಇದು ಮಾಡುತ್ತದೆ. ಹಾಗೂ ಇದರಿಂದಾಗಿ ಅಂತರ್ಜಾಲದಲ್ಲಿ ಹೆಚ್ಚಿನ ವ್ಯಾಪಾರ ಜನರೇಟ್ ಆಗುತ್ತೆ.

 ಕಂಟೆಂಟ್ ಕ್ರಿಯೇಷನ್ (Content Creation)

ಒಂದು ವೇಳೆ ನೀವು ಬರೆಯುವ ಕೌಶಲ್ಯತೆಯನ್ನು ಹೊಂದಿದ್ದರೆ ಕಂಟೆಂಟ್ ಬರೆಯುವಂತಹ ವಿಭಾಗದಲ್ಲಿ ನಿಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಬಹುದಾಗಿದೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಕ್ರಿಯೇಟರ್ಗಳ ಅಗತ್ಯತೆ ಹೆಚ್ಚಾಗಿದೆ. ರೇಲನ್ಸಿಂಗ್ ವರ್ಕ್ ಅನುಕೂಲ ನೀವು ಈ ಸಂದರ್ಭದಲ್ಲಿ ಈ ಕ್ಯಾಟಗರಿಯಲ್ಲಿ ಮಾಡಬಹುದಾಗಿದೆ. ಬ್ಲಾಗ್ ನಲ್ಲಿ ನಿಮ್ಮ ಬರಹಗಳನ್ನು ಪೋಸ್ಟ್ ಮಾಡಿ ಅದರಿಂದ ಹಣ ಗಳಿಕೆ ಮಾಡುವುದು ಹಾಗೂ ಬೇರೆ ಬೇರೆ ವೆಬ್ಸೈಟ್ ಗಳಿಗೆ ಫ್ರೀಲ್ಯಾನ್ಸಿಂಗ್ ರೈಟಿಂಗ್ ಮಾಡುವುದು ಕೂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.

 ಬುಕ್ ಕೀಪಿಂಗ್ (Book Keeping)

ನೀವು ಮನೆಯಲ್ಲಿ ಇದುಕೊಂಡೆ ಬುಕ್ ಕೀಪಿಂಗ್ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ದೊಡ್ಡ ಮಟ್ಟದ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಬುಕ್ ಕೀಪರ್ ಆಗಿ ನೀವು ಇನ್ವಾಯ್ಸ್ ಗಳನ್ನು ತಯಾರಿಸುವುದು ಹಾಗೂ ಹಣಕಾಸಿನ ವರದಿ ಮಾಡುವಂತಹ ಕೆಲಸವನ್ನು ಮಾಡುವ ಮೂಲಕ ಕೈತುಂಬ ಸಂಪಾದನೆಯನ್ನು ಕಂಪನಿಗಳ ಮೂಲಕ ಮಾಡಬಹುದಾಗಿದೆ.

 ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ (Social Media Management)

ಕೆಲವೊಂದು ವ್ಯಾಪಾರಗಳು ಅಥವಾ ಉದ್ಯಮಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಗಳನ್ನು ಹೊಂದುವ ಹಾಗೂ ಅಲ್ಲಿಂದ ತಮ್ಮ ಗ್ರಾಹಕರನ್ನು ಸೆಳೆದುಕೊಳ್ಳುವಂತಹ ಗುರಿಯನ್ನು ಹೊಂದಿರುತ್ತದೆ. ಇನ್ನು ಕೆಲವು ರಾಜಕಾರಣಿಗಳು ಹಾಗೂ ಖ್ಯಾತ ಸೆಲೆಬ್ರಿಟಿಗಳು ಕೂಡ ತಮ್ಮ ಖಾತೆಯನ್ನು ಮೈಂಟೈನ್ ಮಾಡುವಂತಹ ಜನರ ಅವಶ್ಯಕತೆಯನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ನೀವು ಸೋಶಿಯಲ್ ಮೀಡಿಯಾ ಖಾತೆಗಳನ್ನು ಮ್ಯಾನೇಜ್ ಮಾಡುವಂತಹ ಸಂಸ್ಥೆಯನ್ನು ಪ್ರಾರಂಭ ಮಾಡಿ ನಿಮ್ಮ ಗ್ರಾಹಕರಿಗೆ ಬೇಕಾಗಿರುವಂತಹ ಸೇವೆಯನ್ನು ಒದಗಿಸುವ ಮೂಲಕ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಮ್ಯಾನೇಜ್ ಮಾಡಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಇದಕ್ಕೆ ನೀವು ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾದ ಅಗತ್ಯ ಕೂಡ ಇರುವುದಿಲ್ಲ.

ಬ್ಲಾಗಿಂಗ್ ( Blogging)

ನಿಮಗೆ ಇಷ್ಟ ಇರುವಂತಹ ಕ್ಷೇತ್ರಗಳ ಜ್ಞಾನ ನಿಮಗೆ ಸರಿಯಾಗಿ ಇದ್ದರೆ ಅದರ ಬಗ್ಗೆ ಬ್ಲಾಗಿಂಗ್ ಕೂಡ ಪ್ರಾರಂಭ ಮಾಡಬಹುದಾಗಿದೆ. ಉತ್ತಮ ರೀತಿಯಲ್ಲಿ ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಅನ್ನು ನೀವು ನೋಡಿಕೊಂಡರೆ ನಿಮ್ಮ ಬ್ಲಾಗಿಂಗ್ ಮೂಲಕ ನೀವು ಹಣ ಗಳಿಸುವುದು ಮಾತ್ರವಲ್ಲದೆ ಅಲ್ಲಿ ಬೇರೆ ಬೇರೆ ಕಂಪನಿಗಳ ಪ್ರಾಡಕ್ಟ್ ಅಥವಾ ಕಂಪನಿಗಳನ್ನು ಪ್ರಮೋಟ್ ಮಾಡುವ ಮೂಲಕ ಅದರಿಂದಲೂ ಕೂಡ ಕೈತುಂಬ ಹಣವನ್ನು ಸಂಪಾದನೆ ಮಾಡುವಂತಹ ಅವಕಾಶ ಇದೆ.

Comments are closed.