Trending: ನಾಯಿಗಳು ಮದ್ಯ ರಾತ್ರಿಯಲ್ಲಿ ವಿಚಿತ್ರವಾಗಿ ಕೂಗೋದ್ಯಾಕೆ ಗೊತ್ತಾ? ಇದೇ ಕಾರಣ ನೋಡಿ!

Trending: ನಾವು ಚಿಕ್ಕ ವಯಸ್ಸಿನಿಂದ ಪ್ರಾರಂಭಿಸಿ ಈಗಿನವರೆಗೂ ಕೂಡ ಸಾಕಷ್ಟು ಬಾರಿ ಗಮನಿಸಿದ್ದೇವೆ, ರಾತ್ರಿ ಅದರಲ್ಲೂ ವಿಶೇಷವಾಗಿ ಮಧ್ಯರಾತ್ರಿಯ ಸಂದರ್ಭದಲ್ಲಿ ನಾಯಿಗಳು ವಿಚಿತ್ರವಾಗಿ ಬೊಗಳುವುದು ಅಥವಾ ಊಳಿಡುವುದನ್ನು ಮಾಡುತ್ತದೆ. ಚಿಕ್ಕ ವಯಸ್ಸಿನಿಂದಲೂ ಕೂಡ ನಾವು ಇದನ್ನು ಬೇರೆ ರೀತಿಯಲ್ಲಿ ತಿಳಿದುಕೊಂಡಿದ್ದೇವೆ. ಅದೇನೆಂದರೆ ನಾಯಿಗಳು ರಾತ್ರಿಯ ಸಂದರ್ಭದಲ್ಲಿ ಬೂತಗಳನ್ನು ನೋಡಿದಾಗ ಈ ರೀತಿ ಪ್ರತಿಕ್ರಿಯೆ ನೀಡುತ್ತವೆ ಎಂಬುದಾಗಿ. ಚಿಕ್ಕ ವಯಸ್ಸಿನಲ್ಲಿ ನಾವು ಇದನ್ನು ನಂಬಿಕೊಂಡು ಬಂದಿದ್ದು ಈಗಲೂ ಕೂಡ ಸಾಕಷ್ಟು ಜನರು ಇದನ್ನೇ ನಂಬುತ್ತಾರೆ. ದೆವ್ವಗಳನ್ನು ನೋಡಿದ ಕ್ಷಣ ನಾಯಿಗಳು ಅಳುವುದಕ್ಕೆ ಪ್ರಾರಂಭ ಮಾಡುತ್ತವೆ ಇದೇ ಅದರ ಲಕ್ಷಣ ಎನ್ನುವುದಾಗಿ ಪರಿಗಣಿಸಲಾಗಿದೆ. ಬನ್ನಿ ಇದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವ.

ರಾತ್ರಿಯ ಸಂದರ್ಭದಲ್ಲಿ ಯಾವುದೇ ರೀತಿಯ ದೆವ್ವ ಪಿಶಾಚಿಗಳನ್ನು ನೋಡಿದ ಸಂದರ್ಭದಲ್ಲಿ ನಾಯಿಗಳು ಈ ರೀತಿಯಲ್ಲಿ ಆಡೋದಕ್ಕೆ ಪ್ರಾರಂಭ ಮಾಡುತ್ತವೆ ಎಂಬುದಾಗಿ ನಮ್ಮ ಮನೆಯಲ್ಲಿ ಹೇಳುತ್ತಾರೆ. ಅಥವಾ ಏನಾದರೂ ಅಪಶಕುನ ನಡೆಯುವುದರ ಮುನ್ಸೂಚನೆಯ ಸಂದರ್ಭದಲ್ಲಿ ಈ ರೀತಿ ನಾಯಿಗಳು ಅಳುವುದಕ್ಕೆ ಪ್ರಾರಂಭಿಸುತ್ತವೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಹೀಗಾಗಿ ನಾಯಿಗಳು ವಿಚಿತ್ರವಾಗಿ ಕೂಗೋದಕ್ಕೆ ಪ್ರಾರಂಭ ಮಾಡುತ್ತವೆ ಅಂದರೆ ಪ್ರತಿಯೊಬ್ಬರೂ ಕೂಡ ಭಯಪಡುವುದಕ್ಕೆ ಪ್ರಾರಂಭಿಸುತ್ತಾರೆ.

ಆದರೆ ಈಗ ಈ ಚರ್ಚೆಯನ್ನು ಸ್ವಲ್ಪ ಮಟ್ಟಿಗೆ ವಿಮರ್ಶ ಮಾಡಬೇಕಾದ ಸಮಯ ಬಂದಿದೆ. ನಿಜಕ್ಕೂ ನಾಯಿಗಳು ಭೂತ ಅಥವಾ ದೆವ್ವವನ್ನು ನೋಡಿದ ನಂತರವೇ ಈ ರೀತಿ ಮಾಡುತ್ತಾ ಅಥವಾ ಇದಕ್ಕೆ ಬೇರೇನು, ಕಾರಣ ಇದೆ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಹಾಗಿದ್ದರೆ ಬನ್ನಿ ಯಾವ ಕಾರಣಕ್ಕಾಗಿ ನಾಯಿಗಳು ಈ ರೀತಿ ರಾತ್ರಿಯ ಸಂದರ್ಭದಲ್ಲಿ ವಿಚಿತ್ರವಾಗಿ ಬೊಗೊಳೋದಕ್ಕೆ ಪ್ರಾರಂಭಿಸುತ್ತವೆ ಎಂಬುದನ್ನು.

ವೈಜ್ಞಾನಿಕ ಕಾರಣಗಳನ್ನು ಸರಿಯಾದ ರೀತಿಯಲ್ಲಿ ಪರೀಕ್ಷೆಯಲ್ಲಿ ಮಾಡುವುದಾದರೆ ರಾತ್ರಿಯ ಸಂದರ್ಭದಲ್ಲಿ ನಾಯಿಗಳಲ್ಲಿ ಒಂಟಿತನ ಕಾಡುತ್ತದೆ ಹಾಗೂ ವಯಸ್ಸಾದಂತೆ ಅವರಲ್ಲಿ ಭಯ ಕೂಡ ಹೆಚ್ಚಾಗುತ್ತದೆ. ಇದೇ ಕಾರಣಕ್ಕಾಗಿ ಅವುಗಳು ನಿರಂತರವಾಗಿ ಒಂದಲ್ಲ ಒಂದು ಸದ್ದುಗಳನ್ನು ಮಾಡುತ್ತಲೇ ಇರುತ್ತವೆ. ಇನ್ನು ಈ ರೀತಿಯ ಕೆಲಸಗಳನ್ನು ಬೀದಿ ನಾಯಿಗಳು ಹೆಚ್ಚಾಗಿ ಮಾಡುವುದರಿಂದ ಅವುಗಳು ತಮ್ಮ ಹಸಿವನ್ನು ಜನರಿಗೆ ವ್ಯಕ್ತಪಡಿಸುವ ಕಾರಣಕ್ಕಾಗಿ ಈ ರೀತಿ ಕೂಗಲು ಪ್ರಾರಂಭ ಮಾಡುತ್ತವೆ. ಅಥವಾ ಬೇರೆ ಆದಾಗ ತನ್ನ ಗುಂಪಿನವರಿಗೆ ಒಂದು ರೀತಿಯ ಸಂಕೇತವನ್ನು ನೀಡುವುದಕ್ಕಾಗಿ ಈ ರೀತಿ ಬೊಗಳುವುದನ್ನು ಕೂಡ ನಾವು ವೈಜ್ಞಾನಿಕವಾಗಿ ತಿಳಿದುಕೊಳ್ಳಬಹುದಾಗಿದೆ.

ಒಂದು ವೇಳೆ ತಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದರೆ ಅಥವಾ ತಮಗೆ ಏನಾದರೂ ಗಾಯವಾಗಿದ್ದರೆ ಆ ಸಂದರ್ಭದಲ್ಲಿ ಕೂಡ ತಮ್ಮ ನೋವನ್ನು ಹಂಚಿಕೊಳ್ಳುವ ರೀತಿಯಲ್ಲಿ ಈ ರೀತಿ ಊಳಿಡುತ್ತವೆ. ಇನ್ನು ತಮಗೆ ತಿಳಿಯದೆ ಇರುವಂತಹ ಅಪರಿಚಿತರನ್ನು ಕಂಡಾಗಲು ಕೂಡ ನಾಯಿಗಳು ಈ ರೀತಿ ಸದ್ದನ್ನು ಮಾಡುತ್ತವೆ. ಇನ್ನು ರಾತ್ರಿಯ ಸಂದರ್ಭದಲ್ಲಿ ಯಾವುದೇ ಸದ್ದು ಇರುವುದಿಲ್ಲ ಹೀಗಾಗಿ ನಾಯಿಗಳು ನಾರ್ಮಲ್ ಆಗಿ ಕೂಗಿದರು ಕೂಡ ಪ್ರತಿಯೊಬ್ಬರೂ ವಿಚಿತ್ರವಾಗಿ ಕೂಗಿದೆ ಎನ್ನುವ ರೀತಿಯಲ್ಲಿ ಅಂದುಕೊಳ್ಳುತ್ತಾರೆ.

Comments are closed.