Astrology: ಮಹಾಶಿವರಾತ್ರಿಯ ನಂತರ ಶಿವನ ಕೃಪೆ ಇದ್ರೂ ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ದೃಷ್ಟಿ. ಜಾಗೃತೆಯಾಗಿರಿ.

Astrology: ಶಿವರಾತ್ರಿಯ ನಂತರ ಈಗ ಕೆಲವೊಂದು ರಾಶಿ ನಕ್ಷತ್ರಗಳು ಸ್ಥಾನಪಲ್ಲಟಗೊಂಡಿದ್ದು ಈ ಸಂದರ್ಭದಲ್ಲಿ ಶನಿಯ ದೃಷ್ಟಿ ಕೆಲವೊಂದು ರಾಶಿ ಅವರ ಮೇಲೆ ಬಿದ್ದಿರುತ್ತದೆ. ಸದ್ಯಕ್ಕೆ ಶನಿ ಕುಂಭ ರಾಶಿಯಲ್ಲಿ ಚಲನೆ ಮಾಡುತ್ತಿದ್ದು ಶನಿಯ ದೃಷ್ಟಿ ಕೆಲವೊಂದು ರಾಶಿಯವರ ಮೇಲೆ ಬಿದ್ದಿದ್ದು ಅವರು ಸ್ವಲ್ಪ ಮಟ್ಟಿಗೆ ಜಾಗ್ರತೆ ಆಗಿರಬೇಕಾಗಿರುವುದು ಪ್ರಮುಖವಾಗಿರುತ್ತದೆ. ಹಾಗಿದ್ದರೆ ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಕರ್ಕ ರಾಶಿ(Cancer)

ಶನಿಯ ವಕ್ರ ದೃಷ್ಟಿ ಕರ್ಕ ರಾಶಿಯವರ ಮೇಲೆ ಬೀಳುವುದರಿಂದ ಕೆಲಸ ಮಾಡುವಂತಹ ಸ್ಥಳದಲ್ಲಿ ಕರ್ಕ ರಾಶಿಯವರು ಸ್ವಲ್ಪಮಟ್ಟಿಗೆ ಜಾಗ್ರತೆಯಾಗಿ ಇರುವುದು ಒಳ್ಳೆಯದು. ಕೆಲಸದಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಒಂದು ವೇಳೆ ನೀವು ವ್ಯಾಪಾರಸ್ಥರಾಗಿದ್ದಾರೆ ಮುಂದಿನ 10 ತಿಂಗಳುಗಳ ಕಾಲ ಕೊಂಚಮಟ್ಟಿಗೆ ಜಾಗೃತೆ ಆಗಿರಬೇಕಾಗಿರುತ್ತದೆ ಯಾಕೆಂದ್ರೆ ಆರ್ಥಿಕ ನಷ್ಟ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆಯ ಬಗ್ಗೆ ಕೂಡ ಕೊಂಚಮಟ್ಟಿಗೆ ಗಮನವಹಿಸಿ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಕರ್ಕರಾಶಿಯ ಜನರು ಸ್ವಲ್ಪಮಟ್ಟಿಗೆ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು.

ವೃಶ್ಚಿಕ ರಾಶಿ (Scorpion)

ಶನಿಯ ನಕಾರಾತ್ಮಕ ದೃಷ್ಟಿ ಸಂಪೂರ್ಣವಾಗಿ ವೃಶ್ಚಿಕ ರಾಶಿಯವರ ಮೇಲೆ ಬಿದ್ದಿದೆ ಎಂದು ಹೇಳಬಹುದಾಗಿದೆ. ಪ್ರಮುಖವಾಗಿ ನೀವು ನಿಮ್ಮ ಜೀವನದಲ್ಲಿ ಹಣದ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ನೀವು ದುಡಿಯೋದಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ ಹೀಗಾಗಿ ನಿಮ್ಮ ಖರ್ಚನ್ನು ಕಡಿಮೆ ಮಾಡಬೇಕಾಗಿರುತ್ತದೆ ಹಾಗೂ ಉಳಿತಾಯವನ್ನು ಹೆಚ್ಚು ಮಾಡಬೇಕು. ಪ್ರತಿ ಶನಿವಾರ ಶನಿ ದೇವನನ್ನು ಪೂಜಿಸುವ ಮೂಲಕ ಸ್ವಲ್ಪಮಟ್ಟಿಗೆ ವ್ಯತರಿಕ್ತ ಪರಿಣಾಮಗಳಿಂದ ಹೊರ ಬರಬಹುದಾಗಿದೆ.

ಮಕರ ರಾಶಿ (Capricorn)

ದೊಡ್ಡ ಮಟ್ಟದ ಅಡ್ಡ ಪರಿಣಾಮಗಳು ಅಲ್ಲದೆ ಹೋದರೂ ಕೂಡ ಸ್ವಲ್ಪಮಟ್ಟಿಗಾದರೂ ಮಕರ ರಾಶಿಯವರು ಶನಿಯ ವಕ್ರದೃಷ್ಟಿಯಿಂದ ಕಷ್ಟವನ್ನು ಪಡಬೇಕಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಹಾಗೂ ಶಾಂತಿ ಕದಡಲಿದೆ. ದೂರದ ಪ್ರಯಾಣಗಳಿಂದಾಗಿ ನೀವು ಆಗಾಗ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಶನಿಯ ಸ್ಥಾನಪಲ್ಲಟ ಎನ್ನುವುದು ನಿಮಗೆ ಇಷ್ಟೆಲ್ಲ ಸಮಸ್ಯೆಗಳನ್ನು ತಂದೊಡ್ಡಲಿದೆ.

ಕುಂಭ ರಾಶಿ(Aquarius)

ಈ ಸಂದರ್ಭದಲ್ಲಿ ನಿಮ್ಮ ಮಾನಸಿಕ ಸ್ಥಿತಿಗತಿಗಳಲ್ಲಿ ಸಾಕಷ್ಟು ವ್ಯತ್ಯಾಯ ಉಂಟಾಗುವಂತಹ ಸಾಧ್ಯತೆ ಇದ್ದು ಇದರಿಂದಾಗಿ ನೀವು ಸಾಕಷ್ಟು ಸಮಸ್ಯೆಗಳನ್ನು ಹಾಗೂ ಗಲಿಬಿಲಿಗಳನ್ನು ಕಾಣುವಂತಹ ಸಾಧ್ಯತೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಇದು ಅಗ್ನಿಪರೀಕ್ಷೆಯ ಪರಿಸ್ಥಿತಿ ಆಗಿದ್ದು ಸರಿಯಾದ ರೀತಿಯಲ್ಲಿ ಓದಿಕೊಂಡು ತಯಾರಾಗಿರಬೇಕು. ಮುಂದಿನ 10 ತಿಂಗಳವರೆಗೆ ಯಾವುದೇ ಚಿಕ್ಕ ವಿವಾದಗಳಲ್ಲಿ ಕೂಡ ನೀವು ನಿಮ್ಮನ್ನು ತೊಡಗಿಸಿಕೊಳ್ಳಬಾರದು ಇಲ್ಲವಾದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಆಗಬಹುದು. ಈ ದಿನಗಳಲ್ಲಿ ಖರ್ಚು ಹೆಚ್ಚಾಗಲಿದ್ದು ಅದರ ಬಗ್ಗೆ ಸ್ವಲ್ಪ ಮಟ್ಟಿಗೆ ಗಮನವಹಿಸಿ.

ಮೀನ ರಾಶಿ(Pisces)

ಮೀನ ರಾಶಿಯವರ ದಾಂಪತ್ಯ ಜೀವನದಲ್ಲಿ ಸ್ವಲ್ಪಮಟ್ಟಿಗೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬರಲಿದ್ದು ಸರಿಯಾದ ರೀತಿಯಲ್ಲಿ ನಿರ್ಧಾರವನ್ನು ತೆಗೆದುಕೊಂಡು ಮುಂದುವರೆಯಿರಿ. ಮುಂದಿನ 10 ತಿಂಗಳುಗಳ ಕಾಲ ಯಾವುದೇ ದೊಡ್ಡ ಮಟ್ಟದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ನಿಮ್ಮ ಹಿತೈಷಿಗಳ ಜೊತೆ ಹಾಗೂ ನಿಮ್ಮ ಆತ್ಮವಿಶ್ವಾಸದ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಿ. ಈ ಸಮಯದಲ್ಲಿ ದೊಡ್ಡ ಮಟ್ಟದ ಹೊಸ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಹೋಗುವುದು ಉಚಿತವಲ್ಲ ಎಂಬುದಾಗಿ ಪರಿಗಣಿಸಬಹುದಾಗಿದೆ. ಪ್ರತಿಯೊಂದು ಹೆಜ್ಜೆಯನ್ನು ನೋಡಿ ಯೋಚಿಸಿ ಇಡಿ.

Comments are closed.