Bank Loan: ಅತಿ ಕಡಿಮೆ ಬೆಲೆಗೆ ಬ್ಯಾಂಕ್ ಹರಾಜಿನಲ್ಲಿ ಮನೆ ಖರೀದಿ ಮಾಡೋದು ಹೇಗೆ ಗೊತ್ತೇ?

Bank Loan: ಪ್ರತಿಯೊಂದು ಕಾರು ಅಥವಾ ಹೊಸ ಮನೆಯನ್ನು ಕಟ್ಟಿಸಬೇಕು ಎಂದುಕೊಂಡಿರುವವರು ಬ್ಯಾಂಕಿನಲ್ಲಿ ಲೋನ್ (Bank Loan)ಪಡೆದುಕೊಂಡೆ ಮನೆಯನ್ನು ಅಥವಾ ಹೊಸ ವಾಹನವನ್ನು ಖರೀದಿ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ನೀವೆಲ್ಲರೂ ತಿಳಿದುಕೊಳ್ಳಬೇಕಾಗಿರುವ ಒಂದು ವಿಚಾರ ಎಂದರೆ ನಮ್ಮ ಯಾವುದಾದರೂ ಒಂದು ಡಾಕ್ಯುಮೆಂಟನ್ನು ಅಡವಿಟ್ಟೆ ನಾವು ಲೋನ್ ಅನ್ನು ಪಡೆದುಕೊಂಡಿರುತ್ತೇವೆ. ಇದೇ ಕಾರಣಕ್ಕಾಗಿ ನಾವು ಲೋನ್ ಅನ್ನು ಸರಿಯಾಗಿ ಕಟ್ಟದೆ ಹೋದಲ್ಲಿ ಅಥವಾ ಕಟ್ಟುವವರೆಗೂ ಕೂಡ ನಾವು ಪಡೆದುಕೊಂಡಿರುವಂತಹ ಆಸ್ತಿ ಅಥವಾ ಕಟ್ಟಿರುವಂತಹ ಮನೆ ನಮ್ಮದಾಗಿರುವುದಿಲ್ಲ ಬದಲಾಗಿ ನಮ್ಮ ಡಾಕ್ಯುಮೆಂಟುಗಳನ್ನು ಪಡೆದುಕೊಂಡಿರುವ ಬ್ಯಾಂಕಿನದ್ದಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಇಂತಹ ಲೋನ್ ಗಳನ್ನು ಬ್ಯಾಂಕಿನ ದೃಷ್ಟಿಕೋನದಲ್ಲಿ ಸುರಕ್ಷಿತ ಎಂಬುದಾಗಿ ಪರಿಗಣಿಸಲಾಗುತ್ತದೆ.

ಒಂದು ವೇಳೆ ನಾವು ಸರಿಯಾದ ರೀತಿಯಲ್ಲಿ ಮೂರು ತಿಂಗಳವರೆಗೆ ಕಂತನ್ನು ಕಟ್ಟದೆ ಹೋದಲ್ಲಿ ಬ್ಯಾಂಕಿನಿಂದ ನೋಟಿಸ್ ಕಳಿಸಲಾಗುತ್ತದೆ. ಅದಾಗಿ 60 ದಿನಗಳ ನಂತರ ಡಿಮ್ಯಾಂಡ್ ನೋಟಿಸ್ ಅನ್ನು ಸಾಲ ಪಡೆದುಕೊಂಡಿರುವಂತಹ ಗ್ರಾಹಕರಿಗೆ ಕಂತನ್ನು ಕಟ್ಟಲು ನೀಡಲಾಗುತ್ತದೆ. ಅದಕ್ಕೆ ಕೂಡ ಪ್ರತಿಸ್ ಸ್ಪಂದಿಸದೆ ಹೋದಲಿ 30 ದಿನಗಳ ನಂತರ ಆ ಆಸ್ತಿಯನ್ನು ಹರಾಜು ಪ್ರಕ್ರಿಯೆಗೆ ಮುಂದುವರಿಸುವಂತಹ ನೋಟಿಸ್ ಅನ್ನು ಕಳಿಸಲಾಗುತ್ತದೆ. ಕೊನೆಗೆ ಹರಾಜು ಪ್ರಕ್ರಿಯೆಗೆ ಒಂದು ಸರಿಯಾದ ನಿರ್ದಿಷ್ಟವಾದ ದಿನಾಂಕವನ್ನು ನಿಗದಿಪಡಿಸಿ ಅವತ್ತು ಅದನ್ನು ಸೇಲ್ ಮಾಡುತ್ತಾರೆ.

ಆದರೆ ಅಂದಿನ ದಿನದವರೆಗೂ ಕೂಡ ನಿಮ್ಮ ಬಾಕಿ ಇರುವಂತಹ ಹಣವನ್ನು ಕಟ್ಟಿ ನಿಮ್ಮ ಆಸ್ತಿಯನ್ನು ವಾಪಸ್ ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಅಲ್ಲಿ ಕೂಡ ಹಣವನ್ನು ಕಟ್ಟದೆ ಹೋದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಹಣವನ್ನು ಕೂಗಿದ ವ್ಯಕ್ತಿಗೆ ಮಾರಾಟ ಮಾಡುತ್ತದೆ ಅಥವಾ ಬ್ಯಾಂಕ್ ಯಾವ ಹಣಕ್ಕೆ ನಿಗದಿಪಡಿಸಿದಯೋ ಆ ಹಣವನ್ನು ನೀಡುವುದಕ್ಕೆ ಮುಂದೆ ಬರುವವರಿಗೆ ಆ ಪ್ರಾಪರ್ಟಿಯನ್ನು ಮಾರಾಟ ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ.

ಈಗಿನ ಕಾಲದಲ್ಲಿ ಪ್ರತಿಯೊಂದು ಸರ್ಕಾರಿ ಕೆಲಸಗಳು ಆನ್ಲೈನ್ ಮೂಲಕವೇ ನಡೆಯುತ್ತದೆ ಎನ್ನುವಂಥದ್ದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಈ ರೀತಿ ಪ್ರಾಪರ್ಟಿ ಹರಾಜು ಪ್ರಕ್ರಿಯೆ ಕೂಡ ಆನ್ಲೈನ್ ನಲ್ಲಿ ನಡೆಯುತ್ತದೆ. ಈ ಮೂಲಕ ನೀವು ಸಾಮಾನ್ಯ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಕೂಡ ಸರ್ಕಾರಿ ಹರಾಜಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಆಗಲಿ ಇರುವಂತಹ ಈ ಪ್ರಾಪರ್ಟಿಗಳನ್ನು ಖರೀದಿ ಮಾಡಬಹುದಾಗಿದೆ. ನೀವು ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಹೋಗಿ ಯಾವಾಗ ಹರಾಜು ಪ್ರಕ್ರಿಯೆ ಆಗುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.

E Auction India.com, for clousure india.com, ibapi ಈ ವೆಬ್ ಸೈಟ್ ಗಳಲ್ಲಿ ನೀವು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಲವರು ಫೇಕ್ ಡಾಕ್ಯುಮೆಂಟ್‌ಗಳನ್ನು ಬ್ಯಾಂಕಿಗೆ ನೀಡಿ ಈ ರೀತಿ ಯಾಮಾರಿಸುವುದು ಕೂಡ ಇರುತ್ತದೆ ಅದರ ಬಗ್ಗೆ ನೀವು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಪಡೆದುಕೊಂಡು ಮುಂದುವರಿಯ ಬೇಕಾಗಿರುತ್ತದೆ. ನಿಮ್ಮ ಪ್ರಾಪರ್ಟಿ ವಿಚಾರದ ಬಗ್ಗೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಪ್ರತಿಯೊಂದು ಮಾಹಿತಿಗಳನ್ನು ಚೆಕ್ ಮಾಡಿದ ನಂತರ ಅದು ಸರಿಯಾಗಿದೆಯೇ ಎನ್ನುವುದನ್ನು ದೃಢಪಡಿಸಿಕೊಂಡ ನಂತರ ವರ್ಷ ನೀವು ಖರೀದಿ ಮಾಡುವುದಕ್ಕೆ ಮುಂದುವರೆಯಬಹುದಾಗಿದೆ.

ಆನ್ಲೈನ್ ಹೊರತುಪಡಿಸಿ ನೇರವಾಗಿ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ನೀವು ಮುಂದುವರೆದರೆ ಪ್ರಾಪರ್ಟಿಯ ಬಗ್ಗೆ ಹಿನ್ನೆಲೆಯನ್ನು ತಿಳಿದುಕೊಂಡು ಹಾಗೂ ಪ್ರಾಪರ್ಟಿ ಸರಿಯಾಗಿದೆ ಎನ್ನುವಂತಹ ನೇರ ಮಾಹಿತಿಯನ್ನು ಪಡೆದುಕೊಂಡ ನಂತರ ನೀವು ಅದರ ಮೌಲ್ಯದ 10 ಪ್ರತಿಶತ ಹಣವನ್ನು ಅಡ್ವಾನ್ಸ್ ರೂಪದಲ್ಲಿ ನೀಡಿ ನೀವು ಡೀಲ್ ಮಾಡಿಕೊಳ್ಳಬಹುದಾಗಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳ ಮೂಲಕವೇ ಕಾನೂನಾತ್ಮಕವಾಗಿ ಇದರ ಖರೀದಿ ಪ್ರಕ್ರಿಯೆ ನೀವು ಮಾಡಬೇಕಾಗಿರುತ್ತದೆ. ಯಾಕೆಂದರೆ ಕೆಲವೊಂದು ಪ್ರಾಪರ್ಟಿಗಳಲ್ಲಿ ಕಾನೂನಾತ್ಮಕ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇದೆಲ್ಲ ಸರಿ ಇದ್ರೆ ನೀವು ಕೆಲವೊಮ್ಮೆ ಸಾಮಾನ್ಯ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಈ ಪ್ರಾಪರ್ಟಿಗಳನ್ನು ಖರೀದಿ ಮಾಡಬಹುದಾಗಿದೆ.

Comments are closed.