Ration Card: ರೇಷನ್ ಕಾರ್ಡ್ ಇದ್ರೂ ಇಂಥವರಿಗೆ ಇನ್ನುಮುಂದೆ ಸಿಗಲ್ಲ ಸರ್ಕಾರದ ಉಚಿತ ಅಕ್ಕಿ, ಹಣ; ರಾಜ್ಯ ಸರ್ಕಾರದ ಮಹತ್ವದ ಆದೇಶ!

Ration Card: ಪ್ರತಿಯೊಬ್ಬ ಜನಸಾಮಾನ್ಯನ ಜೀವನದಲ್ಲಿ ರೇಷನ್ ಕಾರ್ಡ್ ಎನ್ನುವುದು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಬಂತು ಅವರ ಯೋಜನೆಗಳಿಗಾಗಿ ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾದ ಸರ್ಕಾರ ದಾಖಲೆ ಆಗಿ ಕಾಣಿಸಿಕೊಳ್ಳುತ್ತದೆ. ಅನ್ನ ಭಾಗ್ಯದ ಮೂಲಕ ರೇಷನ್ ಪಡೆಯುವುದರಿಂದ ಹಿಡಿದು ಗೃಹಲಕ್ಷ್ಮಿಯ ಮಾಸಿಕ 2,000 ಹಣವನ್ನು ಪಡೆದುಕೊಳ್ಳುವುದರವರೆಗೂ ಕೂಡ ರೇಷನ್ ಕಾರ್ಡ್ ಅಗತ್ಯತೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಇದೆ. ಬಡತನದ ರೇಖೆಗಿಂತ ಕೆಳಗಿರುವಂತಹ ಅಂದರೆ ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿಯನ್ನು ನೀಡುವಂತಹ ಯೋಜನೆಯ ಸರ್ಕಾರ ಘೋಷಿಸಿದ್ದು ಐದು ಕೆಜಿ ಅಕ್ಕಿಯ ಕೊರತೆಯಿಂದಾಗಿ ಅದರ ಬದಲಿಗೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಯೋಜನೆಯ ಮೂಲಕ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಟ್ರಾನ್ಸ್ಫರ್ ಮಾಡಲಾಗುತ್ತಿದೆ.

ಇದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ 2,000 ಹಣವನ್ನು ಕೂಡ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ತಂತ್ರಜ್ಞಾನದ ಮೂಲಕ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಇದಕ್ಕಿಂತ ಪ್ರಮುಖವಾಗಿ ನೀವು ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರವೇನೆಂದರೆ ಈ ಎರಡು ಹಣವನ್ನು ಅಥವಾ ಲಾಭವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿರಬೇಕು ಹಾಗೂ NPCI ಮತ್ತು ಆಧಾರ್ ಸೀಡಿಂಗ್ ಅನ್ನು ಕೂಡ ಮಾಡಿರಬೇಕು ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಹೆಸರು ಸರಿಯಾಗಿರಬೇಕು. ಬ್ಯಾಂಕ್ ಖಾತೆಯ eKYC ಮಾಡಿಸಿರಬೇಕು.

ರೇಷನ್ ಕಾರ್ಡ್ ಅನ್ನು ಬಡ ಅಥವಾ ಮಾಧ್ಯಮ ವರ್ಗ ಕಿಂತ ಕೆಳಗೆ ಇರುವಂತಹ ಕುಟುಂಬಗಳಿಗೆ ನೀಡುವುದಕ್ಕೆ ಇರುವಂತಹ ಪ್ರಮುಖ ಕಾರಣವೇ ಅವರಿಗೆ ಸುಲಭ ರೀತಿಯಲ್ಲಿ ರೇಶನ್, ವೈದ್ಯಕೀಯ ನೆರವು ಹಾಗೂ ಶಿಕ್ಷಣ ದೊರಕಬೇಕು ಎನ್ನುವುದಾಗಿ. ಕೆಲವು ಕಡೆಗಳಲ್ಲಿ ಸಮಾಜದಲ್ಲಿ ಶ್ರೀಮಂತರಾಗಿದ್ದರೂ ಕೂಡ ಬಿಪಿಎಲ್ ಕಾರ್ಡುಗಳನ್ನು ಬಳಸುವುದನ್ನು ನೀವು ಗಮನಿಸಬಹುದಾಗಿದೆ. ಇದೇ ಕಾರಣದಿಂದಾಗಿ ಯಾರಿಗೆ ಆ ರೇಷನ್ ಸಿಗಬೇಕೋ ಅವರಿಗೆ ಸಿಕ್ತಾ ಇಲ್ಲ. ಇದೇ ಕಾರಣಕ್ಕಾಗಿ ಕಳೆದ ಆರು ತಿಂಗಳಿಂದ ಯಾರು ರೇಷನ್ ಅನ್ನು ಪಡೆದುಕೊಂಡಿಲ್ಲವೋ ಅವರ ರೇಷನ್ ಕಾರ್ಡ್ಗಳನ್ನು ರದ್ದುಪಡಿಸುವಂತಹ ನಿರ್ಧಾರಕ್ಕೆ ಆಹಾರ ಇಲಾಖೆ ಬಂದಿದೆ.

ಇನ್ನು ಶ್ರೀಮಂತರಾಗಿದ್ದರೂ ಕೂಡ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದರೆ ಅವರಿಗೂ ಕೂಡ ಕಾನೂನಾತ್ಮಕವಾಗಿ ಶಿಕ್ಷೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಅಧಿಕಾರಿಗಳು ನಿಮ್ಮ ರೇಷನ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಸರಿಯಾದ ಪ್ರೀತಿಯಲ್ಲಿ ಇದ್ರೆ ಮಾತ್ರ ಅದನ್ನು ನಿಮಗೆ ವಾಪಸ್ ಹಿಂದಿರುಗಿಸುತ್ತಾರೆ. ಇಲ್ಲದೆ ಹೋದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಿ ನೀವು ಈಗಾಗಲೇ ಪಡೆದುಕೊಳ್ಳುತ್ತಿರುವಂತಹ ಪ್ರತಿಯೊಂದು ಯೋಜನೆಗಳಿಂದ ನಿಮ್ಮನ್ನು ಹೊರಹಾಕಲಾಗುತ್ತದೆ. ಇದೇ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಯೋಜನೆಗಳಲ್ಲಿ ನೀವು ಫಲಾನುಭವಿಗಳಾಗಲು ಸಾಧ್ಯವಿರುವುದಿಲ್ಲ.

Comments are closed.