Actress Lakshmi: ದಿಡೀರ್ ಅಂತ ಹೋಟೆಲ್ ನಲ್ಲಿ ಮದುವೆ, ಅಲ್ಲೇ ಫಸ್ಟ್ ನೈಟ್ – ನಟಿ ಲಕ್ಷ್ಮಿ ರವರ ಜೀವನದಲ್ಲಿ ಅಂದು ಏನಾಯ್ತು ಗೊತ್ತೇ?

Actress Lakshmi: ಹಿರಿಯ ನಟಿ ಲಕ್ಷ್ಮಿ ಅವರನ್ನು ಎಲ್ಲರೂ ಕೂಡ ಈಗ ಲಕ್ಷ್ಮಿ ಅಮ್ಮ ಅಂತಾನೆ ಕರಿತಾರೆ. ಒಂದು ಕಾಲದಲ್ಲಿ ಕೇವಲ ಕನ್ನಡ ಚಿತ್ರರಂಗದ ಅದ್ವಿತೀಯ ದಿಗ್ಗಜ ನಟರ ಜೊತೆಗೆ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಆ ಕಾಲದಲ್ಲಿಯೇ ದೊಡ್ಡ ಮಟ್ಟದ ಹೆಸರು ಮಾಡಿರುವಂತಹ ನಟಿಯಾಗಿದ್ದರು. ಅಂದಿನ ಕಾಲದಲ್ಲಿ ಪ್ಯಾನ್ ಇಂಡಿಯನ್ ನಾಯಕಿಯಾಗಿ ಕಾಣಿಸಿಕೊಂಡಂತಹ ಲಕ್ಷ್ಮಿ ಅಮ್ಮ ಅವರ ಜೀವನದ ಬಗ್ಗೆ ಕೆಲವೊಂದು ವಿಚಾರಗಳ ಬಗ್ಗೆ ನಿಮಗೆ ಈ ಲೇಖನದ ಮೂಲಕ ಹೇಳಲು ಹೊರಟಿದ್ದೇವೆ. ಇವತ್ತಿಗೂ ಕೂಡ ಲಕ್ಷ್ಮಿ ಅಮ್ಮ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾ ಇದ್ದಾರೆ. ಇನ್ನು ಅವರು ತಮ್ಮ ಎರಡನೇ ಗಂಡನ ಬಗ್ಗೆ ನೀಡಿರುವಂತಹ ಒಂದು ಹೇಳಿಕೆ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಜೂಲಿ ಸಿನಿಮಾದ ಮೂಲಕ 80ರ ದಶಕದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಂತಹ ಲಕ್ಷ್ಮಿ ಅವರನ್ನು ಪ್ರತಿಯೊಬ್ಬರು ಕೂಡ ಜೂಲಿ ಲಕ್ಷ್ಮಿ ಎಂಬುದಾಗಿ ಕರೆಯೋದಕ್ಕೆ ಪ್ರಾರಂಭಿಸುತ್ತಾರೆ. ಸೌತ್ ಇಂಡಿಯನ್ ಫಿಲಂ ಇಂಡಸ್ಟ್ರಿಯಲ್ಲಿ ಪ್ರತಿಯೊಂದು ಭಾಷೆಗಳಲ್ಲಿಯೂ ಕೂಡ ದೊಡ್ಡ ಮಟ್ಟದ ನಾಯಕ ನಟರ ಜೊತೆಗೆ ಕಾಣಿಸಿಕೊಂಡಿರುವಂತಹ ನಟಿ ಲಕ್ಷ್ಮಿಯವರು ಆ ಕಾಲದಲ್ಲಿಯೇ ಪ್ರತಿಯೊಂದು ಭಾಷೆಗಳಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ರು. ಒಬ್ಬ ನಾಯಕನಟಿಯಾಗಿ ಲಕ್ಷ್ಮಿ ಅವರು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದರು ಹಾಗೂ ಅವರನ್ನು ಹಿಂದಿಕ್ಕೋ ಮತ್ತೊಬ್ಬ ನಾಯಕ ನಟಿ ಇಲ್ಲ ಅನು ರೀತಿಯಲ್ಲಿ ಬೆಳೆದು ನಿಂತಿದ್ದರೂ ಆದರೆ ಅವರ ವೈಯಕ್ತಿಕ ಜೀವನ ಹೇಳುವಷ್ಟು ಸುಖಕರವಾಗಿರಲಿಲ್ಲ ಅನ್ನೋದನ್ನ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.

ಮೊದಲಿಗೆ ಭಾಸ್ಕರ ಎನ್ನುವವರನ್ನು ಮದುವೆಯಾಗುತ್ತಾರೆ ಹಾಗೂ ಅವರಿಂದ ಐಶ್ವರ್ಯ ಅನ್ನುವಂತಹ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಅವರು ಪಡೆದುಕೊಳ್ಳುತ್ತಾರೆ. ಐಶ್ವರ್ಯ ಅವರು ಕೂಡ ಸಿನಿಮಾ ರಂಗದಲ್ಲಿ ನಟಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಇನ್ನು ಕೆಲವೇ ಸಮಯದಲ್ಲಿ ಭಾಸ್ಕರನ್ ರವರ ಜೊತೆಗಿನ ವಿವಾಹ ಸಂಬಂಧವನ್ನು ವಿವಾಹ ವಿಚ್ಛೇದನದ ಮೂಲಕ ಲಕ್ಷ್ಮಿ ಅವರು ಕಡಿದುಕೊಳ್ಳುತ್ತಾರೆ. ನಂತರ ನಟ ಹಾಗೂ ನಿರ್ದೇಶಕ ಆಗಿರುವಂತಹ ಮೋಹನ್ ಶರ್ಮ ಅವರನ್ನು ಮದುವೆಯಾಗಿದ್ದರು. ಅವರ ಬಗ್ಗೆನೇ ಮಾತನಾಡುತ್ತಾ ಲಕ್ಷ್ಮಿಅವರು ಹೋಟೆಲ್ ನಲ್ಲಿಯೇ ಮದುವೆಯಾಗಿ ಕುಂಕುಮ ಇಟ್ಟು ಫಸ್ಟ್ ನೈಟ್ ಕೂಡ ಆಗಿತ್ತು ಅನ್ನೊದಾಗಿ ಹೇಳಿಕೆ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.

ಇವರಿಬ್ಬರ ಮದುವೆ ಬಗ್ಗೆ ಮಾತನಾಡುವುದಾದರೆ 1975 ನೇ ಇಸ್ವಿಯಲ್ಲಿ ಇವರಿಬ್ಬರು ಮದುವೆ ಆಗಿದ್ದರು ಆದರೆ ಇವರ ಮದುವೆ ಕೇವಲ 5 ವರ್ಷಗಳಿಗೆ ಮಾತ್ರ ಸೀಮಿತವಾಗಿತ್ತು. 5 ವರ್ಷಗಳಲ್ಲಿ ಇವರಿಬ್ಬರು ವಿವಾಹವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇದಾದ ನಂತರ ತಮಿಳು ಚಿತ್ರರಂಗದ ನಿರ್ದೇಶಕ ಆಗಿರುವಂತಹ ಶಿವಚಂದ್ರನ್ ಎನ್ನುವವರನ್ನು ಲಕ್ಷ್ಮಿ ಅವರು ಮದುವೆಯಾಗುವ ಮೂಲಕ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇವತ್ತಿಗೂ ಕೂಡ ಸಿನಿಮಾಗಳಲ್ಲಿ ಹಿರಿಯ ಕಲಾವಿದ ಪಾತ್ರದಲ್ಲಿ ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಲಕ್ಷ್ಮಿ ಅಮ್ಮ ಕಾಣಿಸಿಕೊಳ್ಳುತ್ತಾರೆ.

Comments are closed.