Tukali Santhosh Car Accident: ಬಡವ ಬಡವ ಅಂದು ಖರೀದಿ ಮಾಡಿದ್ದ ಕಾರ್ ಗೆ ಅಪಘಾತ – ಪಾಪ ತುಕಾಲಿರವರಿಗೆ ಶಾಕ್

Tukali Santhosh Car Accident: ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ತುಕಾಲಿ ಸಂತೋಷ್ ರವರಿಗೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಶಾ-ಕ್ ಕಾದಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತುಕಾಲಿ ಸಂತೋಷ ಇತ್ತೀಚಿಗಷ್ಟೇ ಒಂದು ಹೊಸ ಕಾರ್ ಅನ್ನು ಖರೀದಿ ಮಾಡಿದರು. ಆದರೆ ಆ ಕಾರ್ ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಈಗ ತುಕಾಲಿ ಸಂತೋಷ ರವರಿಗೆ ಅ-ಪಘಾತ ಆಗಿದೆ. ಈ ಅಪ-ಘಾತದಲ್ಲಿ ತುಕಾಲಿ ಸಂತೋಷ್ ರವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂಬುದನ್ನು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಕುಣಿಗಲ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಕಾಲಿ ಸಂತೋಷ್ ರವರ ಕಾರಿನ ಅ-ಪಘಾತ ನಡೆದಿದೆ ಎಂಬುದಾಗಿ ತಿಳಿದು ಬಂದಿದ್ದು ರಿಕ್ಷಾದವನೇ ಎದುರಿಗೆ ಬಂದು ಗುದ್ದಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ರಾತ್ರಿ 7:00 ಸಂದರ್ಭದಲ್ಲಿ ನಡೆದಿರುವಂತಹ ಘಟನೆ ಇದಾಗಿದ್ದು ತುಮಕೂರಿನಿಂದ ತುಕಾಲಿ ಸಂತೋಷ್ ರವರು ಚಿತ್ರೀಕರಣವನ್ನು ಮುಗಿಸಿ ಮನೆಗೆ ಬರುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಇದರ ಬಗ್ಗೆ ಮಾತನಾಡಿರುವ ಅವರು ಏಕಾಯಕಿಯಾಗಿ ಆಟೋ ಡ್ರೈವರ್ ನಮಗೆ ಬಂದು ಗುದ್ದಿದ್ದಾನೆ ನಾವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಹಾಗೂ ಪೊಲೀಸರು ನಾಳೆ ಬರೋದಿಕ್ಕೆ ಹೇಳಿದ್ದು ಅನ್ನೋದಾಗಿ ಘಟನೆಯ ಬಗ್ಗೆ ತುಕಾಲಿ ಸಂತೋಷ್ ರವರು ಹೇಳಿಕೊಂಡಿದ್ದಾರೆ.

ಸಣ್ಣಪುಟ್ಟ ಗಾಯಗಳಾಗಿರುವಂತಹ ಆಟೋ ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ನಮಗೆ ಯಾವುದೇ ರೀತಿಯ ಅಪಾಯ ಆಗಿಲ್ಲ ಎನ್ನುವುದಾಗಿ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಇಬ್ಬರೂ ಕೂಡ ಹೇಳಿಕೊಂಡಿದ್ದಾರೆ. ಕಾರನ್ನು ಪೊಲೀಸ್ ಸ್ಟೇಷನ್ನಲ್ಲಿ ಇರಿಸಲಾಗಿದೆ. ಇನ್ನು ಈ ಸಂದರ್ಭದಲ್ಲಿ ತುಕಾಲಿ ಸಂತೋಷ ಅವರ ಜೊತೆಗೆ ಅವರ ಪತ್ನಿ ಆಗಿರುವಂತಹ ಮಾನಸ ಕೂಡ ಇದ್ರು ಅನ್ನೋದು ತಿಳಿದುಬಂದಿದೆ. ಬೇರೆ ಕಾರಿನ ಮೂಲಕ ದಂಪತಿಗಳಿಬ್ಬರೂ ಕೂಡ ಮಂಡ್ಯಕ್ಕೆ ತೆರಳಿದ್ದಾರೆ.

ಹಾಸ್ಯ ಕಲಾವಿದರಾಗಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ತುಕಾಲಿ ಸಂತೋಷ್ ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡುವ ಮೂಲಕ ಕರ್ನಾಟಕದ ಮನೆ ಮನೆಗೆ ಕೂಡ ತಲುಪಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೂಡ ತುಕಾಲಿ ಸಂತೋಷ್ ಇನ್ನಷ್ಟು ಹೆಚ್ಚಿನ ಜನಪ್ರಿಯ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರ ಸ್ನೇಹವನ್ನು ಕೂಡ ಸಾಕಷ್ಟು ಅಭಿಮಾನಿಗಳು ಕೊಂಡಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ತುಕಾಲಿ ಸಂತೋಷ್ ರವರಿಗೆ ಸಾಕಷ್ಟು ಆಫರ್ಗಳು ಕೂಡ ಸಿಕ್ಕಿದೆ ಅನ್ನೋದಾಗಿ ತಿಳಿದು ಬಂದಿದೆ. ಇದೇ ಕಾರಣದಿಂದಾಗಿ ಇತ್ತೀಚಿಗಷ್ಟೇ ಸಂತೋಷ್ ಕಿಯಾ ಸಂಸ್ಥೆಯ ಹೊಸ ಕಾರನ್ನು ಖರೀದಿಸಿದರು. ಆದರೆ ವಿಧಿಯ ಕೈವಾಡ ಎನ್ನುವಂತೆ ಖರೀದಿಸಿರುವಂತಹ ಕೆಲವೇ ದಿನಗಳಲ್ಲಿ ಈ ಅಹಿತಕರ ಘಟನೆ ನಡೆದಿದೆ. ಆದರೆ ಅದೃಷ್ಟ ಎನ್ನುವಂತೆ ಸಂತೋಷ್ ರವರಿಗೆ ಯಾವುದೇ ರೀತಿಯ ದೊಡ್ಡ ಮಟ್ಟದ ಗಂಭೀರ ಅಪಾಯಗಳು ಸಂಭವಿಸಿಲ್ಲ.

Comments are closed.