Gold Rate: ಚಿಲ್ಲರೆ ಬೆಲೆಗೆ ಕುಸಿತ ಕಂಡ ಚಿನ್ನ – ಅಂಗಡಿಗೆ ಮುಗಿಬೀಳುತ್ತಿದ್ದಾರೆ ಜನರು. ಎಷ್ಟಾಗಿದೆ ಗೊತ್ತೇ?

Gold Rate: ಪ್ರತಿನಿತ್ಯ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳಲ್ಲಿ ಏರಿಳಿಕೆ ಕಂಡು ಬರುತ್ತಿರುವುದು ಸರ್ವೇಸಾಮಾನ್ಯವಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ (Gold Rate) ಏರಿಕೆಯನ್ನು ಕಂಡು ಬಂದಿದ್ದು ಈಗ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. MCX ನಲ್ಲಿ ತಿಳಿದು ಬಂದಿರುವ ಪ್ರಕಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನ ಮಾತ್ರವಲ್ಲ ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆ ಕಂಡು ಬಂದಿದೆ. ಇದುವರೆಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಚಿನ್ನದ ಬೆಲೆ 10 ಗ್ರಾಂ ಗೆ 3000 ರೂಪಾಯಿಗಳವರೆಗೆ ಒಟ್ಟಾರೆಯಾಗಿ ಏರಿಕೆಯಾಗಿತ್ತು.

MCX ಅಂದರೆ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್‌ನಲ್ಲಿ ಸದ್ಯದ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯೊಂದಿಗೆ ಕೆಲಸ ನಿರ್ವಹಿಸುತ್ತಿದೆ. ಆದರೆ ಸದ್ಯಕ್ಕೆ ಈಗ 0.18% ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು 10 ಗ್ರಾಂ ಗೆ 65,913 ರೂಪಾಯಿಗಳ ಬೆಲೆಯಲ್ಲಿ ಚಿನ್ನ ಇದೆ. ಬೆಳ್ಳಿಯ ದರದ ಬೆಲೆ ಸದ್ಯಕ್ಕೆ ಈಗ ಕೆಜಿಗೆ 74,458 ರೂಪಾಯಿ ಆಗಿದೆ.

IBJA ನಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 99 ಪ್ಯೂರಿಟಿಯ ಚಿನ್ನದ ಬೆಲೆಯ ಬಗ್ಗೆ ಮಾತನಾಡುವುದಾದರೆ 10 ಗ್ರಾಂ ಗೆ 65,615 ರೂಪಾಯಿ ಆಗಿರುತ್ತದೆ. 995 ಪ್ಯೂರಿಟಿಯ ಚಿನ್ನದ ಬೆಲೆ 65,353 ರೂಪಾಯಿ ಆಗಿರುತ್ತದೆ. 916 ಪ್ಯೂರಿಟಿಯ ಚಿನ್ನದ 10 ಗ್ರಾಂ ತೂಕದ ಬೆಲೆ 60,103 ರೂಪಾಯಿ ಆಗಿರುತ್ತದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಾಗತಿಕವಾಗಿ ನಡೆಯುವಂತಹ ಕೆಲವೊಂದು ಬದಲಾವಣೆಗಳ ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿಕೆಗಳು ಉಂಟಾಗುವುದು ಸರ್ವೇಸಾಮಾನ್ಯವಾಗಿದೆ. ಒಂದು ಹೇಳೇ ಚಿನ್ನದ ಮೇಲೆ ಹೂಡಿಕೆ ಮಾಡುವವರು ಫೆಬ್ರವರಿಯಲ್ಲಿ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡಿದ್ರೆ ಖಂಡಿತವಾಗಿ ಅವರು ದೊಡ್ಡ ಮಟ್ಟದಲ್ಲಿ ಲಾಭವನ್ನು ಸಂಪಾದನೆ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಲೆಕ್ಕಾಚಾರವನ್ನು ಗಮನಿಸಿದರೆ ಬರೋಬ್ಬರಿ 11,000ಗಳಷ್ಟು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಅಂದರೆ ಸರಿ ಸುಮಾರು 20 ಪ್ರತಿಶತದಷ್ಟು ಹೆಚ್ಚಿನ ಆದಾಯವನ್ನು ನೀಡಿದೆ.

IBJA ಹಾಗೂ MCX ಎರಡರಲ್ಲಿ ಕೂಡ ಚಿನ್ನದ ದರಗಳನ್ನು ನಿಗದಿಪಡಿಸುವ ಸಂದರ್ಭದಲ್ಲಿ ಅವುಗಳ ಪರಿಶುದ್ಧತೆ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಚಿನ್ನದ ಮೇಲೆ ಟ್ಯಾಕ್ಸ್ ಹಾಗೂ ಮೇಕಿಂಗ್ ಶುಲ್ಕಗಳನ್ನು ಅನ್ವಯಿಸಲಾಗುವುದಿಲ್ಲ. ನೀವು ಚಿನ್ನದ ಖರೀದಿ ಮಾಡುವ ಸಂದರ್ಭದಲ್ಲಿ ಮೇಕಿಂಗ್ ಚಾರ್ಜಸ್ ಹಾಗೂ ಟ್ಯಾಕ್ಸ್ ಗಳನ್ನು ಅನ್ವಯಿಸಿದ ನಂತರವಷ್ಟೇ ಖರೀದಿ ಮಾಡಲು ಸಾಧ್ಯ.

ಪರಿಶುದ್ಧತೆಗೆ ಅನುಗುಣವಾಗಿ ಪ್ರತಿ ಬಾರಿ ಚಿನ್ನದ ಬೆಲೆಯನ್ನು ನಿಗದಿಪಡಿಸಲಾಗುತ್ತದೆ ಹಾಗೂ ಚಿನ್ನ ಪ್ರಮುಖವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವಂತಹ ಬದಲಾವಣೆಗಳಿಗೂ ಕೂಡ ತನ್ನ ಬೆಲೆಯನ್ನು ಏರಿಳಿಕೆ ಮಾಡುವಂತಹ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಈಗಾಗಲೇ ವಿಶ್ವದಲ್ಲಿ ನಡೆಯುತ್ತಿರುವಂತಹ ರಷ್ಯಾ ಉಕ್ರೇನ್ ಪರಿಸ್ಥಿತಿ ಕಾರಣದಿಂದಲೂ ಕೂಡ ಆಗಿರಬಹುದು ಅಥವಾ ಅಮೆರಿಕ ದೇಶದ ಬ್ಯಾಂಕಿಂಗ್ ನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಲೂ ಕೂಡ ಚಿನ್ನದ ಬೆಲೆಯಲ್ಲಿ ವ್ಯತ್ಯಾಯ ಆಗುವ ಸಾಧ್ಯತೆ ಉಂಟಾಗುತ್ತದೆ.

Comments are closed.