Astrology: ಕುಂಭ ರಾಶಿಗೆ ಮಂಗಳನ ಸ್ಥಾನಪಲ್ಲಟ. ಈ ಐದು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ನಿವೂ ಆ ಅದೃಷ್ಟವಂತರಾರ್ಗಿಬಹುದು ನೋಡಿ!

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 15 ರಂದು ಕುಂಭ ರಾಶಿಗೆ ಮಂಗಳನ ಸ್ಥಾನಪಲ್ಲಟ ಆಗಲಿದೆ. ಇನ್ನು ಈ ಸಂದರ್ಭದಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5 ರಾಶಿಯವರಿಗೆ ವಿಶೇಷವಾದ ಅದೃಷ್ಟದ ಫಲಗಳು ದೊರಕಲಿವೆ. ಮಂಗಳ ಬಲವಾದ ಸ್ಥಾನದಲ್ಲಿದ್ದರೆ ಈ ರೀತಿ ನಡೆಯುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ದರೆ ಬನ್ನಿ ಆದಷ್ಟು ಒಂದು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

 ಕುಂಭ ರಾಶಿ (Aquarius)

ಉದ್ಯೋಗ ಕ್ಷೇತ್ರದಲ್ಲಿ ಕುಂಭ ರಾಶಿಯವರು ಹೇಳಿದ ಕೆಲಸವನ್ನು ಸಮಯಕ್ಕಿಂತ ಮುಂಚೆ ಮಾಡುವುದರಿಂದಾಗಿ ಅವರಿಗೆ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳ ಸೇರಿದಂತೆ ಇನ್ನಿತರ ಉತ್ತಮ ಲಾಭಗಳು ಸಿಗಲಿವೆ. ಹೊಸ ಕೆಲಸವನ್ನು ಪ್ರಾರಂಭ ಮಾಡೋದಕ್ಕಿಂತ ಮುಂಚೆ ನಿಮಗೆ ನೀಡಿರುವಂತಹ ಕೆಲಸಗಳನ್ನು ಪೂರ್ತಿಗೊಳಿಸುವುದು ಉತ್ತಮ. ಒಂದು ವೇಳೆ ಖರ್ಚುಗಳು ಹೆಚ್ಚಾದರೆ ಅವುಗಳನ್ನು ನಿಯಂತ್ರಣ ಮಾಡುವುದನ್ನ ಕಲಿಬೇಕು. ಉಳಿತಾಯ ಮಾಡಿದ ಹಣದಿಂದ ಹೂಡಿಕೆ ಮಾಡಿದರೆ ಖಂಡಿತವಾಗಿ ನಿಮಗೆ ಅದರಲ್ಲಿ ಕೂಡ ಲಾಭ ಉಂಟಾಗಲಿದೆ. ನಿಮ್ಮ ಜೀವನದಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗಲಿವೆ.

 ಧನು ರಾಶಿ (Sagittarius)

ನಿಮ್ಮಲ್ಲಿರುವಂತಹ ಜ್ಞಾನದಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಲಾಭವನ್ನು ಸಂಪಾದನೆ ಮಾಡುವಂತಹ ಪ್ರಯತ್ನವನ್ನು ನೀವು ಮಾಡಬಹುದಾಗಿದೆ ಹಾಗೂ ಅದರಲ್ಲಿ ನೀವು ಯಶಸ್ಸನ್ನು ಕೂಡ ಪಡೆಯಲಿದ್ದೀರಿ. ನೀವು ಹೊಸ ಉದ್ಯಮದಲ್ಲಿ ಮಾಡುವಂತಹ ಹೊಸ ಹೂಡಿಕೆಯಿಂದಾಗಿ ಲಾಭವನ್ನು ಪಡೆದುಕೊಳ್ಳುವುದು ನಿಶ್ಚಿತ. ಹಣವನ್ನು ಹೂಡಿಕೆ ಮಾಡುವುದಕ್ಕೆ ಇದೊಂದು ಒಳ್ಳೆಯ ಸಮಯ ಕೂಡ ಆಗಿದೆ ಆದರೆ ವಿನಾಕಾರಣ ಯಾವುದೇ ಅನಗತ್ಯ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವುದಕ್ಕೆ ಹೋಗಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಧನುರಾಶಿಯವರಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ದೊರಕುವಂತಹ ಸಾಧ್ಯತೆ ಇದೆ.

 ಸಿಂಹ ರಾಶಿ (Leo)

ಪಾರ್ಟ್ನರ್ಶಿಪ್ ವ್ಯವಹಾರವನ್ನು ಮಾಡುವಂತಹ ಸಿಂಹರಾಶಿಯವರಿಗೆ ದೊಡ್ಡ ಮಟ್ಟದಲ್ಲಿ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಕೆಲಸ ಮಾಡುವಂತಹ ಸಿಂಹ ರಾಶಿಯವರಿಗೆ ತಮ್ಮ ಕೆಲಸದಲ್ಲಿ ಪ್ರಮೋಷನ್ ಸಿಗೋದು ಗ್ಯಾರಂಟಿ. ನೀವು ಈ ಹಿಂದೆ ಮಾಡಿರುವಂತಹ ಹೂಡಿಕೆಯಿಂದಾಗಿ ಈ ಸಂದರ್ಭದಲ್ಲಿ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮ ಸಂಗಾತಿಯ ವರ್ತನೆಯಲ್ಲಿ ಬೇರೆ ಚೇಂಜಸ್ ಕಾಣಿಸಿಕೊಳ್ಳಬಹುದು ಆದರೆ ಸರಿಯಾದ ರೀತಿಯಲ್ಲಿ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ನಿಮ್ಮ ಸ್ನೇಹಿತರ ಹಾಗೂ ಕುಟುಂಬಸ್ಥರ ಜೊತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿಕೊಂಡು ಹೋಗಿ ಇಲ್ಲವಾದರೆ ಸಂಬಂಧ ಕಡಿತಗೊಳ್ಳುವ ಸಾಧ್ಯತೆ ಇದೆ.

 ವೃಷಭ ರಾಶಿ (Taurus)

ಮಂಗಳದ ಆಶೀರ್ವಾದ ಎನ್ನುವುದು ವೃಷಭ ರಾಶಿಯವರ ಮೇಲೆ ಇದ್ದು ಮಾಡುವಂತ ಪ್ರತಿಯೊಂದು ಕೆಲಸಗಳಲ್ಲಿ ವೃಷಭ ರಾಶಿಯವರಿಗೆ ಗೆಲುವು ಶತಸಿದ್ಧವಾಗಿದೆ. ನೀವು ಕಳೆದ ಸಾಕಷ್ಟು ಸಮಯಗಳಿಂದ ಕಷ್ಟಪಟ್ಟು ಮಾಡುತ್ತಿರುವಂತಹ ಕೆಲಸಕ್ಕೆ ಸರಿಯಾದ ರೀತಿಯಲ್ಲಿ ಪ್ರತಿಫಲ ದೊರಕಲಿದೆ. ಆದರೆ ಈ ಸಂದರ್ಭದಲ್ಲಿ ನಿಮ್ಮ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಿಂದ ಹುಷಾರಾಗಿರಬೇಕು. ವ್ಯಾಪಾರ ಹಾಗು ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ನೀವು ಇನ್ನಷ್ಟು ಹೆಚ್ಚಿನ ಹಣವನ್ನು ಸಂಪಾದನೆ ಮಾಡಲಿದ್ದೀರಿ. ಸಾಕಷ್ಟು ಸಮಯಗಳಿಂದ ನಿಮ್ಮಿಂದ ದೂರವಾಗಿದ್ದ ಸಂಬಂಧಿಗಳು ಒಂದು ಶುಭ ಕಾರ್ಯಕ್ಕಾಗಿ ನಿಮ್ಮ ಜೊತೆ ಸೇರುವಂತಹ ಸಾಧ್ಯತೆ ಇರುತ್ತದೆ.

 ಮೇಷ ರಾಶಿ (Aries)

ನಿಮ್ಮ ಕಷ್ಟದ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಸುಲಭವಾಗಿ ಪೂರ್ಣಗೊಳ್ಳುತ್ತವೆ. ಸಾಕಷ್ಟು ಸಮಯಗಳಿಂದ ನೀವು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಗಳಿಂದಲೂ ಕೂಡ ಹೊರಬರುತ್ತೀರಿ ಹಾಗೂ ನಿಮ್ಮ ಕೈ ತುಂಬಾ ಹಣ ಸಂಪಾದನೆ ಆಗುತ್ತದೆ. ಕೆಲವೊಮ್ಮೆ ಕೆಲವು ವ್ಯಕ್ತಿಗಳನ್ನು ಹೆಚ್ಚಾಗಿ ನಂಬುವುದಕ್ಕೆ ಹೋಗಬೇಡಿ ನಿಮಗೆ ಮೋಸ ಆಗುವ ಸಾಧ್ಯತೆ ಇರುತ್ತದೆ. ನೀವು ಕಷ್ಟಪಟ್ಟು ಮಾಡುವಂತಹ ಕೆಲಸಕ್ಕೆ ನಿಮಗೆ ಸರಿಯಾದ ಪ್ರತಿಫಲ ದೊರಕಲಿದೆ. ಸಾಕಷ್ಟು ದೊಡ್ಡ ಮಟ್ಟದಲ್ಲಿ ಈ ಸಂದರ್ಭದಲ್ಲಿ ಹಣಕಾಸಿನ ಲಾಭವನ್ನು ಪಡೆದುಕೊಳ್ಳಲಿದ್ದೀರಿ.

Comments are closed.