RCB: ರಾಯಲ್ ಚಾಲೆಂಜರ್ ವಿಡಿಯೋ ಮಾಡಲು ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದ?

RCB: ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಮಾರ್ಚ್ 22 ರಿಂದ ಈ ಬಾರಿಯ ಹದಿನಾರನೇ ಅವತರಿಣಿಕೆಯ ಐಪಿಎಲ್ ಸೀಸನ್ ಪ್ರಾರಂಭವಾಗಲಿದೆ. ಪ್ರಮುಖವಾಗಿ ಮೊದಲನೇ ಪಂದ್ಯವೇ ಬದ್ಧ ಎದುರಾಳಿಗಳಾಗಿರುವಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ. ಈ ಬಾರಿ ಈ ಪಂದ್ಯ ನಡಿತಾ ಇರೋದು ಚೆನ್ನೈನ ತವರು ಮೈದಾನದಲ್ಲಿ. ಈಗಾಗಲೇ ಎರಡು ತಂಡಗಳು ಐಪಿಎಲ್ ನಲ್ಲಿ 30 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ 20 ಬಾರಿ ಚೆನ್ನೈ ತಂಡ ಗೆದ್ದಿದ್ದು 10 ಬಾರಿ ಬೆಂಗಳೂರು ತಂಡ ಗೆದ್ದಿದೆ.

ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಇದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಈ ಗುಡ್ ನ್ಯೂಸ್ ಎನ್ನೋದು ಡಿವೈನ್ ಸ್ಟಾರ್ ರಿಶಭ್ ಶೆಟ್ಟಿ ರವರ ಮೂಲಕ. ಸಾಮಾನ್ಯವಾಗಿ ರಿಷಬ್ ಶೆಟ್ಟಿ ಅವರಿಂದ ಅವರ ಅಭಿಮಾನಿಗಳು ಅವರ ಮುಂದಿನ ಸಿನಿಮಾದ ಅಪ್ಡೇಟ್ ಬಗ್ಗೆ ನಿರೀಕ್ಷೆ ಮಾಡಬಹುದು. ಆದರೆ ರಿಶಬ್ ಶೆಟ್ಟಿ ಈ ಬಾರಿ ತಂದಿರೋದು ಆರ್‌ಸಿಬಿ ಅಭಿಮಾನಿಗಳಿಗೆ ಸಂತೋಷದ ಸುದ್ದಿ. ಇತ್ತೀಚಿಗಷ್ಟೇ ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಎನ್ನುವಂತಹ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎನ್ನುವುದಾಗಿ ಮರುನಾಮಕರಣ ಮಾಡುವುದಕ್ಕೆ ಸಿದ್ಧವಾಗಿರುವ ಅಂತಹ ವಿಡಿಯೋ ಪ್ರೋಮೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ರಿಷಬ್ ಶೆಟ್ಟಿ ಕಾಂತಾರದ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಈ ಚಿತ್ರೀಕರಣ ಮಾಡುವುದಕ್ಕೆ ರಿಷಬ್ ಶೆಟ್ಟಿ ಅವರು ಎಷ್ಟು ಹಣವನ್ನು ಪಡೆದುಕೊಂಡಿದ್ದಾರೆ ಅನ್ನೋದಾಗಿ ಈಗ ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಕಾಂತಾರ ಸಿನಿಮಾದ ನಂತರ ಅವರ ಬೇಡಿಕೆ ಎನ್ನುವುದು ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಇನ್ನು ಆರ್ಸಿಬಿ ಕೂಡ ದೊಡ್ಡ ಬ್ರಾಂಡ್ ಆಗಿದ್ದು ಅದರ ಬ್ರಾಂಡಿಂಗ್ ಗಾಗಿ ರಿಷಬ್ ಶೆಟ್ಟಿ ಅವರನ್ನು ಕಾಸ್ಟ್ ಮಾಡಿರೋದು ಇನ್ನು ದೊಡ್ಡ ವಿಚಾರ ಅಂತ ಹೇಳಬಹುದು. ಇದೇ ಕಾರಣಕ್ಕಾಗಿ ರಿಷಬ್ ಶೆಟ್ಟಿ ಆರ್ ಸಿ ಬಿ ತಂಡದ ಈ ಪ್ರೊಮೋಗಾಗಿ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಅನ್ನೋದಕ್ಕೆ ತಿಳಿದು ಬಂದಿದೆ. ಸದ್ಯಕ್ಕೆ ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ದಕ್ಕಿಂತಲೂ ಮುಂಚೆ ಅವರು ನಟಿಸಿರುವಂತಹ ಆರ್‌ಸಿಬಿ ತಂಡದ ಜಾಹೀರಾತು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಹೇಳಬಹುದಾಗಿದೆ.

ಈ ಮೂಲಕ ಈ ಬಾರಿ ಆರ್ಸಿಬಿ ತಂಡದ ರಾಯಭಾರಿಯಾಗಿ ರಿಷಬ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದರು ಕೂಡ ತಪ್ಪಾಗಲ್ಲ. ಸದ್ಯದ ಮಟ್ಟಿಗೆ ಆರ್‌ಸಿಬಿಯ ಮೊದಲ ಪಂದ್ಯ ಪ್ರಾರಂಭ ಆಗುವುದಕ್ಕಿಂತ ಮುಂಚೇನೆ ಅದರ ಅನ್ ಬಾಕ್ಸಿಂಗ್ ಕಾರ್ಯಕ್ರಮದ ಸುದ್ದಿ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಹರಿದಾಡುತ್ತಿದೆ. ಈ ಅನ್ ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಯಾವೆಲ್ಲ ಸರ್ಪ್ರೈಸ್ ಗಳು ಇರಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.