School: ಶಾಲೆಗೇ ರಜಾ ಕೊಡಬೇಡಿ- ಹೊಟ್ಟೆ ಹಸಿಯುತ್ತೆ. ವಿದ್ಯಾರ್ಥಿ ಬರೆದ ಪತ್ರದಲ್ಲಿ ಏನಿತ್ತು ಗೊತ್ತೇ? ಕಣ್ಣೀರು ಬರುತ್ತೆ ಕಣ್ರೀ.

School: ಈಗಾಗಲೇ ಬಿಸಿಲಿನ ಬೇಗೆ ಯಾವ ರೀತಿಯಲ್ಲಿ ಭಾರತದಾದ್ಯಂತ ಹೆಚ್ಚಾಗಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದಾಗ ಅಗತ್ಯ ಇಲ್ಲ ಎನ್ನುವುದಾಗಿ ಭಾವಿಸುತ್ತೇವೆ. ಇದೇ ಕಾರಣದಿಂದಾಗಿಯೇ ತೆಲಂಗಾಣದ ಸರ್ಕಾರ ಮಾರ್ಚ್ 15ರಿಂದ ಪ್ರಾರಂಭಿಸಿ ಅರ್ಧ ದಿನಗಳ ಕಾಲ ಮಾತ್ರ ಶಾಲೆಯನ್ನು ನಡೆಸಬೇಕು ಎನ್ನುವುದಾಗಿ ಶಿಕ್ಷಣ ಇಲಾಖೆಗೆ ಕರೆ ಕೊಟ್ಟಿತ್ತು. ಈಗಾಗಲೇ ತೆಗೆದುಕೊಂಡಿರುವಂತಹ ಈ ನಿರ್ಧಾರದಂತೆ ಮಾರ್ಚ್ 15 ರಿಂದ ಹಾಫ್ ಡೇ ಸ್ಕೂಲ್ ಮಾಡಲು ಎಲ್ಲಾ ಶಾಲೆಗಳು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿವೆ. ಆದರೆ ಇದರ ನಡುವೆ ಈಗ ಒಬ್ಬ ಹುಡುಗ ಬರೆದಿರುವಂತಹ ಪತ್ರ ಎಲ್ಲರ ಕಣ್ಣಂಚಿನಲ್ಲಿ ಹನಿ ನೀರು ಜಿನುಗುವಂತೆ ಮಾಡಿದೆ.

ಈಗ ಕಂಡುಬರುತ್ತಿರುವಂತಹ ನಿರೀಕ್ಷೆಗೂ ಮೀರಿದ ಬಿಸಿಲಿನ ಕಾರಣದಿಂದಾಗಿಯೇ ತೆಲಂಗಾಣ ಸರ್ಕಾರ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅರ್ಧ ದಿನದ ಶಾಲೆಯನ್ನು ಮಾರ್ಚ್ 15 ರಿಂದ ಅರ್ಧ ದಿನದ ಶಾಲೆಯನ್ನು ಘೋಷಣೆ ಮಾಡಿತು, ಆದರೆ ಈ ಹುಡುಗ ಅರ್ಧ ದಿನ ಶಾಲೆಯನ್ನು ನಡೆಸಿದರೆ ಮಧ್ಯಾಹ್ನದ ಬಿಸಿ ಊಟ ತಪ್ಪಿ ಹೋಗುತ್ತದೆ ಹೀಗಾಗಿ ಅರ್ಧ ದಿನ ಶಾಲೆ ಮಾಡಬೇಡಿ ಪೂರ್ತಿ ದಿನ ಮಾಡಿ ಎಂಬುದಾಗಿ ಭಾವನಾತ್ಮಕವಾಗಿ ಪತ್ರವನ್ನು ಬರೆದಿದ್ದಾನೆ. ಪತ್ರದ ಮೂಲಕ ಈ ಮನವಿಯನ್ನು ಮಾಡಿರುವಂತಹ ಹುಡುಗನ ಹೆಸರು ಸಾತ್ವಿಕ್. ಬಿಸಿಲು ಹೆಚ್ಚಾಗಿರುವ ಬೆನ್ನಲ್ಲಿ ಮಕ್ಕಳಿಗೆ ತೊಂದರೆ ಆಗಬಾರದು ಹಾಗೂ ಅವರ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿತ್ತು ಆದರೆ ಈ ರೀತಿಯ ಕಷ್ಟವನ್ನು ಕೂಡ ಕೆಲವೊಂದು ಮಕ್ಕಳು ಅನುಭವಿಸುತ್ತಿದ್ದಾವೆ ಎಂಬುದಾಗಿ ಈ ಪತ್ರದ ಮೂಲಕ ತಿಳಿದು ಬಂದಿದೆ.

ಮಾರ್ಚ್ 15ರಿಂದ ಬೆಳಗ್ಗೆ 8:30 ಇಂದ ಪ್ರಾರಂಭಿಸಿ ಮಧ್ಯಾಹ್ನ 12:30 ವರೆಗೆ ಕಾರ್ಯನಿರ್ವಹಿಸುವುದಕ್ಕೆ ಸರ್ಕಾರ ಶಿಕ್ಷಣ ಇಲಾಖೆಯಿಂದ ಪ್ರತಿಯೊಂದು ಶಾಲೆಗಳಿಗೂ ನೋಟಿಸ್ ಕಳಿಸಿತ್ತು. ಬೇರೆ ಅನುಕೂಲಸ್ಥ ಮಕ್ಕಳು ಮಧ್ಯಾಹ್ನದಿಂದ ರಜೆ ಸಿಗುತ್ತೆ ಎಂಬುದಾಗಿ ಸಂತೋಷಪಡುತ್ತಿದ್ದರೆ ಈ ಹುಡುಗ ಮಾತ್ರ ಮಧ್ಯಾಹ್ನದ ಬಿಸಿ ಊಟ ಸಿಕ್ತಾ ಇಲ್ಲ ಅನ್ನೋ ಬೇಸರದಲ್ಲಿದ್ದಾನೆ.

ಸಾತ್ವಿಕ್ ತನ್ನ ಪತ್ರದಲ್ಲಿ ಬೇಸಿಗೆ ರಜೆಯಲ್ಲಿ ಮಧ್ಯಾಹ್ನ ಬೇಗ ಮನೆಗೆ ಹೋದರೆ ಊಟ ಸಿಗೋದಿಲ್ಲ. ಅಜ್ಜ ಹಾಗೂ ಅಜ್ಜಿ ತಮ್ಮ ಪಿಂಚಣಿಯಿಂದ ಬರುವಂತಹ ಹಣದಿಂದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ತುಂಬಾ ಕಷ್ಟ ಇದೆ ರಜೆ ಕೊಡಬೇಡಿ ನಾನು ಶಾಲೆಯಲ್ಲಿ ಇದ್ದು ಬಿಸಿ ಊಟ ಸೇವಿಸುತ್ತೇನೆ ಹಾಗೂ ಓದಿ ಮುಂದೆ ಬರ್ತೇನೆ ಅನ್ನೋದಾಗಿ ಆತ ಬರೆದುಕೊಂಡಿದ್ದೇನೆ. ಪ್ರತಿಯೊಬ್ಬರು ಕೂಡ ಸಾತ್ವಿಕ್ ಬರೆದಿರುವಂತಹ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದು ತಮ್ಮದೇ ಮನೆಯ ಮಗುವಿನ ಪರಿಸ್ಥಿತಿ ಇದಾಗಿರಬಹುದು ಎನ್ನುವ ರೀತಿಯಲ್ಲಿ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ತೆಲಂಗಾಣ ಸರ್ಕಾರ ಈ ಪತ್ರವನ್ನು ನೋಡುತ್ತಾ ಅಥವಾ ನೋಡಿದ್ಮೇಲೆ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.