Relationship: ಅಪ್ಪಿ ತಪ್ಪಿ ನಿಮ್ಮ ಹೆಂಡತಿಗೆ ಈ ವಿಷಯಗಳನ್ನು ಹೇಳಲೇಬೇಡಿ- ಹೇಳಿದರೆ ಅಷ್ಟೇ ನಿಮ್ಮನ್ನು ಬಿಟ್ಟು ದೂರ ಹೋಗ್ತಾರೆ

Relationship: ನಮ್ಮ ಭಾರತದ ಇತಿಹಾಸದಲ್ಲಿ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂಬುದಾಗಿ ಆಚಾರ್ಯ ಚಾಣಕ್ಯರನ್ನು ಕರೆಯುತ್ತಾರೆ. ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರದಲ್ಲಿ ಇಂದಿನ ಜನಜೀವನಕ್ಕೆ ತಕ್ಕಂತೆ ಕೂಡ ಸಾಕಷ್ಟು ವಿಚಾರಗಳನ್ನು ಹಾಗೂ ಇಂದಿಗೂ ಪ್ರಸ್ತುತ ಆಗುವ ರೀತಿಯಲ್ಲಿ ಬರಹಗಳನ್ನು ಬರೆದಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ತಮ್ಮ ಹೆಂಡತಿಗೆ ಮದುವೆಯಾದ ನಂತರ ಈ ಐದು ಪ್ರಮುಖ ವಿಚಾರಗಳನ್ನು ತಿಳಿಸಬಾರದು ಎಂಬುದಾಗಿ ಅವರು ಹೇಳಿದ್ದು ಬನ್ನಿ ಆ ವಿಚಾರಗಳು ಯಾವುವು ಎಂಬುದನ್ನು ತಿಳಿಯೋಣ.

  1. ಮೊದಲನೇದಾಗಿ ಗಂಡ ಮದುವೆ ಆದ್ಮೇಲೆ ದಾನ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೂಡ ಪತ್ನಿಗೆ ತಾನು ಮಾಡುತ್ತಿರುವಂತಹ ದಾನದ ಬಗ್ಗೆ ಹೇಳಬಾರದಂತೆ. ಇದರಿಂದಾಗಿ ನೀವು ಮಾಡುವಂತಹ ದಾನ ಕರ್ಮದ ಪುಣ್ಯಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಹೀಗಾಗಿ ಈ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ನ್ಯೂ ದಾನ ಮಾಡುವಂತಹ ವಿಚಾರವನ್ನು ಹಾಗೂ ಎಷ್ಟು ದಾನ ಮಾಡಿದ್ದೀರಿ ಎಂಬುದನ್ನು ನಿಮ್ಮ ಹೆಂಡತಿಗೆ ಹೇಳಬಾರದು.
  2. ಇನ್ನೊಂದು ಪ್ರಸಿದ್ಧವಾದ ಮಾತಿದೆ. ಹೆಂಡತಿಗೆ ಯಾವುದೇ ಕಾರಣಕ್ಕೂ ಗಂಡ ತನ್ನ ದುಡಿಮೆ ಅಥವಾ ಗಳಿಕೆಯನ್ನು ತಿಳಿಸಬಾರದು. ಇದರಿಂದಾಗಿ ಆಕೆ ಗಂಡ ಹೆಚ್ಚು ದುಡಿಯುತ್ತಾನೆ ಎಂಬುದಾಗಿ ತಿಳಿದು ಹೆಚ್ಚಿನ ಖರ್ಚನ್ನು ಪ್ರಾರಂಭಿಸುತ್ತಾಳೆ. ಈ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ಗಂಡ ಮದುವೆ ಆದ ಮೇಲೆ ತಾನು ನಿಜವಾಗಿ ಎಷ್ಟು ದುಡಿತೇನೆ ಅನ್ನೋದನ್ನ ಹೆಂಡತಿಗೆ ಹೇಳಬಾರದು. ಹಾಗಂತ ಹೆಂಡತಿಯ ಬಯಕೆಗಳನ್ನು ತೀರಿಸದೇ ಇರೋದಕ್ಕೆ ಇದು ಕಾರಣವಾಗಬಾರದು.
  3. ನಿಮ್ಮಲ್ಲಿ ಯಾವುದಾದ್ರೂ ಕೊರತೆ ಅಥವಾ ದೌರ್ಬಲ್ಯ ಇದ್ರೆ ಅದನ್ನು ಕೂಡ ನಿಮ್ಮ ಹೆಂಡತಿ ನಿಮಗೆ ಎಷ್ಟೇ ನಿಕಟವಾಗಿದ್ದರೂ ಕೂಡ ಬಿಚ್ಚಿಡಬಾರದು. ಕೆಲವೊಮ್ಮೆ ನಿಮ್ಮ ನಡುವೆ ಜಗಳ ಆಗುವ ಸಂದರ್ಭದಲ್ಲಿ ನಿಮ್ಮ ಕೊರತೆಯ ವಿಚಾರವನ್ನು ಇಟ್ಟುಕೊಂಡು ನಿಮ್ಮ ಮನಸ್ಸಿಗೆ ಗಾಸಿಗೊಳಿಸುವಂತಹ ಕೆಲಸವನ್ನು ಕೂಡ ನಿಮ್ಮ ಹೆಂಡತಿ ಮಾಡಬಹುದಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಕೊರತೆಗಳನ್ನು ನಿಮ್ಮ ಪತ್ನಿಯಲ್ಲಿ ಹೇಳಿಕೊಳ್ಳಬಾರದು. ಬೇರೆಯವರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಬಾಯಿ ತಪ್ಪಿ ಇದರ ಬಗ್ಗೆ ಬೇರೆಯವರಿಗೆ ಹೇಳಿದ್ರು ಕೂಡ ಹೇಳಬಹುದು. ಇದರಿಂದಾಗಿ ಸಮಾಜದಲ್ಲಿ ನಿಮ್ಮ ಬಗ್ಗೆ ಕೆಲವೊಂದು ನಗರತ್ಮಕ ಭಾವನೆಗಳು ಉಂಟಾಗಬಹುದು.
  4. ಪುರಾಣ ಕಾಲದಿಂದಲೂ ನೀವು ನೋಡಿಕೊಂಡು ಬಂದಿರಬಹುದು ಮಹಿಳೆಯರು ಯಾವತ್ತೂ ಕೂಡ ಯಾವುದೇ ರಹಸ್ಯ ವಿಚಾರಗಳನ್ನು ತಮ್ಮ ಮನಸ್ಸಿನೊಳಗೆ ಉಳಿಸಿಕೊಂಡು ಬಂದವರಲ್ಲ. ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಯಾವುದಾದರೂ ರಹಸ್ಯವನ್ನು ಹೊಂದಿದ್ದರೆ ಅದನ್ನು ನಿಮ್ಮ ಹೆಂಡತಿಯ ಬಳಿ ಹೇಳಿಕೊಳ್ಳಬೇಡಿ. ನಿಮ್ಮ ವಿರುದ್ಧವೇ ಆ ರಹಸ್ಯವನ್ನು ಅಸ್ತ್ರವಾಗಿ ಅವರು ಬಳಸಿಕೊಳ್ಳಬಹುದಾಗಿದೆ.
  5. ಒಂದು ವೇಳೆ ಮದುವೆ ಆಗುವುದಕ್ಕಿಂತ ಮುಂಚೆ ನಿಮ್ಮ ಜೀವನದಲ್ಲಿ ಏನಾದರೂ ನಡೆದಿದ್ದರೆ ಹಾಗೂ ಅದು ನಿಮ್ಮ ಹೆಂಡತಿಗೆ ಹೇಳಲು ಯೋಗ್ಯವಾಗದ ವಿಚಾರವಾಗಿದ್ರೆ ಅದನ್ನ ಯಾವತ್ತು ಕೂಡ ನಿಮ್ಮ ಪತ್ನಿಯ ಬಳಿ ಚರ್ಚಿಸುವುದಕ್ಕೆ ಹೋಗಬೇಡಿ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಅಥವಾ ವೈಮನಸ್ಸು ಉಂಟಾಗುವಂತಹ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಇವಿಷ್ಟು ವಿಚಾರಗಳನ್ನು ಯಾವತ್ತೂ ಕೂಡ ಮದುವೆಯಾಗಿರುವಂತಹ ಪುರುಷ ತನ್ನ ಪತ್ನಿಗೆ ಹೇಳಬಾರದು ಎಂಬುದಾಗಿ ಹೇಳುತ್ತಾರೆ.

Comments are closed.