Rashmika Mandanna: ಇದು ರಾಜ್ಯವೇ ಖುಷಿ ಪಡುವ ಸುದ್ದಿ- ಕನ್ನಡಿಗರ ಹೆಮ್ಮೆ ರಶ್ಮಿಕಾ ಮಾಡಿದ್ದೇನು ಗೊತ್ತೇ? ಇದು ಕನ್ನಡತಿ ಅಂದ್ರೆ

Rashmika Mandanna: ಕನ್ನಡ ಚಿತ್ರರಂಗದ ಮೂಲಕ ಸಿನಿಮಾಲೋಕಕ್ಕೆ ಪಾದರ್ಪಣೆ ಮಾಡಿದ ರಶ್ಮಿಕ ಮಂದಣ್ಣ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಪ್ರತಿಯೊಂದು ಭಾಷೆಗಳಲ್ಲಿ ಕೂಡ ದೊಡ್ಡ ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಂಡಿದ್ದಾರೆ. ಎಲ್ಲಾ ಕಡೆ ಅಭಿಮಾನಿಗಳನ್ನು ಹೊಂದಿರುವಂತಹ ರಶ್ಮಿಕ ಮಂದಣ್ಣ ಯಾವುದೇ ಭಾಷೆಯಲ್ಲಿ ಕೂಡ ಹೋಗಿ ಸಿನಿಮಾ ಮಾಡಿದರು ಅವರನ್ನು ನೋಡುವುದಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ.

ಕನ್ನಡದ ವಿಚಾರದಲ್ಲಿ ಕೆಲವೊಮ್ಮೆ ಅವರು ನಿರ್ಲಕ್ಷ್ಯ ಧೋರಣೆ ತೋರಿದರೂ ಕೂಡ ಎಷ್ಟೇ ಆಗಲಿ ರಶ್ಮಿಕಾ ಮಂದಣ್ಣ ನಮ್ಮ ಕರ್ನಾಟಕದವರು ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಪುಷ್ಪ ಸಿನಿಮಾದಿಂದ ಭಾರತೀಯ ಚಿತ್ರಾಂಗದಲ್ಲಿ ಮತ್ತಷ್ಟು ಹೆಚ್ಚಿನ ಜನಪ್ರಿಯನ್ನು ಪಡೆದುಕೊಂಡಿರುವಂತಹ ರಶ್ಮಿಕ ಮಂದಣ್ಣ ಈಗ ಕನ್ನಡಿಗರು ಹೆಮ್ಮೆ ಪಡುವಂತಹ ಮತ್ತೊಂದು ಗೌರವವನ್ನು ಕೂಡ ಪಡೆದುಕೊಂಡಿದ್ದಾರೆ. ಕ್ರಂಚಿ ರೋಲ್ ಅನಿಮೆ ಅವಾರ್ಡ್ಸ್ ಗೆ ಭಾರತದ ಪರವಾಗಿ ಜಪಾನ್ಗೆ ರಶ್ಮಿಕ ಮಂದಣ್ಣ ಅವರು ಹೋಗಿದ್ದರು. ಈ ಗೌರವವನ್ನು ಪಡೆದುಕೊಂಡಿರುವಂತಹ ಭಾರತದ ಏಕೈಕ ನಟಿಯಾಗಿ ರಶ್ಮಿಕ ಮಂದಣ್ಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರಾಗಿ ಇದು ನಿಜಕ್ಕೂ ಕೂಡ ನಮಗೆ ಹೆಮ್ಮೆಯ ವಿಚಾರ ಹೇಳಬಹುದಾಗಿದೆ.

ಇದರ ಜೊತೆಗೆ ಮತ್ತೊಂದು ಖುಷಿಪಡುವ ವಿಚಾರ ಏನಂದರೆ ರಶ್ಮಿಕಾ ಮಂದಣ್ಣ ಬ್ರಾಂಡ್ ಅಂಬಾಸಿಡರ್ ಆಗಿರುವಂತಹ ಜಪಾನಿನ ಫ್ಯಾಷನ್ ಬ್ರಾಂಡ್ ಆಗಿರುವ ಒನಿಟ್ಸುಕಾ ಟೈಗರ್ ಮಿಲನ್ ಫ್ಯಾಶನ್ ವೀಕ್ ನಲ್ಲಿ ಮೊದಲನೇ 10 ಬ್ರ್ಯಾಂಡ್ಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 75 ಲಕ್ಷ ಡಾಲರ್ಗಳಿಗಿಂತಲೂ ಹೆಚ್ಚಾಗಿದೆ ಇನ್ನು ಮಿಲನ್ ಫ್ಯಾಶನ್ ವೀಕ್ ನಲ್ಲಿ ರಶ್ಮಿಕ ಮಂದಣ್ಣ ರಾಂಪ್ ವಾಕ್ ಮಾಡುವ ಮೂಲಕ ತಮ್ಮ ಬ್ರಾಂಡಿನ ಪ್ರಚಾರವನ್ನು ಕೂಡ ಮಾಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಒಬ್ಬ ಫ್ಯಾಷನ್ ಐಕಾನ್ ಆಗಿ ರಶ್ಮಿಕ ಮಂದಣ್ಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯದ ಮಟ್ಟಿಗೆ ಪುಷ್ಪ 2 ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿರುವಂತಹ ರಶ್ಮಿಕ ಮಂದಣ್ಣ, ಈ ಸಿನಿಮಾದ ಬಿಡುಗಡೆಯ ನಂತರ ಇನ್ನಷ್ಟು ಹೆಚ್ಚಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಭಾರತೀಯ ಚಿತ್ರರಂಗದಲ್ಲಿ ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ಸಿನಿಮಾ ಮೂಲಗಳು ಹೇಳುತ್ತಿವೆ. ಯಾಕೆಂದರೆ ಸಾಕಷ್ಟು ದೊಡ್ಡ ಮಟ್ಟದ ಕ್ರೇಜ್ ಅನ್ನು ಹುಟ್ಟು ಹಾಕಿದ್ದ ಪುಷ್ಪ ಸಿನಿಮಾ ಪುಷ್ಪ 2 ಸಿನಿಮಾ ಗಾಗಿ ಪ್ರತಿಯೊಬ್ಬರು ಕಾಯುವ ರೀತಿಯಲ್ಲಿ ಮಾಡಿದೆ. ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿರುವಂತಹ ಪುಷ್ಪ ಸಿನಿಮಾದ ಎರಡನೇ ಅವತರಿಣಿಕೆ ಬಿಡುಗಡೆಯಾದ ನಂತರ ಸಾವಿರ ಕೋಟಿ ಸಮೀಪದಲ್ಲಿ ಕಲೆಕ್ಷನ್ ಮಾಡುವಂತಹ ಸಾಧ್ಯತೆ ಇದೆ ಎನ್ನುವಂತಹ ಲೆಕ್ಕಾಚಾರಗಳು ಕೂಡ ಈಗಿಂದಲೇ ನಡೆಯುತ್ತಿದೆ. ಉತ್ತರ ಭಾರತದ ಭಾಗದಲ್ಲಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದ್ದು ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆಯಾಗುವಂತಹ ಎಲ್ಲ ಸಾಧ್ಯತೆಗಳಿವೆ.

Comments are closed.