Goddess Lakshmi: ಹಣದ ಬಗ್ಗೆ ಯೋಚನೆ ಮಾಡೋದೇ ಬೇಡ ಈ ನಾಲ್ಕು ರಾಶಿಯವರ ಬಳಿ ಲಕ್ಷ್ಮಿಯ ಕೃಪೆ ಇದೆ.

Goddess Lakshmi: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಗಳ ಮೇಲೆ ಕೆಲವೊಂದು ನಿರ್ದಿಷ್ಟ ದೇವರುಗಳಿಗೆ ವಿಶೇಷವಾದ ಪ್ರೀತಿ ಹಾಗೂ ಒಲವು ಇರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿಗೆ ಯಾವೆಲ್ಲ ರಾಶಿಗಳ ಮೇಲೆ ಒಲವು ಅಥವಾ ಪ್ರೀತಿ ಇದೆ ಅನ್ನೋದನ್ನ ತಿಳಿದುಕೊಳ್ಳೋಣ.

ವೃಷಭ ರಾಶಿ (Taurus)

ಲಕ್ಷ್ಮೀದೇವಿಯ ಕೃಪೆಯಿಂದಾಗಿ ವೃಷಭ ರಾಶಿಯವರು ತಮ್ಮ ಜೀವನದಲ್ಲಿ ಐಷಾರಾಮಿತನವನ್ನು ಕಂಡುಕೊಳ್ಳಬಹುದಾಗಿದೆ. ಹೆಚ್ಚಾಗಿ ವೃಷಭ ರಾಶಿಯವರು ಜೀವನದಲ್ಲಿ ಹಣದ ಕೊರತೆಯನ್ನು ಕಾಣುವುದಿಲ್ಲ. ಹಣದ ವಿಚಾರದಲ್ಲಿ ಬಂದರೆ ವೃಷಭ ರಾಶಿಯವರು ಖಂಡಿತವಾಗಿ ತಮ್ಮ ಜೀವನದ ಸಾಕಷ್ಟು ಸಮಯಗಳಲ್ಲಿ ಶ್ರೀಮಂತರಾಗಿರುತ್ತಾರೆ. ತಮ್ಮ ಕುಟುಂಬದ ಎಲ್ಲಾ ಅಗತ್ಯತೆಗಳನ್ನು ಪೂರೈಸುವುದಕ್ಕೆ ಅವರಿಗೆ ಲಕ್ಷ್ಮೀದೇವಿ ಆಶೀರ್ವಾದ ಇರುತ್ತದೆ. ಕೇವಲ ಆರ್ಥಿಕ ವಿಚಾರದಲ್ಲಿ ಮಾತೃಬಲದೆ ವೃಷಭ ರಾಶಿಯವರ ಕುಟುಂಬ ಕೂಡ ಸಂತೋಷ ಹಾಗೂ ಸಮೃದ್ಧಿಯಿಂದ ಜೀವನ ಮಾಡುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕಾಯ್ದುಕೊಂಡು ಹೋಗುವಂತಹ ಪರಿಸರ ನಿಮ್ಮ ಮನೆಯ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಕರ್ಕ ರಾಶಿ (Cancer)

ಅತ್ಯಂತ ಕಷ್ಟ ಪಡುವಂತಹ ಶ್ರಮಜೀವಿಗಳಾಗಿರುತ್ತಾರೆ ಕರ್ಕ ರಾಶಿಯವರು. ಅವರ ಪರಿಶ್ರಮಕ್ಕೆ ತಕ್ಕ ಫಲವನ್ನು ಲಕ್ಷ್ಮಿ ದೇವಿ ಖಂಡಿತವಾಗಿ ನೀಡಿಯೇ ನೀಡುತ್ತಾಳೆ. ಕರ್ಕ ರಾಶಿಯವರು ಯಾವುದೇ ಕೆಲಸ ಮಾಡಿದರೂ ಕೂಡ ಸಂಪೂರ್ಣ ಶ್ರದ್ಧೆಯಿಂದ ಹಾಗೂ ಪರಿಶ್ರಮದಿಂದ ಕೆಲಸ ಮಾಡುತ್ತಾರೆ ಹೀಗಾಗಿ ಅವರು ಯಾವುದೇ ಕ್ಷೇತ್ರದಲ್ಲಿ ಕಾಲಿಟ್ಟರೂ ಕೂಡ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಹಾಗೂ ಅವರ ಪರಿಶ್ರಮದಿಂದ ಗೆದ್ದೇ ಗೆಲ್ಲುತ್ತಾರೆ. ಜೀವನದಲ್ಲಿ ಅವರಿಗೆ ಹಣದ ಕೊರತೆ ಯಾವತ್ತೂ ಕೂಡ ಕಂಡು ಬರೋದಿಲ್ಲ. ತಮ್ಮ ಕುಟುಂಬದ ಹಾಗೂ ತಮ್ಮ ಅಗತ್ಯತೆಗಳನ್ನು ಸುಲಭವಾಗಿ ಅವರು ಪೂರೈಸಿಕೊಳ್ಳುತ್ತಾರೆ. ತಮ್ಮ ಕನಸಿನ ಜೀವನವನ್ನು ನಡೆಸುವಂತಹ ಅವಕಾಶವನ್ನು ಕೂಡ ಲಕ್ಷ್ಮಿದೇವಿ ಅವರಿಗೆ ನೀಡುತ್ತಾಳೆ.

ವೃಶ್ಚಿಕ ರಾಶಿ (Scorpion )

ವೃಶ್ಚಿಕ ರಾಶಿ ಯಾರು ತಮ್ಮ ಜೀವನದಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಹೀಗಾಗಿ ಅವರು ಯಾವುದೇ ಕಷ್ಟದ ಪರಿಸ್ಥಿತಿಗಳಲ್ಲಿಯೂ ಕೂಡ ಗೆಲುವನ್ನು ಪಡೆದುಕೊಳ್ಳುವಂತಹ ಸಂಪೂರ್ಣ ಸಾಧ್ಯತೆಯನ್ನು ಹೊಂದಿರುತ್ತಾರೆ. ದೃಢ ಸಂಕಲ್ಪದಿಂದ ತಾವು ಮಾಡುವಂತಹ ಕೆಲಸವನ್ನು ಪೂರ್ಣಗೊಳಿಸುವುದರಿಂದ ಅವರು ಯಶಸ್ಸನ್ನು ಪಡೆಯುತ್ತಾರೆ. ವೃಶ್ಚಿಕ ರಾಶಿಯವರಿಗೆ ಮಹಾಲಕ್ಷ್ಮಿಯ ಅನುಗ್ರಹ ಇರುವುದರಿಂದ ಕೂಡ ಅವರು ಯಾವುದೇ ಕೆಲಸಕ್ಕೆ ಅಥವಾ ವ್ಯಾಪಾರಕ್ಕೆ ಕೈ ಹಾಕಿದ್ರೆ ಅವರಿಗೆ ಸುಲಭ ಗೆಲುವು ನಿಶ್ಚಿತವಾಗಿದೆ. ಜೀವನದಲ್ಲಿ ಅವರು ಯಾವುದೇ ರೀತಿಯ ಕೊರತೆ ಉಂಟಾದರೂ ಕೂಡ ತಾವೇ ಕಷ್ಟಪಟ್ಟು ದುಡಿದು ಆ ಕೊರತೆಗಳನ್ನು ನೀಗಿಸುವಂತಹ ಶಕ್ತಿಯನ್ನು ಹೊಂದಿದ್ದಾರೆ.

ಸಿಂಹ ರಾಶಿ (Leo)

ಸಿಂಹ ರಾಶಿಯವರು ಧೈರ್ಯಕ್ಕೆ ಹೆಸರುವಾಸಿ ಆಗಿರುವಂತಹ ರಾಶಿಯ ಜನರು. ಯಾವುದೇ ರೀತಿಯ ಕಷ್ಟಕರ ಪರಿಸ್ಥಿತಿಯಲ್ಲಿ ಕೂಡ ಗೆದ್ದು ಬೀಗುವಂತಹ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಆರ್ಥಿಕ ಸ್ಥಿತಿಗತಿಗಳ ವಿಚಾರದಲ್ಲಿ ಮಾತ್ರವಲ್ಲದೆ ಸಿಂಹ ರಾಶಿಯವರು ಸಮಾಜದಲ್ಲಿ ಜನರಿಂದ ಗೌರವ ಹಾಗೂ ಪ್ರೀತಿಯನ್ನು ಸಂಪಾದನೆ ಮಾಡುವುದರಲ್ಲಿ ಕೂಡ ಎತ್ತಿದ ಕೈ. ಅವರು ಮಾಡುವಂತಹ ಕೆಲಸಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಇರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಕೂಡ ಸಮಸ್ಯೆ ಹಾಗೂ ಕಷ್ಟಗಳನ್ನು ಎದುರಿಸುವಂತಹ ತಾಕತ್ತು ಇರುವ ಕಾರಣದಿಂದಾಗಿ ಲಕ್ಷ್ಮೀದೇವಿ ಅವರಿಗೆ ತನ್ನ ಆಶೀರ್ವಾದವನ್ನು ಬೀರುತ್ತಾಳೆ.

Comments are closed.