Relationship: ಪ್ರೀತಿಸಿ ಮದುವೆಯಾದಳು – ಆದರೆ ಗಂಡನ ಬಗ್ಗೆ ಸತ್ಯ ಎರಡೇ ವಾರಕ್ಕೆ ತಿಳಿಯಿತು. ಇವೆಲ್ಲ ಬೇಕಿತ್ತಾ?

Relationship: ಸ್ನೇಹಿತರೆ ಮದುವೆ ಅನ್ನೋದು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಅತ್ಯಂತ ಪ್ರಮುಖವಾದಂಥ ಘಟ್ಟವಾಗಿರುತ್ತದೆ. ಇದೇ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ತಮ್ಮನ್ನು ಮದುವೆ ಆಗುವಂತಹ ಹುಡುಗ ತಮಗೆ ವಿಶೇಷವಾಗಿ ಪ್ರಪೋಸ್ ಮಾಡಬೇಕು ಎನ್ನುವಂತಹ ಕನಸನ್ನು ಕಂಡಿರುತ್ತಾರೆ. ಇತ್ತೀಚಿಗಷ್ಟೇ ಫ್ರಾನ್ಸ್ ನಲ್ಲಿ ನಡೆದಿರುವಂತಹ ಒಂದು ಘಟನೆಯಲ್ಲಿ ಮಹಿಳೆಯನ್ನು ಒಬ್ಬ ಪುರುಷ ಪ್ರಪೋಸ್ ಮಾಡಿ ಮದುವೆಗೆ ಒಪ್ಪಿಸಿ ಇಬ್ಬರು ಕೂಡ ಮದುವೆಯಾಗುತ್ತಾರೆ. ಆದರೆ ಮದುವೆ ಆದ್ಮೇಲೆ ಆ ಮಹಿಳೆಗೆ ದೊಡ್ಡ ಮಟ್ಟದ ಶಾ-ಕ್ ಕಾದಿತ್ತು.

ಸೆಲ್ಸಿ ಜೋಸ್ ಎನ್ನುವಂತಹ ಮಹಿಳೆ ಈ ಸುದ್ದಿಯನ್ನು ಹಂಚಿಕೊಂಡಿದ್ದು ಪ್ಯಾರಿಸ್ನ ಡಿಸ್ನಿ ಲ್ಯಾಂಡ್ ಎದುರಲ್ಲಿ ಆ ಹುಡುಗ ನನಗೆ ಪ್ರಪೋಸ್ ಮಾಡಿ ನೀನು ನನ್ನ ಜೀವನದಲ್ಲಿ ಇರುವುದಕ್ಕೆ ನಾನು ತುಂಬಾ ಲಕ್ಕಿ ಅಂತ ಭಾವಿಸುತ್ತೇನೆ ಹಾಗೂ ನನ್ನ ಜೀವನದಲ್ಲಿ ಕಂಡಂತಹ ಅತ್ಯಂತ ಸುಂದರ ಮಹಿಳೆ ನೀನು ಎಂಬುದಾಗಿ ಹೇಳಿ ಪ್ರಪೋಸ್ ನಂತರ ಲಾಕ್ ಡೌನ್ ಇದ್ದ ಕಾರಣದಿಂದಾಗಿ ನಮ್ಮಿಬ್ಬರ ಮದುವೆ ಲೇಟ್ ಆಯ್ತು ಆದರೂ ಕೂಡ ಮದುವೆ ನಡೆಯಿತು. ಆದರೆ ಮದುವೆಯಾದ ನಂತರ ನಡೆದಿರೋದೇ ಬೇರೆ. ಹೌದು ಮದುವೆ ಆದ ನಂತರ ಆ ಹುಡುಗ ಸೆಲ್ಸಿ ಹತ್ತಿರ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಅನ್ನುವುದಾಗಿ ಹೇಳಿದ್ದಾನೆ. ಇದರಿಂದಾಗಿ ಆತನ ಮೇಲೆ ಕಟ್ಟಿಕೊಂಡಿದ್ದ ಕನಸಿನ ಗೋಪುರ ಪೂರ್ತಿ ಚದುರಿ ಹೋಗಿದೆ. ಪ್ರೀತಿ ಎನ್ನುವಂತಹ ಪದದ ಮೇಲೆ ಸೆಲ್ಸಿಗೆ ನಂಬಿಕೆ ಹೊರಟುಹೋಗಿದೆ ಎಂದು ಹೇಳಬಹುದಾಗಿದೆ.

ಈ ಘಟನೆಯ ನಂತರ ಸೆಲ್ಸಿಗೆ ಪ್ರೀತಿ ಹಾಗೂ ಮನುಷ್ಯರ ಮೇಲೆ ಸಂಪೂರ್ಣವಾಗಿ ನಂಬಿಕೆ ಹೊರಟು ಹೋಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಹಾಕಿ ಕೂಡ ಇದರ ಬಗ್ಗೆ ಮಾತನಾಡಿ ನನ್ನ ಜೀವನದಲ್ಲಿ ಇನ್ನೊಬ್ಬರ ಮೇಲೆ ಇನ್ಮುಂದೆ ಪ್ರೀತಿ ಮೂಡೋದು ಕೂಡ ಅನುಮಾನವೇ ಸರಿ ಎಂದು ಹೇಳಿದ್ದು ಈ ರೀತಿ ಆದರೆ ಪ್ರೀತಿ ಮೇಲೆ ಯಾರಿಗೆ ತಾನೇ ಭರವಸೆ ಇರುತ್ತೆ ಎನ್ನುವುದಾಗಿ ಆಕೆ ಮಾತನಾಡಿದ್ದಾಳೆ.

ಇನ್ಮುಂದೆ ಬೇರೆ ಯಾವುದೇ ಪುರುಷರ ಜೊತೆ ನಾನು ಪ್ರೀತಿಯ ಸಂಬಂಧವನ್ನು ಹೊಂದೋದು ಅನುಮಾನವೇ ಸರಿ ಹೀಗಾಗಿ ನಾನು ವಿಶ್ವದಲ್ಲಿ ಅತ್ಯಂತ ಸಂತೋಷದ ಮನೋಭಾವನೆಯಲ್ಲಿ ಇರುವಂತಹ ಮಹಿಳೆಯ ಎಂಬುದಾಗಿ ಹೇಳಿಕೊಂಡಿದ್ದಾಳೆ. ಆಕೆ ಪೋಸ್ಟ್ ಮಾಡಿರುವಂತಹ ವಿಡಿಯೋದಲ್ಲಿ ನೆಟ್ಟಿಗರು ಕೂಡ ಕಾಮೆಂಟ್ ಮಾಡಿದ್ದು, ಯಾರೋ ಒಬ್ಬರು ಮಾಡಿದ ತಪ್ಪಿನಿಂದಾಗಿ ನೀವು ನಿಮ್ಮ ಜೀವನದಲ್ಲಿ ಇರುವಂತಹ ಸಂತೋಷವನ್ನು ಹಾಳು ಮಾಡಿಕೊಳ್ಳಬೇಡಿ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಸಾಕಷ್ಟು ಜನರು ಜೀವನದಲ್ಲಿ ಈ ರೀತಿಯ ಘಟನೆಗಳಿಂದ ಧೈರ್ಯ ಕಳೆದುಕೊಳ್ಳಬೇಡಿ ಎಂಬುದಾಗಿ ಸಾಂತ್ವನ ಹೇಳಿದ್ದಾರೆ. ಈ ರೀತಿಯ ಘಟನೆಗಳು ಆಗಾಗ ನಮ್ಮ ಸುತ್ತ ಮುತ್ತಲು ಕೂಡ ನಡೆಯುತ್ತಿರುತ್ತವೆ. ನಮ್ಮ ಮನಸ್ಸನ್ನು ಗಟ್ಟಿಯಾಗಿರಿಸಿಕೊಂಡು ಜೀವನದಲ್ಲಿ ಮುಂದೆ ನಡೆಯಬೇಕಾಗಿರುವುದನ್ನು ಮಾಡಿಕೊಂಡು ಹೋದರಾಯ್ತು‌‌. ಯಾಕೆಂದ್ರೆ ನಮ್ಮನ್ನು ಕಳೆದುಕೊಂಡವರಿಗಿಂತ ಜೀವನದಲ್ಲಿ ಮಾಡಬೇಕಾಗಿರುವ ಸಾಧನೆ ಸಾಕಷ್ಟು ಇರುತ್ತವೆ.

Comments are closed.