Government scheme: ಅಪ್ಪು ಹೆಸರಲ್ಲಿ ಹೃದಯ ಜ್ಯೋತಿ ಯೋಜನೆ- ಬಡವರಿಗೆ ಹೇಗೆ ಉಪಯೋಗ ಗೊತ್ತೇ? ಇದು ಇದು ಬೇಕಾಗಿರೋದು

Government scheme: ರಾಜ್ಯ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಇತ್ತೀಚಿಗಷ್ಟೇ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಸಚಿವ ಆಗಿರುವಂತಹ ದಿನೇಶ್ ಗುಂಡೂರಾವ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಹಠಾತ್ ಹೃದಯಾ-ಘಾತವನ್ನು ತಡೆಯುವಂತಹ ಚುಚ್ಚುಮದ್ದನ್ನು ಲೋಕಾರ್ಪಣೆಗೊಳಿಸುವಂತಹ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಚಾಲನೆ ನೀಡಿದ್ದು ಧಾರವಾಡದಲ್ಲಿ.

ಯಾರಿಗಾದರೂ ಹೃದಯ-ಘಾತ ಕಾಣಿಸಿಕೊಂಡ ಸಂದರ್ಭದಲ್ಲಿ ಯಾರೂ ಕೂಡ ನಿರ್ಲಕ್ಷ ಮಾಡಬಾರದು ಎನ್ನುವ ಕಾರಣಕ್ಕಾಗಿ ಜನರಲ್ಲಿ ಅರಿವು ಮೂಡಿಸುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಪ್ರಾರಂಭಿಸಲಾಗಿರುವಂತಹ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಮೂಲಕ ತಾಲೂಕು ಮಟ್ಟದಲ್ಲಿ ಆಸ್ಪತ್ರೆಗಳಲ್ಲಿ ಹೃದಯಾಘಾತವನ್ನು ತಡೆಯುವುದಕ್ಕಾಗಿ ತುರ್ತು ಚುಚ್ಚುಮದ್ದುಗಳನ್ನು ನೀಡಲಾಗುವುದು.

ಇದು ದುಬಾರಿ ಬೆಲೆಯ ಚುಚ್ಚುಮದ್ದು ಆಗಿದ್ದು ಆದರೆ ಈ ಯೋಜನೆಯ ಮೂಲಕ ಪ್ರತಿಯೊಬ್ಬ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳಿಗೂ ಕೂಡ ಇದು ಇಂತಹ ಪರಿಸ್ಥಿತಿಗಳಲ್ಲಿ ಜೀವವನ್ನು ಉಳಿಸುವುದಕ್ಕಾಗಿ ಉಚಿತವಾಗಿ ನೀಡುವಂತಹ ಯೋಜನೆಯನ್ನು ಈ ಮೂಲಕ ಜಾರಿಗೆ ತರಲಾಗಿದೆ. ವಿಶೇಷವಾಗಿ ಪುನೀತ್ ರಾಜಕುಮಾರ್ ರವರ ಹೃದಯ ಯೋಜನೆಯ ಮೂಲಕ ಈ ಚುಚ್ಚುಮದ್ದನ್ನು ಗ್ರಾಮೀಣ ಭಾಗದ ಜನರು ಉಪಯೋಗಿಸಿಕೊಳ್ಳಲು ಸರ್ಕಾರದಿಂದ ಪ್ರೋತ್ಸಾಹ ಸಿಗಲಿದೆ.

ಈ ಯೋಜನೆಯನ್ನು ಹಬ್ ಹಾಗೂ ಸ್ಪೋಕ್ ಮಾದರಿಯಲ್ಲಿ ಜಾರಿಗೆ ತರಲಾಗಿದೆ. ತಾಲೂಕು ಹಾಗೂ ಜಿಲ್ಲಾಸ್ಪತ್ರೆ ಒಟ್ಟಾರೆಯಾಗಿ 86 ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನು ಸ್ಪೋಕ್ ಕೇಂದ್ರಗಳ ರೂಪದಲ್ಲಿ ಜಾರಿಗೆ ತರಲಾಗಿದೆ. ಈ ಕೇಂದ್ರಗಳಿಗೆ ಬರುವಂತಹ ಪ್ರಕರಣಗಳಲ್ಲಿ ಮೊದಲಿಗೆ ಹೃದಯಾಘಾ-ತ ಯಾವ ಮಟ್ಟದಲ್ಲಿದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಹೃದಯಾ-ಘಾತ ಎನ್ನುವುದು ಅತ್ಯಂತ ಗಂಭೀರವಾಗಿದ್ದರೆ ಆ ಸಂದರ್ಭದಲ್ಲಿ ಈ ಇಂಜೆಕ್ಷನ್ ಅನ್ನು ಬಳಸುತ್ತಾರೆ ಹಾಗೂ ತುರ್ತು ಪರಿಸ್ಥಿತಿಯ ಶಮನಗೊಳಿಸುತ್ತಾರೆ. ಹೃದಯಘಾತ ಆಗುವ ಸಂದರ್ಭದಲ್ಲಿ ಆ ವ್ಯಕ್ತಿಯ ಬಳಿ ಇರುವಂತಹ ಗೋಲ್ಡನ್ ಅವರ್ ನಲ್ಲಿ ಆತನ ಜೀವ ಉಳಿಸುವುದಕ್ಕೆ ಈ ಚುಚ್ಚುಮದ್ದು ಕಾರ್ಯರೂಪಕ್ಕೆ ಬರುತ್ತದೆ. ಈ ಚುಚ್ಚುಮದ್ದಿನ ಮೂಲಕ ತುರ್ತು ಪರಿಸ್ಥಿತಿಗಳಲ್ಲಿ ಜನರ ಜೀವವನ್ನು ಉಳಿಸೋದು ಇನ್ನು ಮುಂದೆ ಯಶಸ್ವಿಯಾಗಲಿದೆ.

ಈಗಾಗಲೇ 15 ಹಾಗೂ 41 ಸ್ಪೋಕ್ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಈ ಚುಚ್ಚುಮದ್ದಿಗೆ 25 ರಿಂದ 30 ಸಾವಿರ ರೂಪಾಯಿಗಳ ಮೌಲ್ಯ ಇದ್ದು ಇದನ್ನು ಉಚಿತವಾಗಿಯೇ ಈ ಯೋಜನೆಯ ಮೂಲಕ ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹೃದಯ ಸಂಬಂಧಿ ರೋಗಿಗಳಿಗೆ ಉತ್ತಮವಾದ ರೀತಿಯ ಚಿಕಿತ್ಸೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ. ಒಟ್ಟಾರೆಯಾಗಿ ಯೋಜನೆಯ ಹಠಾತ್ ಮರಣ ಸಂಭವಿಸುವುದನ್ನು ತಡೆಯುವುದಕ್ಕಾಗಿ ಜಾರಿಗೆ ತರಲಾಗಿದೆ ಎಂಬುದಾಗಿ.

Comments are closed.