Gold Ring: ಈ ರಾಶಿಯವರಿಗೆ ಚಿನ್ನದ ಉಂಗುರ ಹಾಕಿದ್ರೆ ಜೀವನವೆ ಬದಳಾಗತ್ತೆ ಗೊತ್ತಾ?

Gold Ring: ಚಿನ್ನವನ್ನು ಸಾಮಾನ್ಯವಾಗಿ ಅತ್ಯಂತ ಅಮೂಲ್ಯವಾದ ಲೋಹ ಎಂಬುದಾಗಿ ಕರೆಯಲಾಗುತ್ತದೆ. ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದು ಅತ್ಯಂತ ದುಬಾರಿಯಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಚಿನ್ನದ ಉಂಗುರಗಳನ್ನು ಧರಿಸುವುದು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದಲ್ಲಿ ಯಾವೆಲ್ಲ ರಾಶಿಗಳು ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರಿಗೆ ಒಳ್ಳೆಯದಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ.

ಸಿಂಹ ರಾಶಿ (Leo)

ಬಂಗಾರಕ್ಕೂ ಸಿಂಹ ರಾಶಿಯವರಿಗೆ ಸಾಕಷ್ಟು ಹತ್ತಿರದ ನಂಟು ಇರುವುದರಿಂದಾಗಿ ಸಿಂಹ ರಾಶಿಯವರಿಗೆ ಬಂಗಾರವನ್ನು ಧರಿಸುವುದಕ್ಕೆ ಸೂಚಿಸಲಾಗುತ್ತದೆ. ಇದರಿಂದಾಗಿ ಸಿಂಹ ರಾಶಿಯವರು ಮಾಡುವಂತಹ ಕೆಲಸದಲ್ಲಿ ಅವರ ಅದೃಷ್ಟ ಕೂಡ ಹೆಚ್ಚಾಗುತ್ತದೆ. ಇನ್ನು ಚಿನ್ನವನ್ನು ಧರಿಸುವುದಕ್ಕೆ ಸಿಂಹ ರಾಶಿಯವರಿಗೆ ಮತ್ತೊಂದು ಕಾರಣ ಕೂಡ ಇದೆ. ಸಿಂಹರಾಶಿಯಗ್ರಹ ಸೂರ್ಯ ಚಿನ್ನದ ಅಂಶವನ್ನು ಹೊಂದಿರುವಂತಹ ಗುರು ಗ್ರಹದ ಜೊತೆಗೆ ನಿಕಟವಾದ ಸ್ನೇಹ ಸಂಬಂಧವನ್ನು ಹೊಂದಿದ್ದಾನೆ. ಇದೇ ಕಾರಣಕ್ಕಾಗಿ ಸಿಂಹ ರಾಶಿಯವರು ಚಿನ್ನದ ಉಂಗುರವನ್ನು ಧರಿಸಿದರೆ ಅದು ಅವರಿಗೆ ಅದೃಷ್ಟವನ್ನು ತರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದಾಗಿ ಸಿಂಹ ರಾಶಿಯವರ ಶಕ್ತಿ ಹಾಗೂ ಕೆಲಸ ಮಾಡುವಂತಹ ಉತ್ಸಾಹ ಇನ್ನಷ್ಟು ಹೆಚ್ಚಾಗಲಿದೆ.

ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರಿಗೆ ಸಂಪತ್ತಿನ ಆಸೆ, ಚಿಕ್ಕವಯಸ್ಸಿನಿಂದಲೂ ಕೂಡ ಅವರ ಜೊತೆಗೆ ಬೆಳೆದುಕೊಂಡು ಬಂದಿದೆ. ಹೀಗಾಗಿ ಇದೇ ಕಾರಣಕ್ಕಾಗಿ ಚಿನ್ನದ ಉಂಗುರವನ್ನು ಧರಿಸುವುದು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ಅಂದರೆ ಅವರ ಚಿಕ್ಕ ವಯಸ್ಸಿನಿಂದಲೂ ಸಂಪತ್ತನ್ನು ಹೊಂದಬೇಕು ಎನ್ನುವಂತಹ ಆಸೆಯನ್ನು ಪೂರೈಸುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದಾಗಿ ಕನ್ಯಾ ರಾಶಿಯವರಿಗೆ ಸಂಪತ್ತಿನ ಅಂದರೆ ಹಣದ ವಿಚಾರದಲ್ಲಿ ಯಾವುದೇ ರೀತಿಯ ಕೊರತೆ ಕಂಡುಬರುವುದಿಲ್ಲ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಿಗಣಿಸಲಾಗುತ್ತದೆ.

ತುಲಾ ರಾಶಿ (Libra)

ತುಲಾ ರಾಶಿಯವರಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದಾಗಿ ಕೇವಲ ಆರ್ಥಿಕ ಲಾಭ ಮಾತ್ರವಲ್ಲದೆ ಅವರ ಜೀವನದಲ್ಲಿ ಯಾವುದೇ ಶತ್ರುಗಳಿದ್ದರೂ ಕೂಡ ತುಲಾ ರಾಶಿಯವರು ತಮ್ಮ ಶತ್ರುಗಳನ್ನು ಹಿಂದಿಕ್ಕಬಹುದಾಗಿದೆ. ಚಿನ್ನದ ಉಂಗುರದ ಧಾರಣೆಯಿಂದಾಗಿ ತುಲಾ ರಾಶಿಯವರು ತಮ್ಮ ಶತ್ರುಗಳನ್ನು ಸೋಲಿಸಬಹುದಾಗಿದೆ. ಒಂದು ವೇಳೆ ಆರೋಗ್ಯದ ಏರುಪೇರು ಕಂಡು ಬಂದರೆ ತುಲಾ ರಾಶಿಯವರು ಚಿನ್ನದ ಉಂಗುರವನ್ನು ತಮ್ಮ ಬೆರಳಿಗೆ ಧರಿಸುವುದರ ಮೂಲಕ ಆ ಸಮಸ್ಯೆಯಿಂದ ಕೂಡ ಹೊರ ಬರಬಹುದಾಗಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ತುಲಾ ರಾಶಿಯವರಿಗೆ ಚಿನ್ನದ ಉಂಗುರ ಸಹಾಯಕಾರಿಯಾಗಲಿದೆ.

ಧನು ರಾಶಿ (Sagittarius)

ಧನುರಾಶಿಯವರು ಚಿನ್ನದ ಉಂಗುರವನ್ನು ಅಥವಾ ಚಿನ್ನದ ಆಭರಣಗಳನ್ನು ಧರಿಸುವುದರಿಂದಾಗಿ ಅವರು ಮಾಡುವಂತಹ ಕೆಲಸಗಳಲ್ಲಿ ಒಳ್ಳೆಯ ಫಲಗಳನ್ನು ಅವರು ಕಾಣಬಹುದಾಗಿದೆ. ಕಷ್ಟಕರ ದಿನಗಳು ಕೂಡ ಬೇಗವಾಗಿ ಮುಗಿಯಲಿದೆ. ಆದರೆ ಯಾವುದೇ ಕಾರಣಕ್ಕೂ ಕೂಡ ನೀವು ನಿಮ್ಮ ಕಾಲಿಗೆ ಚಿನ್ನದ ಯಾವುದೇ ಆಭರಣಗಳನ್ನು ಧರಿಸಬಾರದು ಇದರಿಂದಾಗಿ ನಿಮಗೆ ಆಪತ್ತು ಉಂಟಾಗುವ ಸಾಧ್ಯತೆ ಇರುತ್ತದೆ. ಚಿನ್ನವು ಗುರುವಿನ ಅತ್ಯಂತ ನೆಚ್ಚಿನ ಲೋಹ ಆಗಿದ್ದು ಯಾವತ್ತೂ ಕೂಡ ದೇಹದ ಮೇಲ್ಭಾಗದಲ್ಲಿ ಚಿನ್ನವನ್ನು ನೀವು ಧರಿಸಬೇಕು. ಇದರಿಂದಾಗಿ ಆರ್ಥಿಕ ಲಾಭದಿಂದ ಪ್ರಾರಂಭವಾಗಿ ಪ್ರತಿಯೊಂದು ಕೆಲಸಗಳಲ್ಲಿ ಗೆಲುವಿನ ಲಾಭದವರೆಗೂ ಕೂಡ ನೀವು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲಿದ್ದೀರಿ.

Comments are closed.