Gruhalakshmi Scheme: ಮೊಬೈಲ್ ನಲ್ಲೇ ಚೆಕ್ ಮಾಡಿ ಗೃಹಲಕ್ಷ್ಮಿ ಹಣ ಜಮಾ ಆಗಿದ್ಯೋ ಇಲ್ವೋ ಅಂತ; ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Gruhalakshmi Scheme: ಕಾಂಗ್ರೆಸ್ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಐದು ಯೋಜನೆಗಳನ್ನು ಜಾರಿಗೆ ತಂದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲಿಯೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು ಜನಪ್ರಿಯ ಯೋಜನೆ ಆಗಿರುವಂತಹ ಗೃಹಲಕ್ಷ್ಮಿ ಯೋಜನೆ ಹಣವನ್ನು ಯಾವ ರೀತಿಯಲ್ಲಿ ಮೊಬೈಲ್ ಮೂಲಕ ಚೆಕ್ ಮಾಡುವುದು ಏನು ಅದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತಹ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬರುವಂತಹ 2000 ಹಣವನ್ನು ಸರ್ಕಾರ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಮಹಿಳೆಯರ ಖಾತೆಗೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಯೋಜನೆಯ ಮೂಲಕ ಹಣವನ್ನು ಪಾವತಿ ಮಾಡಲಾಗುತ್ತಿದೆ. ಇನ್ನು ಇದರ ಜೊತೆಗೆ ಮಹಿಳೆಯರಿಗೆ ಜಾರಿಗೆ ತಂದಿರುವಂತಹ ಶಕ್ತಿ ಯೋಜನೆಯ ಮೂಲಕ ಕರ್ನಾಟಕದ ಯಾವುದೇ ಮೂಲೆಗಾದರೂ ಸರ್ಕಾರಿ ಬಸ್ಸುಗಳ ಮೂಲಕ ಉಚಿತವಾಗಿ ಪ್ರಯಾಣ ಮಾಡುವಂತಹ ಅವಕಾಶವನ್ನು ಕೂಡ ರಾಜ್ಯ ಸರ್ಕಾರ ಈಗಾಗಲೇ ನೀಡಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡುವ ವಿಧಾನ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದಕ್ಕೆ ನಿಮಗೆ ಸುಲಭ ವಿಧಾನವನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದ್ದು ಪ್ಲೇ ಸ್ಟೋರ್ ನಲ್ಲಿ ಹೋಗಿ DBT Karnataka ಅಪ್ಲಿಕೇಶನ್ ಅನ್ನು ಮೊದಲಿಗೆ ನೀವು ಡೌನ್ಲೋಡ್ ಮಾಡಿಕೊಳ್ಳ ಬೇಕಾಗಿರುತ್ತದೆ. ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಆಗಿರುವಂತಹ ಫೋನ್ ನಂಬರ್ ಅನ್ನು ನಮೂದಿಸಬೇಕಾಗಿರುತ್ತದೆ. ಇದಾದ ನಂತರ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬಂದಿರುತ್ತದೆ ಅದನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ. ಈ ಮೂಲಕ ನೀವು ಈ ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗಬಹುದಾಗಿದೆ. ಈ ಮೂಲಕ ನೀವು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಅಪ್ಡೇಟ್ಗಳನ್ನು ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ. ಒಂದು ವೇಳೆ ನೀವು ಈ ರೀತಿ ಯಾವುದೇ ಅನುಮಾನಗಳು ಇದ್ದಲ್ಲಿ ಈ ಮೇಲಿನ ಪ್ರಕ್ರಿಯೆಗಳನ್ನು ಬಳಸುವ ಮೂಲಕ ಅಪ್ಡೇಟ್ ಗಳನ್ನು ಚೆಕ್ ಮಾಡಬಹುದಾಗಿದೆ.

ಮುಂದಿನ ದಿನಗಳಲ್ಲಿ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಯಾರೇ ಈ ಯೋಜನೆಗಳ ಫಲಾನುಭವಿಗಳಾಗಿದ್ದು ಅವರಿಗೆ ಈ ರೀತಿ ಅಪ್ಡೇಟ್ಗಳನ್ನು ತಿಳಿದುಕೊಳ್ಳಲು ಕಷ್ಟವಾಗುತ್ತಿದ್ದರೆ, ಅವರಿಗೆ ನೀವು ಈ ಮೂಲಕ ಅಪ್ಡೇಟ್ ಮಾಡುವ ಬಗ್ಗೆ ಮಾಹಿತಿಗಳನ್ನು ನೀಡಿ ಸಹಾಯ ಮಾಡಬಹುದಾಗಿದೆ. ಇದೇ ಕಾರಣಕ್ಕಾಗಿ ಈ ರೀತಿಯ ಮಾಹಿತಿಗಳನ್ನು ಇದರ ಅವಶ್ಯಕತೆ ಇರುವಂತಹ ಜನರಿಗೆ ಶೇರ್ ಮಾಡಿಕೊಳ್ಳಿ.

Comments are closed.