Deepika Padukone: ದೀಪಿಕಾ ಪಡುಕೋಣೆಗೆ ಬೆಂಗಳೂರಿನಲ್ಲೇ ಮೊದಲ ಮಗುವಿಗೆ ಜನ್ಮ ಕೊಡ್ಬೇಕಂತೆ; ಬಾಲಿವುಡ್ ಬೆಡಗಿ ಬೇಬಿಗೆ ಒಲಿದು ಬಂದ ಅದೃಷ್ಟ!

Deepika Padukone: ಬಾಲಿವುಡ್ ಚಿತ್ರರಂಗದ ಸ್ಟಾರ್ ಜೋಡಿ ಆಗಿರುವಂತಹ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಬ್ರು ಕೂಡ ಮದುವೆಯಾಗಿ ಸಾಕಷ್ಟು ವರ್ಷಗಳೇ ಕಳೆದು ಹೋಗಿದ್ರು ಕೂಡ ಇದುವರೆಗೂ ಈ ದಂಪತಿಗಳಿಗೆ ಮಕ್ಕಳು ಆಗಿರ್ಲಿಲ್ಲ. ಈಗ ಕೊನೆಗೂ ಗುಡ್ ನ್ಯೂಸ್ ಬಂದಿದ್ದು, ಅದಕ್ಕಿಂತ ಮತ್ತೊಂದು ವಿಚಾರ ಏನಂದ್ರೆ? ಕರ್ನಾಟಕದ ಬೆಡಗಿ ಆಗಿರುವಂತಹ ದೀಪಿಕಾ ಪಡುಕೋಣೆ ಅವರು ತಮ್ಮ ಮೊದಲ ಮಗುವಿನ ಹೆರಿಗೆಯನ್ನು ಬೆಂಗಳೂರಿನಲ್ಲಿಯೇ ಮಾಡಿಕೊಳ್ಳಲಿದ್ದಾರೆ.

ಮದುವೆಯಾಗಿ ಸಾಕಷ್ಟು ವರ್ಷಗಳೇ ಕಳೆದಿದ್ರೂ ಕೂಡ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿಗಳು ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ ಈಗ ಇಬ್ಬರೂ ಕೂಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಅನ್ನೋದನ್ನ ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇತ್ತೀಚಿಗಷ್ಟೇ ಅಂಬಾನಿ ಮಗನ ಮದುವೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಕೂಡ ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ತಾನು ಇದ್ದೇನೆ ಅನ್ನೋದನ್ನ ಬಹಿರಂಗವಾಗಿ ಹೇಳಿಕೊಂಡಿದ್ದರು. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಕರ್ನಾಟಕ ಕಂಡಂತಹ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವಂತಹ ಪ್ರಕಾಶ್ ಪಡುಕೋಣೆ ಅವರ ಮಗಳಾಗಿರುವಂತಹ ದೀಪಿಕಾ ಪಡುಕೋಣೆ ಹುಟ್ಟಿದ್ದು ಡೆನ್ಮಾರ್ಕ್ ನಲ್ಲಿ. ಹೇಗಿದ್ರು ಕೂಡ ಅವರು ಕರ್ನಾಟಕದವರು ಅನ್ನೋದು ನಮಗೆಲ್ಲರಿಗೂ ತಿಳಿದಿರುವ ವಿಚಾರ ಹಾಗೂ ನಾವೆಲ್ಲರೂ ಹೆಮ್ಮೆ ಪಡಬೇಕಾಗಿರುವಂತಹ ವಿಚಾರ. ಯಾಕೆಂದರೆ ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಾಲಿವುಡ್ ನಲ್ಲಿ ಕೂಡ ದೀಪಿಕಾ ಪಡುಕೋಣೆ ಅವರು ನಟಿಸಿ ಬಂದಿದ್ದಾರೆ. ಇನ್ನು ಈಗ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವಂತಹ ದೀಪಿಕಾ ಪಡುಕೋಣೆ ದಂಪತಿಗಳಿಬ್ಬರು ಕೂಡ ತಮ್ಮ ಮೊದಲ ಮಗುವನ್ನು ಬೆಂಗಳೂರಿನಲ್ಲಿಯೇ ಸ್ವಾಗತಿಸಲಿದ್ದಾರೆ ಅನ್ನೋದು ಸಂತೋಷದ ವಿಚಾರವಾಗಿದೆ.

ಅಧಿಕೃತವಾಗಿ ಇದರ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲವಾದ್ರೂ ಕೂಡ ಬಂದಿರುವಂತಹ ಸುದ್ದಿಗಳ ಪ್ರಕಾರ ಬೆಂಗಳೂರಿನಲ್ಲಿಯೇ ಬೆಂಗಳೂರಿನ ನುರಿತ ವೈದ್ಯಕೀಯ ತಜ್ಞರಿಂದ ಬೆಂಗಳೂರಿನಲ್ಲಿಯೇ ಹೆರಿಗೆ ಮಾಡಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿ ದೀಪಿಕಾ ಪಡುಕೋಣೆ ಅವರ ಮನೆ ಕೂಡ ಇದ್ದು ಇದೇ ಕಾರಣದಿಂದಾಗಿಯೇ ದೀಪಿಕಾ ಪಡುಕೋಣೆ ಅವರ ಮೊದಲ ಮಗುವಿನ ಜನನ ಬೆಂಗಳೂರಿನಲ್ಲಿಯೇ ನಡೆಯಲಿದೆ ಎನ್ನುವುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಪ್ರಾರಂಭ ಮಾಡಿದ್ದಾರೆ. ಇಟಲಿಯಲ್ಲಿ ಅದ್ಧೂರಿಯಾಗಿ ಇವರಿಬ್ಬರ ಮದುವೆ ನಡೆದಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದ್ದು ಮದುವೆಯಾದ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಕೂಡ ಇಬ್ಬರು ದಂಪತಿಗಳು ಬಂದಿದ್ದರು. ಹೀಗಾಗಿ ದೀಪಿಕಾ ಪಡುಕೋಣೆ ಅವರ ಬೆಂಗಳೂರಿನ ನಂಟು ಸಾಕಷ್ಟು ಹತ್ತಿರವಾಗಿದೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ.

ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ದೀಪಿಕಾ ಪಡುಕೋಣೆ ರಿಯಲ್ ಸ್ಟಾರ್ ಉಪೇಂದ್ರರವರ ಐಶ್ವರ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಸಿನಿಮಾ ರಂಗದಲ್ಲಿ ತಮ್ಮ ಪರಿಚಯ ಮಾಡಿಕೊಂಡಿದ್ದರು. ಇವತ್ತು ಇಡೀ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕ ನಟಿಯಾಗಿದ್ದಾರೆ.

Comments are closed.