Lord Shiva: ನಂದಿ ಕಿವಿಯಲ್ಲಿ ಹೀಗೆ ಹೇಳಿದರೆ ನಿಮ್ಮ ಆಸೆ ನೆರವೇರುತ್ತದೆ ಗೊತ್ತೇ? ಹೀಗೆ ಹೇಳಿ, ಅಷ್ಟೇ ಸಾಕು

Lord Shiva: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಶಿವನ ಪೂಜೆ ಹಾಗೂ ಶಿವನಿಗೆ ವಿಶೇಷವಾದ ಮಹತ್ವವಿದೆ. ಲಯಕರ್ತನಾಗಿದ್ರೂ ಕೂಡ ಮಹಾಪರ ಶಿವನನ್ನು ತನ್ನ ಮಕ್ಕಳನ್ನು ಕಾಯುವಂತಹ ಪಾಲಕ ಎಂಬುದಾಗಿ ಪರಿಗಣಿಸಲಾಗುತ್ತದೆ. ಶಿವನನ್ನು ನಿಜವಾದ ಮನಸ್ಸಿನಿಂದ ಪೂಜೆ ಮಾಡಿದರೆ ಆತ ಖಂಡಿತವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂಬುದಾಗಿ ನಂಬಲಾಗುತ್ತದೆ. ಇನ್ನು ಪ್ರತಿಯೊಂದು ಶಿವನ ದೇವಸ್ಥಾನಗಳಲ್ಲಿಯೂ ಕೂಡ ನೀವು ನಂದಿ ವಿಗ್ರಹವನ್ನು ಕಾಣಬಹುದಾಗಿದೆ. ಶಿವ ಇದ್ದಲ್ಲಿ ನಂದಿಯ ಪೂಜೆ ನಡೆಯಲೇಬೇಕು ಎನ್ನುವಂತಹ ಅಲಿಖಿತ ನಿಯಮ ಆದಿಯಿಂದಲೂ ಕೂಡ ನಡೆದುಕೊಂಡು ಬಂದಿದೆ.

ನಂದಿ ಶಿವನ ಭಕ್ತ ಗಣಗಳಲ್ಲಿ ಅತ್ಯಂತ ಪ್ರಿಯವಾದಂತಹ ಗಣ ಆಗಿದ್ದು ಆತ ಎಲ್ಲರಿಗಿಂತ ದೊಡ್ಡ ಶಿವ ಭಕ್ತ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಆತನಿಗೆ ಪೂಜೆ ಯಾವುದೇ ಶಿವನ ದೇವಸ್ಥಾನದಲ್ಲಿ ಕಡ್ಡಾಯವಾಗಿರುತ್ತದೆ. ಇನ್ನು ನಂದಿಯ ವಿಗ್ರಹದ ಕಿವಿಯ ಬಳಿ ಹೋಗಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಂಡರೆ ನಂದಿ ಮಹಾರಾಜ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವಂತಹ ಪ್ರತಿತಿ ಕೂಡ ಇದೆ.

  1. ಮೊದಲನೆಯದಾಗಿ ಮಾತನಾಡುವುದಾದರೆ ಶಿವನ ದೇವಸ್ಥಾನಕ್ಕೆ ಹೋದರೆ ಕೇವಲ ಶಿವಲಿಂಗದ ಪೂಜೆಯನ್ನು ಮಾಡುವುದು ಮಾತ್ರವಲ್ಲದೆ ನಂದಿಯ ಪೂಜೆಯನ್ನು ಕೂಡ ನೀವು ಕಡ್ಡಾಯವಾಗಿ ಮಾಡಬೇಕಾಗಿದೆ. ಒಂದು ವೇಳೆ ನೀವು ನಂದಿಯ ಪೂಜೆಯನ್ನು ಮಾಡದೆ ಕೇವಲ ಶಿವಲಿಂಗದ ಪೂಜೆಯನ್ನು ಮಾಡಿ ನಂದಿಯ ಬಳಿ ಹೋಗಿ ಇಷ್ಟಾರ್ಥವನ್ನು ಬೇಡಿಕೊಂಡ್ರೆ ಯಾವುದೇ ಇಷ್ಟಾರ್ಥ ಈಡೇರುವುದಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿದೆ. ಹೀಗಾಗಿ ನೀವು ಕ್ರಮಬದ್ಧವಾಗಿ ಶಿವಲಿಂಗವನ್ನು ಪೂಜೆ ಮಾಡಿದ ನಂತರ ನಂದಿಯನ್ನು ಪೂಜೆ ಮಾಡಿ ಆತನ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಬೇಕಾಗಿದೆ.
  2. ಶಿವನೇ ನಂದಿಗೆ ಯಾವ ಭಕ್ತರು ನಿನ್ನ ಬಳಿ ತನ್ನ ಮನು ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೋ ಅದನ್ನು ಪೂರ್ತಿಗೊಳಿಸುವಂತಹ ಶಕ್ತಿ ನಿನಗೆ ಇರಲಿ ಎಂಬುದಾಗಿ ವರವನ್ನು ನೀಡಿದ್ದಾರೆ. ಇದೇ ಕಾರಣಕ್ಕಾಗಿ ನೀವು ಶಿವನ ಪೂಜೆ ಮಾಡಿದ ನಂತರ ಯಾರೊಂದಿಗೂ ಮಾತನಾಡದೆ ನಿಮ್ಮ ಮನಸ್ಸಿನಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ನಂದಿಯ ಕಿವಿಯ ಬಳಿ ಹೋಗಿ ಆ ಇಷ್ಟಾರ್ಥವನ್ನು ಹೇಳಿಕೊಳ್ಳಬೇಕು. ಇದನ್ನು ಒಂದು ಕಾರಣದೊಂದಿಗೆ ಕೂಡ ವಿವರಿಸಲಾಗುತ್ತದೆ ಏನೆಂದರೆ, ಮಹಾದೇವ ತಪಸ್ಸಿನಲ್ಲಿ ಇರುವ ಕಾರಣಕ್ಕಾಗಿ ಭಕ್ತರು ನಂದಿಯ ಬಳಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಅವುಗಳು ಈಡೇರುತ್ತವೆ ಎಂಬುದಾಗಿ.
  3. ಇನ್ನು ಯಾವತ್ತೂ ನೀವು ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುವಾಗ ನಂದಿಯ ಮೂರ್ತಿಯ ಎಡ ಕಿವಿಯ ಭಾಗದಲ್ಲಿ ಹೋಗಿ ನಿಮ್ಮ ಇಷ್ಟಾರ್ಥವನ್ನು ಕೇಳಿಕೊಳ್ಳಿ ಇದು ಹೆಚ್ಚು ಪರಿಣಾಮ ಕಾರಿ ಆಗಿರುತ್ತದೆ. ಇನ್ನು ಯಾವುದೇ ಕಾರಣಕ್ಕೂ ಬೇರೆ ವ್ಯಕ್ತಿಯ ಕೆಟ್ಟದ್ದನ್ನು ಬಯಸುವಂತಹ ಮನೋ ಇಷ್ಟಾರ್ಥವನ್ನು ಯಾವತ್ತೂ ಕೂಡ ನೀವು ಬೇಡಿಕೊಳ್ಳಬಾರದು. ಅದೇ ರೀತಿಯಲ್ಲಿ ನಿಮ್ಮ ಇಷ್ಟಾರ್ಥವನ್ನು ಬೇಡಿಕೊಂಡ ನಂತರ ಸಿಹಿ ತಿಂಡಿ ಅಥವಾ ನೈವೇದ್ಯವನ್ನು ನಂದಿಯ ಮುಂದೆ ಅರ್ಪಿಸಬೇಕು.

Comments are closed.