Budh Guru Yuti: 12 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಬುಧ ಹಾಗೂ ಗುರು ಗ್ರಹಗಳ ಸಂಯೋಗ. ಚಿನ್ನದ ಮಳೆ ಸುರಿಯಲಿದೆ ಇನ್ನು ಈ ರಾಶಿಯವರ ಜೀವನದಲ್ಲಿ!

Budh Guru Yuti: ಈಗಾಗಲೇ ಮೇಷ ರಾಶಿಯಲ್ಲಿ ದೇವತೆಗಳ ಗುರು ಬೃಹಸ್ಪತಿ ಇದ್ದಾರೆ ಅಂದರೆ ಗುರು ಗ್ರಹವಿದೆ. ಮಾರ್ಚ್ 26ಕ್ಕೆ ಇದೇ ಮೇಷ ರಾಶಿಗೆ ಗ್ರಹಗಳ ರಾಜಕುಮಾರ ಬುಧ ಕೂಡ ಕಾಲಿಡಲಿದ್ದಾನೆ. ಅದು ಕೂಡ ಇವರಿಬ್ಬರೂ ಒಂದೇ ರಾಶಿಯಲ್ಲಿ ಸಂಯೋಗ ಗೊಳ್ಳುತ್ತಿರುವುದು 12 ವರ್ಷಗಳ ನಂತರ. ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗಲಿದ್ದು ಬನ್ನಿ ಆ ಅದೃಷ್ಟವಂತರು ಯಾರು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೇಷ ರಾಶಿ (Aries)

ಮೇಷ ರಾಶಿಯವರು ತಮ್ಮ ಜೀವನದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳಿಂದ ಪರಿಣಾಮಕಾರಿ ಪ್ರಭಾವಗಳನ್ನು ಎದುರಿಸುತ್ತಾರೆ ಹಾಗೂ ಪ್ರತಿಯೊಂದು ನಿರ್ಧಾರಗಳು ಕೂಡ ಅವರ ಪರವಾಗಿರುತ್ತದೆ. ಭವಿಷ್ಯದಲ್ಲಿ ನೀವು ಸಾಕಷ್ಟು ಹಣವನ್ನು ಸಂಪಾದನೆ ಮಾಡುವಂತಹ ಯೋಗವನ್ನು ಹೊಂದಿದ್ದೀರಿ. ಒಡಹುಟ್ಟಿದವರು ಜೊತೆಗೆ ಸಂತೋಷದ ಸಮಯವನ್ನು ಕಳೆಯಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಕಾಳಜಿಯನ್ನು ತೆಗೆದುಕೊಳ್ಳಬೇಕು. ಲವ್ ಲೈಫ್ ಇನ್ನಷ್ಟು ಸುಮಧುರವಾಗಿರಲಿದೆ. ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಸಂಪೂರ್ಣಗೊಳ್ಳಲಿವೆ, ಅದರಿಂದ ನಿಮ್ಮ ಕೈ ಹಣದ ಹರಿವು ಕೂಡ ಹೆಚ್ಚಾಗಲಿದೆ.

ಕರ್ಕ ರಾಶಿ (Cancer)

ಕರ್ಕ ರಾಶಿಯವರ ತಮ್ಮ ಕೆಲಸದ ಜೀವನದಲ್ಲಿ ಇನ್ನಷ್ಟು ಮೇಲಿನ ಹಂತಕ್ಕೆ ತೇರ್ಗಡೆಯಾಗುವಂತಹ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಶಹಬಾಸ್ ಗಿರಿಯನ್ನು ಪಡೆದುಕೊಳ್ಳಲಿದ್ದೀರಿ. ಇದೇ ಕಾರಣಕ್ಕಾಗಿ ಕೆಲಸದಲ್ಲಿ ನಿಮಗೆ ದೊಡ್ಡ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಮಾಡುವವರು ತಮ್ಮ ನೆಚ್ಚಿನ ಸ್ಥಳಕ್ಕೆ ಟ್ರಾನ್ಸ್ಫರ್ ಪಡೆದುಕೊಳ್ಳಬಹುದಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ವ್ಯಾಪಾರಿಗಳು ಕೂಡ ದೊಡ್ಡ ಮಟ್ಟದ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದಾಗಿ ಪ್ರತಿಯೊಬ್ಬರು ಕೂಡ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.

ತುಲಾ ರಾಶಿ (Libra)

ಉನ್ನತ ವಿದ್ಯಾಭ್ಯಾಸಕ್ಕಾಗಿ ತುಲರಾಶಿಯವರಿಗೆ ವಿದೇಶಕ್ಕೆ ಹೋಗುವಂತಹ ಅವಕಾಶ ಕೂಡ ಕಂಡು ಬರಲಿದೆ. ಹೊಸ ಹೊಸ ಅವಕಾಶಗಳು ಹಾಗೂ ಕೆಲಸದಲ್ಲಿ ಇನ್ನಷ್ಟು ಹೆಚ್ಚಿನ ಲಾಭಗಳು ನಿಮಗೆ ಈ ಸಂದರ್ಭದಲ್ಲಿ ಸಿಗಲಿದೆ. ಮಾನಸಿಕ ನೆಮ್ಮದಿ ಸಿಗಲಿದೆ. ಒಂದು ವೇಳೆ ನೀವು ಮದುವೆ ಗಾಗಿ ಎದುರು ನೋಡುತ್ತಿದ್ದರೆ ಕಂಕಣ ಭಾಗ್ಯ ಕೂಡಿ ಬರಲಿದೆ. ಚಿನ್ನದಂತ ವ್ಯಕ್ತಿತ್ವವನ್ನು ನೀವು ಹೊಂದಿದ್ದೀರಿ ಹಾಗೂ ಇದರಿಂದಾಗಿ ಸಮಾಜದಲ್ಲಿ ನಿಮಗೆ ಸಿಗುವಂತಹ ಗೌರವ ಕೂಡ ಹೆಚ್ಚಾಗಲಿದೆ. ನೀವು ಮಾಡುವಂತಹ ಕೆಲಸಗಳು ಮುಟ್ಟಿದೆಲ್ಲ ಚಿನ್ನ ಎನ್ನುವ ರೀತಿಯಲ್ಲಿ ಯಶಸ್ವಿಯಾಗಲಿವೆ. ಬೇರೆಯವರಿಗೆ ಕನಸು ಮನಸ್ಸಿನಲ್ಲಿಯೂ ಕೂಡ ಕೆಟ್ಟದ್ದನ್ನು ಯೋಚಿಸಬೇಡಿ. ನೀವು ಮಾಡುವಂತ ಪುಣ್ಯ ಕೆಲಸಗಳು ಖಂಡಿತವಾಗಿ ಒಂದಲ್ಲ ಒಂದು ದಿನ ನಿಮ್ಮ ಪರವಾಗಿ ಅದೃಷ್ಟವನ್ನು ತರಲಿವೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಇದರಿಂದಾಗಿ ನಿಮಗೆ ಪುಣ್ಯ ಸಂಪಾದನೆ ಆಗಲಿದೆ.

Comments are closed.