Car Loan: ಇವರಿಗೆ ಮುಂದೆ ಸುಲಭವಾಗಿ ಸಿಗಲ್ಲ ಕಾರ್ ಲೋನ್. ನೀವು ಕೂಡ ಇದ್ದೀರಾ ಚೆಕ್ ಮಾಡಿ.

Car Loan: ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಸ್ವಂತವಾದ ಕಾರನ್ನು ಖರೀದಿ ಮಾಡುವಂತಹ ಆಸೆಯನ್ನು ಹೊಂದಿರುತ್ತಾರೆ ಹಾಗೂ ಅದಕ್ಕಾಗಿ ಅವರು ಹಗಲು ರಾತ್ರಿ ದುಡಿಯುತ್ತಾರೆ. ಪ್ರತಿಯೊಬ್ಬ ಮಿಡಲ್ ಕ್ಲಾಸ್ ಹುಡುಗನ ಕನಸು ತನ್ನ ಸ್ವಂತ ದುಡಿಮೆಯಲ್ಲಿ ಕಾರನ್ನು ಖರೀದಿಸಿ ಅದರಲ್ಲಿ ತನ್ನ ತಂದೆ ತಾಯಿಯನ್ನು ಕರೆದುಕೊಂಡು ಹೋಗುವಂತಹ ಆಸೆಯನ್ನು ಹೊಂದಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ವಿಚಾರಗಳನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕಾರ್ ಅನ್ನು ನೇರವಾಗಿ ಹಣ ನೀಡಿ ಮಿಡ್ಲ್ ಕ್ಲಾಸ್ ಜನರು ಖರೀದಿ ಮಾಡಲು ಕಷ್ಟ ಸಾದ್ಯ ಸರಿ ಎಂದು ಹೇಳಬಹುದಾಗಿದೆ. ಆದರೆ ಲೋನ್ ಮಾಡಿ ಖರೀದಿಸುವ ಸಂದರ್ಭದಲ್ಲಿ ಕೂಡ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಅದೇನೆಂದರೆ ಪ್ರಮುಖವಾಗಿ ನಿಮ್ಮ ಕ್ರೆಡಿಟ್ ಸ್ಕೋರ್. ಪ್ರತಿ ಬ್ಯಾಂಕಿನವರು ಕೂಡ ತಾವು ಸಾಲ ನೀಡುವಂತಹ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅಂದರೆ ಆತ ಈ ಹಿಂದೆ ಪಡೆದುಕೊಂಡಿರುವಂತಹ ಲೋನ್ ಅನ್ನು ಯಾವ ರೀತಿ ಕಟ್ಟಿದ್ದಾನೆ ಅಥವಾ ಕಟ್ಟಲು ಸಾಮರ್ಥ್ಯವನ್ನು ಆತ ಹೊಂದಿದ್ದಾನೋ ಇಲ್ಲವೋ ಎನ್ನುವುದನ್ನು ಅದರ ಮೂಲಕ ಅವರು ಚೆಕ್ ಮಾಡುತ್ತಾರೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕಾಗಿರೋದು ಅತ್ಯಂತ ಪ್ರಮುಖವಾಗಿರುತ್ತದೆ.

ಕ್ರೆಡಿಟ್ ಸ್ಕೋರ್ ಅಥವಾ ಸಿವಿಲ್ ಸ್ಕೋರ್ ಎನ್ನುವುದು 300 ರಿಂದ 900 ಅಂಕಗಳನ್ನು ಹೊಂದಿರುತ್ತದೆ. ಇದರಲ್ಲಿ ಅಂಕ ಹೆಚ್ಚಾದಷ್ಟು ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದೆ ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ವಿಶೇಷವಾಗಿ 700 ಅಂಕ ಗಳಿಗಿಂತ ಹೆಚ್ಚಾಗಿದ್ದರೆ ನೀವು ಸಾಲವನ್ನು ಕಟ್ಟೋದಕ್ಕೆ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಹೊಂದಿದ್ದೀರಿ ಎಂಬುದಾಗಿ ಅರ್ಥವಾಗಿದೆ. ಇಂತಹ ವ್ಯಕ್ತಿಗಳಿಗೆ ಮಾತ್ರ ಕಾರ್ ಲೋನ್ಗಳಂತಹ ಸಾಲಗಳು ಬ್ಯಾಂಕಿನ ಅಥವಾ ಫೈನಾನ್ಸಿಯಲ್ ಕಂಪನಿಗಳಿಂದ ಸಿಗಲಿದೆ. ಹಾಗೆಂದ ಮಾತ್ರಕ್ಕೆ ಕ್ರೆಡಿಟ್ ಸ್ಕೋರ್ ಕಡಿಮೆ ಇತ್ತು ಅಂದ್ರೆ ಸಾಲ ಸಿಗದೇ ಇಲ್ಲ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಆದರೆ ಸಾಮಾನ್ಯ ಲೋನ್ ಗಳಿಗೆ ಇರುವಂತಹ ಬಡ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ಕ್ರೆಡಿಟ್ ಸ್ಕೋರ್ ಕಡಿಮೆ ಇರುವಂತಹ ವ್ಯಕ್ತಿಗಳಿಗೆ ವಿಧಿಸಲಾಗುತ್ತದೆ. ಅಂದರೆ ಸಾಮಾನ್ಯವಾಗಿ 14% ಬಡ್ಡಿಯನ್ನು ವಿಧಿಸುತ್ತಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆ ಇರುವವರಿಗೆ 18% ಬಡ್ಡಿಯನ್ನು ವಿಧಿಸಲಾಗುತ್ತದೆ.

ಇನ್ನು ಮತ್ತೊಂದು ವಿಚಾರ ಏನಂದ್ರೆ? ನಿಮಗೆ ನಿಗದಿತವಾಗಿ ನಿಯಮಿತವಾಗಿ ಸರಿಯಾದ ರೀತಿಯಲ್ಲಿ ಉತ್ತಮ ಸಂಭಾವನೆ ಅಥವಾ ಆದಾಯ ಪ್ರತಿ ತಿಂಗಳು ಬರ್ತಾ ಇದ್ರೆ ಆ ಸಂದರ್ಭದಲ್ಲಿ ಬ್ಯಾಂಕಿನವರು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಗಣನೆಗೆ ತೆಗೆದುಕೊಳ್ಳಲು ಹೋಗುವುದಿಲ್ಲ ನೇರವಾಗಿ ನಿಮ್ಮ ಕಾರ್ ಲೋನ್ ಅನ್ನು ಪರಿಗಣಿಸುತ್ತಾರೆ. ಈ ಮೂಲಕ ನೀವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಕ್ರೆಡಿಟ್ ಸ್ಕೋರ್ ಕಡಿಮೆ ಇರುವವರಿಗೆ ಸಾಲವನ್ನು ನೀಡದೆ ಇರುವುದಿಲ್ಲ ಬದಲಾಗಿ ಬೇರೆಯವರಿಗಿಂತ ಹೆಚ್ಚಿನ ಬಡ್ಡಿಯಲ್ಲಿ ಸಾಲವನ್ನು ಅವರು ನೀಡುತ್ತಾರೆ. ಹೀಗಿದ್ದರೂ ಕೂಡ ಪ್ರತಿಯೊಂದು ಸಾಲವನ್ನು ಪಡೆದುಕೊಳ್ಳುವ ಮುಂಚೆ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಿಳಿದುಕೊಳ್ಳುವುದು ಒಳ್ಳೆಯದು.

Comments are closed.