IPL 2024: ಆರ್‌ಸಿಬಿ ಮೊದಲ ಪಂದ್ಯವನ್ನೇ ಸೋತಿದ್ದು ಯಾಕೆ? ಇವನಿಗೆ ಬಾಲಿಂಗ್ ಕೊಟ್ಟಿದ್ದೆ ತಪ್ಪಾಯ್ತಾ?

IPL 2024: ಚಿಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಡಿದಂತಹ ಮೊದಲ ಪಂದ್ಯದಲ್ಲಿಯೇ ಆರು ವಿಕೆಟ್ಗಳ ಸೋಲನ್ನು ಕಂಡಿದೆ. ಹಾಲಿ ಚಾಂಪಿಯನ್ ಚೆನ್ನೈ ತಂಡದ ವಿರುದ್ಧ ಬೆಂಗಳೂರು ತಂಡ ವಿರೋಚಿತವಾಗಿ ಸೆಣಸಾಡಿದರೂ ಕೂಡ ಕೊನೆಗೆ ಸೋಲನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಮೊದಲಿಗೆ ಟಾಸ್ ಗೆದ್ದಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ತಂಡದ ವಿರುದ್ಧ ಬ್ಯಾಟಿಂಗ್ ಮಾಡುವಂತಹ ನಿರ್ಧಾರವನ್ನು ಮಾಡಿ 20 ಓವರ್ ಗಳಲ್ಲಿ 173 ರನ್ನುಗಳನ್ನು ಗಳಿಸಿ ಚನ್ನೆತಂಡಕ್ಕೆ 120 ಎಸೆತಗಳಲ್ಲಿ 174 ರನ್ ಗಳಿಸುವಂತಹ ಚಾಲೆಂಜ್ ನೀಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚಾಲೆಂಜ್ ಸ್ವೀಕರಿಸಿದ ಚೆನ್ನೈ ಸೂಪರ್ ಕಿಂಗ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 18.4 ಓವರ್ ಗಳಲ್ಲಿ ಗುರಿಯನ್ನು ತಲುಪಿತು. ಈ ಸಂದರ್ಭದಲ್ಲಿ ರಚಿನ್ ರವೀಂದ್ರ, ಶಿವಮ್ ದುಬೆ, ರಹಾನೆ ಹಾಗೂ ಜಡೇಜಾ ಅವರ ಬ್ಯಾಟಿಂಗ್ ಪ್ರದರ್ಶನ ಕೂಡ ತಂಡದ ಗೆಲುವಿಗೆ ನೆರವಾಗಿದೆ. ಟೂರ್ನಮೆಂಟ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ವಿರಾಟ್ ಕೊಹ್ಲಿ ಅವರು ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂಬುದಾಗಿ ಹೇಳಿಕೊಂಡಿದ್ದರು. ಅಭಿಮಾನಿಗಳು ಕೂಡ ಮೊದಲ ಪಂದ್ಯವನ್ನು ಗೆಲ್ಲುವಂತಹ ಭರವಸೆಯನ್ನು ಹೊಂದಿದ್ದರು ಆದರೆ ಕಂಡ ಟೂರ್ನಿಯನ್ನು ಈ ಬಾರಿ ಕೂಡ ಸೋಲಿನಿಂದ ಆರಂಭಿಸಿರುವುದನ್ನು ನೋಡಿರುವಂತಹ ಅಭಿಮಾನಿಗಳು ಮೊದಲ ಪಂದ್ಯ ದೇವರಿಗೆ ಅನ್ನೋದಾಗಿ ಕಾಮೆಂಟ್ ಮಾಡೋದಕ್ಕೆ ಪ್ರಾರಂಭ ಮಾಡಿದ್ದಾರೆ. ಈ ಮೂಲಕ ಮತ್ತೆ ಹಳೆ ಸಂಪ್ರದಾಯವನ್ನು ತಂಡ ಮುಂದುವರಿಸಿಕೊಂಡು ಬಂದಿದೆ ಎಂಬುದಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ.

ಈ ಬೌಲರ್ ನಿಂದಾಗಿ ಆರ್‌ಸಿಬಿ ತಂಡ ಸೋತಿದ್ದು

ಇನ್ನು ಆರ್ಸಿಬಿ ತಂಡ ಸೋಲುವುದಕ್ಕೆ ಕೆಲವು ಕಾರಣಗಳನ್ನು ಕೂಡ ಈ ಸಂದರ್ಭದಲ್ಲಿ ನೀಡಲಾಗಿದೆ. ಕೊನೆ ಕ್ಷಣದಲ್ಲಿ ಸಿಎಸ್‌ಕೆ ಬ್ಯಾಟ್ಸ್ಮನ್ಗಳಿಗೆ ಸ್ವಲ್ಪಮಟ್ಟಿಗೆ ಆರ್‌ಸಿಬಿ ಬೌಲರ್ಗಳು ಕಷ್ಟವನ್ನು ನೀಡಿದರು ಕೂಡ ಆ ಸಂದರ್ಭದಲ್ಲಿ ಜೋಸೆಫ್ ಅವರಿಗೆ ಬೌಲಿಂಗ್ ನೀಡಿದ್ದು ಆರ್‌ಸಿಬಿ ತಂಡದ ಸೋಲನ್ನು ಇನ್ನಷ್ಟು ಖಚಿತಪಡಿಸಿತು. ಅದೇ ಸಂದರ್ಭದಲ್ಲಿ ಅವರ ಎಸೆತಕ್ಕೆ ಶಿವಂ ದುಬೆ ಸಿಕ್ಸರ್ ಬಾರಿಸುವ ಮೂಲಕ ಚೆನ್ನೈ ತಂಡದ ಗೆಲುವನ್ನು ನಿಶ್ಚಿತಪಡಿಸುತ್ತಾರೆ. ಈ ಸಿಕ್ಸರ್ ಮೂಲಕವೇ ತಂಡ ಗೆಲುವನ್ನು ಖಾತ್ರಿಪಡಿಸಿಕೊಂಡಿತು. ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯ ಇದೇ 25ನೇ ತಾರೀಕಿನಂದು ಪಂಜಾಬ್ ವಿರುದ್ಧ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಈ ಪಂದ್ಯವನ್ನಾದರೂ ಗೆಲ್ಲಿ ಎನ್ನುವುದಾಗಿ ಅಭಿಮಾನಿಗಳು ಆರ್ಸಿಬಿ ತಂಡಕ್ಕೆ ಕೋರಿಕೊಂಡಿದ್ದಾರೆ. ಆರ್‌ಸಿಬಿ ತಂಡದ ಬೌಲಿಂಗ್ ಯೂನಿಟ್ ಈ ಬಾರಿ ಕೂಡ ವೀಕ್ ಆಗಿದೆ ಅನ್ನೋದಾಗಿ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Comments are closed.