Astrology: ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತೆ; ಇನ್ನೇನಿದ್ರೂ ನೀವು ದುಡ್ದು ನೋಡೋ ದಿನ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ನಿಮಗೆಲ್ಲರಿಗೂ ತಿಳಿದಿರಬಹುದು ಶುಕ್ರನನ್ನು ಮಂಗಳ ಕಾರಕ ಎಂಬುದಾಗಿ ಕರೆಯಲಾಗುತ್ತದೆ. ಹೀಗಾಗಿ ಮಂಗಳ ಕಾರಕನ ಸಂಕ್ರಮಣದಿಂದಾಗಿ ಮೂರು ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಧನ ಲಾಭವಾಗಲಿದೆ. ಹಾಗಿದ್ರೆ ಆ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ(Gemini)

ಈ ವಿಶೇಷ ಸಂಕ್ರಮಣ ಮಿಥುನ ರಾಶಿಯವರಿಗೆ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಜೀವನದಲ್ಲಿ ಸಾಕಷ್ಟು ಸಂತೋಷದಾಯಕ ಬೆಳವಣಿಗೆಗಳು ನಡೆಯಲಿವೆ. ಶುಕ್ರವಾರದ ಸಂದರ್ಭದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಮಿಥುನ ರಾಶಿಯವರಿಗೆ ಇನ್ನಷ್ಟು ಆರ್ಥಿಕ ಲಾಭ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಪ್ರತಿಯೊಂದು ಸಮಸ್ಯೆಗಳು ಕೂಡ ನಿವಾರಣೆ ಆಗುತ್ತವೆ.

ಕರ್ಕ ರಾಶಿ (Cancer)

ಏಪ್ರಿಲ್ 24 ರಿಂದ ಪ್ರಾರಂಭವಾಗುವಂತಹ ಈ ವಿಶೇಷವಾದ ಸಂಕ್ರಮಣದಲ್ಲಿ ಕರ್ಕ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಿದ್ದಾರೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳವನ್ನು ಪಡೆಯುವಂತಹ ಕರ್ಕ ರಾಶಿಯವರು ವ್ಯಾಪಾರದಲ್ಲಿ ಕೂಡ ದೊಡ್ಡ ಮಟ್ಟದ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಯಾವುದಾದರೂ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಎಂದಾದಲ್ಲಿ ನಿಮ್ಮ ತಂದೆಯವರು ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಪರಿಶ್ರಮದ ಮೇಲೆ ನಿಮಗೆ ಸಿಗುವಂತಹ ಲಾಭ ಹಾಗೂ ಪ್ರತಿಫಲಗಳು ನಿರ್ಧಾರಿತವಾಗಿರುತ್ತದೆ.

ಮಕರ ರಾಶಿ (Capricorn)

ಈ ರಾಶಿ ಬದಲಾವಣೆ ಎನ್ನುವುದು ಮಕರ ರಾಶಿಯವರಿಗೆ ಲಾಭವನ್ನು ತಂದುಕೊಡಲಿದೆ. ಸಾಕಷ್ಟು ಸಮಯಗಳಿಂದ ಹೊಸ ಆಸ್ತಿ ಮನೆ ಮತ್ತು ವಾಹನವನ್ನು ಖರೀದಿ ಮಾಡಬೇಕು ಎನ್ನುವಂತಹ ಮಕರ ರಾಶಿಯವರ ಆಸೆ ಈಡೇರಲಿದೆ. ಇದಕ್ಕಾಗಿ ನಿಮ್ಮ ಮನೆಯಲ್ಲಿ ಇರುವಂತಹ ತಾಯಿ ಅಥವಾ ಯಾವುದೇ ಹಿರಿಯ ಮಹಿಳೆಯರು ಸಹಾಯ ಮಾಡುತ್ತಾರೆ. ನೀವು ಹೊಸ ಆಸ್ತಿ ಅಥವಾ ಮನೆಯನ್ನು ಖರೀದಿ ಮಾಡುವುದಕ್ಕೆ ಅವರು ಆರ್ಥಿಕ ಸಹಾಯವನ್ನು ನಿಮಗೆ ಒದಗಿಸುತ್ತಾರೆ. ಸಾಕಷ್ಟು ಸಮಯಗಳಿಂದ ನಡೆಯದೆ ಅರ್ಧಕ್ಕೆ ನಿಂತುಕೊಂಡಿರುವ ಕೆಲಸಗಳು ಕೂಡ ಮತ್ತೆ ಮರುಚಲನೆಯನ್ನು ಪಡೆದುಕೊಳ್ಳಲಿವೆ.

ಸ್ನೇಹಿತರು ಹಾಗೂ ಬಂಧು ಬಳಗದವರು ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಚೆನ್ನಾಗಿ ಆಗಲಿದೆ. ವ್ಯಾಪಾರ ಹಾಗೂ ಉದ್ಯಮಗಳು ಕೂಡ ಮತ್ತೆ ಉತ್ತಮ ಹಂತಕ್ಕೆ ತಲುಪಲಿವೆ. ಹೀಗಾಗಿ ಕಷ್ಟಪಟ್ಟು ಕೆಲಸ ಮಾಡಿ ಹಾಗೂ ಯಾವುದೇ ಅನುಮಾನವಿಲ್ಲದೆ ನೀವು ದೇವರ ಕೃಪೆಯಿಂದಾಗಿ ಉತ್ತಮ ಲಾಭವನ್ನು ಪಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಈ ಸಂದರ್ಭದಲ್ಲಿ ನೀವು ಜನರಲ್ಲಿ ಹೆಚ್ಚು ಗೌರವ ಹಾಗೂ ಮರ್ಯಾದೆಯನ್ನು ಸಂಪಾದಿಸುವ ಕಾರಣದಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಕೂಡ ಉತ್ತಮವಾದ ಸ್ಥಾನಮಾನ ದೊರಕುವಂತಹ ಸಾಧ್ಯತೆ ಹೆಚ್ಚಾಗಿದೆ.

Comments are closed.