Name Meaning: ’ಅ’ ಅಕ್ಷರದಿಂದ ನಿಮ್ ಹೆಸರು ಶುರುವಾದ್ರೆ ನೀವೇ ಲಕ್ಕಿ ಕಣ್ರಿ; 2024ರ ಲವ್, ಮನಿ ಲೈಫ್ ಹೇಗಿರತ್ತೆ ಗೊತ್ತಾ?

Name Meaning: ನಮ್ಮ ಸನಾತನ ಹಿಂದೂ ಸಂಸ್ಕೃತಿ ಎನ್ನುವುದು ಸಾಕಷ್ಟು ಆಚರಣೆಗಳ ಭಂಡಾರ ಆಗಿದೆ ಎಂದರೆ ತಪ್ಪಾಗಲಾರದು. ಅದೆಷ್ಟೋ ಅಸಂಖ್ಯಾತ ಆಚರಣೆಗಳನ್ನು ನಾವು ಎಷ್ಟೋ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಹಾಗೂ ಪ್ರತಿಯೊಂದು ಆಚರಣೆಗಳಿಗೂ ಅದರದ್ದೇ ಆದಂತಹ ಮಹತ್ವವಿದೆ ಹಾಗೂ ಅವುಗಳಲ್ಲಿ ನಾಮಕರಣ ಕೂಡ ಒಂದಾಗಿದೆ. ನಮ್ಮ ಹಿಂದೂ ಶಾಸ್ತ್ರದಲ್ಲಿ ನಮ್ಮ ಹೆಸರಿನ ಮೊದಲ ಅಕ್ಷರ ನಮ್ಮ ನಡವಳಿಕೆ ಹಾಗೂ ಇನ್ನಿತರ ವಿಚಾರಗಳ ಸಂಕೇತ ಆಗಿರುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ.

ಇನ್ನು ಇವತ್ತಿನ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಒಂದು ವೇಳೆ ನಿಮ್ಮ ಹೆಸರು ಅ ಅಂದರೆ A ಅಕ್ಷರದಿಂದ ಪ್ರಾರಂಭವಾಗುತ್ತಿದೆ ಅಂದರೆ 2024ರಲ್ಲಿ ನಿಮ್ಮ ಲವ್ ಲೈಫ್ ಯಾವ ರೀತಿಯಲ್ಲಿ ಇರಲಿದೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ಈ ಹೆಸರಿನಿಂದ ಪ್ರಾರಂಭವಾಗುವಂತಹ ಜನರ ಮನೋಭಾವನೆ ಬಗ್ಗೆ ತಿಳಿದುಕೊಳ್ಳುವುದಾದರೆ ಇವರು ಅತ್ಯಂತ ಸರಳ ಸ್ವಭಾವದವರು ಹಾಗೂ ಸ್ವಲ್ಪಮಟ್ಟಿಗೆ ರೋಮ್ಯಾಂಟಿಕ್ ಆಗಿ ಕೂಡ ಇರುತ್ತಾರೆ ಅದಕ್ಕಾಗಿ ಇವರದು ಎರಡು ಮಿಶ್ರಿತ ವಿಶೇಷ ಗುಣ ಆಗಿದೆ. ಭಾವನಾತ್ಮಕ ಜೀವಿಯಾಗಿರುವಂತಹ ಇವರು ಬೇರೆಯವರನ್ನು ಗೌರವಿಸುತ್ತಾರೆ. ತಮ್ಮ ಸಂಗಾತಿಯ ಮನಸ್ಸನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ಕಾರಣದಿಂದಾಗಿ ಸಂಬಂಧದಲ್ಲಿ ಇವರು ತಮ್ಮ ಸಂಗಾತಿಗೆ ಅಚ್ಚುಮೆಚ್ಚಿನವರಾಗಿರುತ್ತಾರೆ.

ಇವರು ಅತ್ಯಂತ ಆಕರ್ಷಿತರಾಗಿರುತ್ತಾರೆ ಹಾಗೂ ಬೇರೆಯವರಿಗಿಂತ ಹೆಚ್ಚಾಗಿ ತಮ್ಮ ಸಂಗಾತಿಯನ್ನು ವಿಭಿನ್ನ ರೀತಿಯಲ್ಲಿ ಪ್ರೀತಿಸುತ್ತಾರೆ. ತಮ್ಮ ಆದರ್ಶಗಳ ಮೇಲೆ ಜೀವನ ನಡೆಸುವಂತಹ ಇವರು ತಮ್ಮ ಪ್ರೀತಿ ಪಾತ್ರದಲ್ಲಿ ಕೂಡ ಇದೇ ಗುಣಗಳನ್ನು ಬಯಸುತ್ತಾರೆ. ಜೀವನದಲ್ಲಿ ಅವರು ಕೆಲವೊಂದು ಪ್ರಮುಖ ಆದರ್ಶಗಳನ್ನು ಹೊಂದಿರುತ್ತಾರೆ, ಅದೇ ಅವರಿಗೆ ದೊಡ್ಡ ಆಸ್ತಿ.

2024ರಲ್ಲಿ ಇವರ ಲವ್ ಲೈಫ್ ಹೇಗಿರಲಿದೆ?

2024ರಲ್ಲಿ ಎ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನ ಜನರ ಲವ್ ಲೈಫ್ ಸ್ವಲ್ಪಮಟ್ಟಿಗೆ ಹಿನ್ನಡೆಯನ್ನು ಕಾಣುವಂತಹ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್ ತನಕ ನಿಮ್ಮ ಪ್ರೀತಿಯಲ್ಲಿ ಸ್ವಲ್ಪಮಟ್ಟಿಗೆ ಬಿರುಕು ಮೂಡುವಂತಹ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದಾಗಿ ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವುದನ್ನು ಮರೆಯಬೇಡಿ. ಬೇರೆಯವರ ಪ್ರೀತಿಯ ವಿಚಾರದಲ್ಲಿ ನೀವು ಮೂಗು ತೋರಿಸದೆ ಹೋದರು ಕೂಡ ಈ ಸಮಯದಲ್ಲಿ ನಿಮ್ಮ ಪ್ರೀತಿಗೆ ಸಾಕಷ್ಟು ಸಮಸ್ಯೆಗಳು ಒದಗಿ ಬರಬಹುದಾದ ಸಾಧ್ಯತೆ ಇದೆ ಹೀಗಾಗಿ ಎಚ್ಚರವಾಗಿರಿ. ಪ್ರೀತಿಯ ವಿಚಾರಕ್ಕೆ ಬಂದ್ರೆ ಬೇರೆಯವರಿಗಿಂತ ಭಿನ್ನವಾಗಿರುವಂತಹ ಇವರು ತಮ್ಮ ಸಂಗಾತಿಗಾಗಿ ಏನು ಬೇಕಾದರೂ ಕೂಡ ಮಾಡಲು ಸಿದ್ಧರಾಗಿರುತ್ತಾರೆ. ಪ್ರೀತಿಯನ್ನು ಗೌರವವಾಗಿ ಕಾಣುವಂತಹ ಇವರು ಸದ್ಯದ ಮಟ್ಟಿಗೆ ಪ್ರೀತಿಯಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆಗಳನ್ನು ಎದುರಿಸುವುದು ಜಾಸ್ತಿ ಆಗಿರುತ್ತದೆ. ಇದೇ ಕಾರಣಕ್ಕಾಗಿ ಏಪ್ರಿಲ್ ತಿಂಗಳವರೆಗೆ ಪ್ರೀತಿಯ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆಗಳನ್ನು ಎದುರಿಸುವಂತಹ ಗಟ್ಟಿ ಮನಸ್ಸು ಇರಬೇಕು. ಆದಷ್ಟು ಸಂಗಾತಿಯ ಜೊತೆಗೆ ವಾದ ವಿವಾದಗಳನ್ನು ಕಡಿಮೆ ಮಾಡಿ.

Comments are closed.