Relationship: ಎಂಥ ಲಕ್ ನೋಡಿ ಈ ಹುಡುಗನಿದು 2500 ಕೋಟಿ ಆಸ್ತಿ ಬಿಟ್ಟು ಅವನ ಜೊತೆ ಅವಳು ಬಂದಿದ್ದು ಇದೇ ಕಾರಣಕ್ಕಾ? ಅಬ್ಬಾ ಇಂಥವ್ರೂ ಇದಾರಾ?

Relationship: ಸಾಮಾನ್ಯವಾಗಿ ನೀವು ಸಾಕಷ್ಟು ಲವ್ ಸ್ಟೋರಿಗಳಲ್ಲಿ ನೋಡಿರಬಹುದು ಹುಡುಗಿಯರು ಹಣಕ್ಕಾಗಿ ಆಸೆ ಪಡ್ತಾರೆ ಹಾಗೂ ಹಣ ಇರುವವರ ಹಿಂದೆ ಹೋಗಿ ಅವರನ್ನ ಮದುವೆಯಾಗುತ್ತಾರೆ ಅನ್ನೋದನ್ನ ಕೇಳಿರಬಹುದು. ಕೇವಲ ಸಿನಿಮಾಗಳಲ್ಲಿ ಮಾತ್ರ ಅಲ್ಲದೆ ನಿಜ ಜೀವನದಲ್ಲಿ ಕೂಡ ಈ ರೀತಿ ಹಲವಾರು ಸ್ಟೋರಿಗಳು ನಿಮ್ಮ ಸುತ್ತಮುತ್ತಲು ನಡೆದಿರಬಹುದು. ಆದರೆ ಇವತ್ತು ನಾವು ಈಗ ಹೇಳುವುದಕ್ಕೆ ಹೊರಟಿರುವ ಸ್ಟೋರಿ ಕೇಳಿದರೆ ಈ ರೀತಿ ಹುಡುಗೀರು ಕೂಡ ಇರ್ತಾರ ಅನ್ನೊದಾಗಿ ನೀವು ಆಶ್ಚರ್ಯ ಪಡ್ತೀರಾ.

ಪ್ರೀತಿಗಾಗಿ ಈಕೆ ಮಾಡಿದ್ದೇ ಬೇರೆ

ಆಗರ್ಭ ಶ್ರೀಮಂತನ ಮಗಳಾಗಿರುವಂತಹ ಈಕೆ ನೂರಾರು ಕೋಟಿ ರೂಪಾಯಿ ಆಸ್ತಿಗಳ ಒಡತಿ. ಸಾಮಾನ್ಯ ವ್ಯಕ್ತಿಯ ಮೇಲೆ ಈಕೆ ಗೆ ಪ್ರೀತಿ ಪ್ರಾರಂಭವಾಗಿ ಆಕೆ ಆತನಿಗೆ ಮಾಡಿದ್ದನ್ನು ಕೇಳಿದರೆ ನೀವು ಕೂಡ ನಿಬ್ಬೆರಗಾಗುತ್ತೀರಾ. ಹಣಮನ್ನೆ ಪ್ರೀತಿ ಮಾಡುವಂತಹ ಜನರ ದುನಿಯಾದಲ್ಲಿ ಏಂಜಲ್ ಫ್ರಾನ್ಸಿಸ್ ಎನ್ನುವಂತಹ ಹುಡುಗಿ 2500 ಕೋಟಿ ಆಸ್ತಿಯನ್ನು ಬಿಟ್ಟು ತನ್ನ ಪ್ರಿಯಕರನ ಜೊತೆಗೆ ಬಂದಿದ್ದಾಳೆ. ಇನ್ನು ಆಕೆಯ ಪ್ರಿಯಕರ ಕೂಡ ಸಾಮಾನ್ಯ ವ್ಯಕ್ತಿ ಅನ್ನೋದನ್ನ ನಾವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ. ಜೆಡಿಯಾ ಫ್ರಾನ್ಸಿಸ್ ಎನ್ನುವಂತಹ ವ್ಯಕ್ತಿಯನ್ನು ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಭೇಟಿಯಾದ ಇವಳು ಸ್ನೇಹದಿಂದ ಪ್ರೀತಿಗೆ ತಮ್ಮ ಸಂಬಂಧವನ್ನು ಪರಿವರ್ತನೆ ಮಾಡುವುದಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿಲ್ಲ.

ಆದರೆ ಆಟೋ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು ಈಕೆಯ ಮನೆಯವರು ಅವನ ಜೊತೆಗೆ ತಮ್ಮ ಮಗಳನ್ನು ಮದುವೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಹಾಗೂ ವಿರೋಧ ಮಾಡ್ತಾರೆ. ಆ ಹುಡುಗಿಯ ತಂದೆ ಮಲೇಶಿಯಾ ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಬಿಸಿನೆಸ್ ಹೊಂದಿರುವಂತಹ ಶ್ರೀಮಂತ. ಹಣ ಬೇಕಾ ಪ್ರೀತಿ ಬೇಕ ಎಂಬುದಾಗಿ ತಂದೆಯಿದ್ದಂತಹ ಆಪ್ಷನ್ ಗೆ ಆಕೆ ಒಪ್ಪಿಕೊಂಡಿದ್ದು ಪ್ರೀತಿಯನ್ನು.

ಆತನನ್ನು ಮದುವೆಯಾದರೆ ಆಸ್ತಿಯಲ್ಲಿ ಯಾವುದೇ ಪಾಲು ಕೊಡೋದಿಲ್ಲ ಅನ್ನೋ ಮನೆಯವರ ಮಾತಿಗೆ ಹಾಗೆ ಪ್ರೀತಿಯನ್ನು ಮೊದಲನೇ ಆಯ್ಕೆಯಾಗಿ ಮಾಡಿ ಮನೆ ಬಿಟ್ಟು ಹೊರಬಂದು ಆತನ ಜೊತೆಗೆ ಜೀವನ ಮಾಡ್ತಾಳೆ. ಅಷ್ಟೊಂದು ಕೋಟಿ ರೂಪಾಯಿ ಆಸ್ತಿ ಎದುರುಗಡೆ ಇದ್ದರೂ ಕೂಡ ತಾನು ನಿಜವಾದ ಪ್ರೀತಿಯನ್ನು ಆಯ್ಕೆ ಮಾಡುತ್ತೇನೆ ಎಂದು ಸಾಮಾನ್ಯ ಹುಡುಗನ ಹಿಂದೆ ಹೋದ ಆಕೆಯ ಪ್ರೀತಿಗೆ ಪ್ರತಿಯೊಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಈ ಸಮಯದಲ್ಲಿ ಕೂಡ ನಿಜವಾದ ಪ್ರೀತಿ ನಮ್ಮ ಸಮಾಜದಲ್ಲಿ ಬದುಕಿದೆ ಅನ್ನೋದನ್ನ ಈ ಘಟನೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಎಲ್ಲ ಹುಡುಗಿಯರು ಕೂಡ ಹಣದ ಹಿಂದೆ ಹೋಗುವುದಿಲ್ಲ ಅನ್ನೋದನ್ನ ಈ ಘಟನೆ ಎತ್ತಿ ಹೇಳಿದೆ.

Comments are closed.