Vastu Tortoise: ನಿಮ್ಮ ಮನೆಗೆ ವಾಸ್ತು ಆಮೆ ತಂದು ಎಲ್ಲೆಂದ್ರಲ್ಲಿ ಇಟ್ರೇ ಹಣ ಬರೋದಕ್ಕಿಂತ ಕಷ್ಟನೇ ಜಾಸ್ತಿ; ಮೊದಲು ಈ ವಿಷಯ ತಿಳಿದುಕೊಳ್ಳಿ!

Vastu Tortoise: ಪುರಾಣ ಗ್ರಂಥಗಳಲ್ಲಿ ನೀವು ತಿಳಿದುಕೊಂಡಿರುವ ಪ್ರಕಾರ ಮಹಾವಿಷ್ಣುವಿನ ಕೂರ್ಮಾವತಾರವನ್ನು ಆಮೆ ಅವತಾರ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಇಂದಿನ ದಿನಗಳಲ್ಲಿ ನಾವು ಬಳಸುವಂತಹ ವಾಸ್ತು ಶಾಸ್ತ್ರದ ಆಮೆಯನ್ನು ಕೂಡ ಇದಕ್ಕೆ ಹೋಲಿಸಲಾಗುತ್ತದೆ. ಇನ್ನು ಆಮೆಯ ಅರ್ಥ ದೀರ್ಘಾಯುಷ್ಯ ಎಂಬುದಾಗಿ ತಿಳಿದುಕೊಳ್ಳಬೇಕಾಗಿದೆ. ದೇವತೆಗಳು ಹಾಗೂ ಅಸುರರು ಸಮುದ್ರ ಮಂಥನ ಮಾಡುವ ಸಂದರ್ಭದಲ್ಲಿ ಪರ್ವತಕ್ಕೆ ಆಧಾರ ಎನ್ನುವಂತೆ ಆಮೆಯನ್ನು ಅಂದರೆ ವಿಷ್ಣುವಿನ ಕೂರ್ಮಾವತಾರವನ್ನು ಕೆಳಗೆ ಇರಿಸಲಾಗಿತ್ತು.

ವಾಸ್ತುವಿನ ಆಮೆಯನ್ನು ನೀವು ಕೆಲವೊಂದು ದಿಕ್ಕಿನಲ್ಲಿ ಏರಿಸುವ ಮೂಲಕ ನೀವು ನಿಮ್ಮ ಮನೆಯಲ್ಲಿ ಹಾಗೂ ವ್ಯಾಪಾರಸ್ಥಳದಲ್ಲಿ ಉತ್ತಮ ಸಕಾರಾತ್ಮಕ ಪ್ರಭಾವವನ್ನು ಪಡೆದುಕೊಳ್ಳಬಹುದಾಗಿದೆ. ಉತ್ತರ ದಿಕ್ಕನ್ನು ಕುಬೇರನ ಮೂಲೆ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ ಹೀಗಾಗಿ ಆಮೆಯನ್ನು ಮನೆಯ ಅಥವಾ ವ್ಯಾಪಾರಸ್ಥಳದ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಅಲ್ಲಿನ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಇನ್ನು ಪುರಾಣಗಳ ಪ್ರಕಾರ ಆಮೆಯನ್ನು ರಕ್ಷಕ ಎಂಬುದಾಗಿ ಕೂಡ ಪರಿಗಣಿಸಲಾಗುತ್ತದೆ ಹೀಗಾಗಿ ಹೊರಗಿನ ದುಷ್ಟ ಶಕ್ತಿಗಳಿಂದ ಮನೆಯನ್ನು ಹಾಗೂ ಮನೆಯವರನ್ನು ರಕ್ಷಿಸಲು ಪೂರ್ವ ದಿಕ್ಕಿನಲ್ಲಿ ಅಂದರೆ ಮನೆಯ ಮುಂಭಾಗದಲ್ಲಿ ದ್ವಾರದಲ್ಲಿ ಆಮೆಯನ್ನು ಇರಿಸುವುದು ಕೂಡ ಮನೆಗೆ ಒಳ್ಳೆದಾಗಲಿದೆ.

ವಾಸ್ತುವಿನ ಆಮೆಯನ್ನು ಯಾವ ದಿಕ್ಕಿನಲ್ಲಿ ಇಡೋದು ಉತ್ತಮ

ವಾಸ್ತುವಿನ ಆಮೆಗಳಲ್ಲಿ ಕೂಡ ಬೇರೆ ಬೇರೆ ರೀತಿಯ ಆಮೆಗಳು ಇರುತ್ತವೆ. ಒಂದು ವೇಳೆ ನೀವು ಹಿತ್ತಾಳೆ ಹಾಗೂ ಲೋಹದ ಆಮೆಯನ್ನು ಹೊಂದಿದ್ದರೆ. ವಾಯುವ್ಯ ಅಥವಾ ನೈರುತ್ಯ ದಿಕ್ಕಿನಲ್ಲಿ ಆಮೆಯನ್ನು ಇಡಬೇಕು. ಒಂದು ವೇಳೆ ಮರದ ಆಮೆಗಳನ್ನು ತಂದಿದ್ರೆ ಆ ಸಂದರ್ಭದಲ್ಲಿ ನೀವು ಅದನ್ನು ಪೂರ್ವ ಅಥ್ವಾ ದಕ್ಷಿಣ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದರಿಂದಾಗಿ ಮನೆಯಲ್ಲಿ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

ವಾಸ್ತುಶಾಸ್ತ್ರದ ಸ್ಪಟಿಕ ಆಮೆಯನ್ನು ನೀವು ಮನೆಗೆ ತೊಂದರೆ ಅದನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಸಂಪತ್ತು ಹಾಗೂ ಅದೃಷ್ಟದ ಸಂಕೇತ ಆಗಿರುವಂತಹ ಸ್ಪಟಿಕದ ಆಮೆಯನ್ನು ನೀವು ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ನೀವು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ ಹಾಗೂ ಆರ್ಥಿಕ ಸದೃಢತೆ ಕಂಡು ಬರಲಿದೆ. ಉತ್ತರ ದಿಕ್ಕಿನಲ್ಲಿ ವಾಸ್ತು ಶಾಸ್ತ್ರದ ಆಮೆಯನ್ನು ಇಡುವುದರಿಂದಾಗಿ ಕೆಲಸದ ಜೀವನದಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳನ್ನು ನೀವು ಕಾಣಲಿದ್ದೀರಿ. ನಿಮ್ಮಲ್ಲಿರುವಂತಹ ಮಾನಸಿಕ ಸಮಸ್ಯೆಗಳು ಹಾಗೂ ಆತಂಕಗಳನ್ನು ಕೂಡ ಇದು ದೂರ ಮಾಡುವುದರಿಂದಾಗಿ ವಾಸ್ತು ಶಾಸ್ತ್ರದ ಆಮೆಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ದಿಷ್ಟ ದಿಕ್ಕಿನಲ್ಲಿ ಇಡೋದು ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ಹೀಗಾಗಿ ನೀವು ಕೂಡ ನಿಮ್ಮ ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರದ ಶುಭ ಸೂಚಕವಾಗಿರುವಂತಹ ಈ ಆಮೆಗಳನ್ನು ತಟ್ಟೆಯ ಮೇಲೆ ನೀರನ್ನು ತುಂಬಿಸಿ ಇಟ್ಟರೆ ನಿಮ್ಮ ಮನೆಯಲ್ಲಿ ಒಳ್ಳೆಯ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.

Comments are closed.