Health Tips: ಪುರುಷರು ಮಧ್ಯವಯಸ್ಸು ತಲುಪುತಿದ್ದ ಹಾಗೆ ಇದು ದುರ್ಬಲವಾಗುತ್ತಂತೆ. ಕೂಡಲೇ ಈ ಚಿಕಿತ್ಸೆ ಮಾಡ್ಕೊಳ್ಳಿ!

Health Tips: ಪ್ರತಿಯೊಬ್ಬರಿಗೂ ಕೂಡ ವಯಸ್ಸಾಗುತ್ತ ಹೋದಂತೆ ಅದರಲ್ಲೂ ವಿಶೇಷವಾಗಿ ಐವತ್ತು ವರ್ಷದ ನಂತರ ಸಾಕಷ್ಟು ದೈಹಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ನೀವು ಕಾಣಬೇಕಾಗಿರುತ್ತದೆ. ಅದರಲ್ಲೂ ಇವತ್ತಿನ ಲೇಖನದಲ್ಲಿ ವಿಶೇಷವಾಗಿ 50 ವರ್ಷದ ನಂತರ ಪುರುಷರ ಪ್ರಾಸ್ಟೆಟ್ ಗ್ರಂಥಿಯ ಹಿಗ್ಗುವಿಕೆಯ ಬಗ್ಗೆ ಹೇಳಲು ಹೊರಟಿದ್ದೇವೆ. National institute of diabetes and digestive ಮತ್ತು ಕಿಡ್ನಿ ಡಿಸೀಸ್ ಪ್ರಕಾರ 50 ವರ್ಷದ ನಂತರದ ಪುರುಷರಿಗೆ ಈ ಸಮಸ್ಯೆ ಖಂಡಿತವಾಗಿ ಕಂಡುಬರುತ್ತದೆ ಎಂಬುದಾಗಿ ತಿಳಿಸಿದೆ. ಯಾಕೆಂದರೆ ನಡೆಸಿರುವಂತಹ ಸರ್ವೆಯ ಪ್ರಕಾರ 50% ಪುರುಷರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ 80 ವರ್ಷಗಳ ನಂತರ 90 ಪ್ರತಿಶತ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಪ್ರಾಸ್ಟೆಟ್ ಗ್ರಂಥಿಯ ಸಮಸ್ಯೆ

ಪ್ರೋಸ್ತೆಟ್ ಗ್ರಂಥಿ ಹಿಗ್ಗುವ ಕಾರಣದಿಂದಾಗಿ ನಿಮ್ಮ ಮೂತ್ರಕೋಶ ಒತ್ತಡಕ್ಕೆ ಒಳಗಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರೋಸ್ಟೇಟ್ ಯಾವ ಕಾರಣಕ್ಕಾಗಿ ಹೀಗೂತ್ತದೆ ಎನ್ನುವಂತಹ ವಿಚಾರದ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಆದರೆ ಜೀವ ಕಣಗಳ ಬದಲಾವಣೆ ಇದರ ಮೇಲೆ ಪರಿಣಾಮ ಬೀರಬಹುದು ಎನ್ನುವುದಾಗಿ ಅಂದಾಜಿಸಲಾಗಿದೆ.

ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವಂತಹ ಗುಣಲಕ್ಷಣಗಳ ಬಗ್ಗೆ ಮಾತನಾಡುವುದಾದರೆ ಮೂತ್ರ ಸೋರುವುದು ಹಾಗೂ ಮೂತ್ರ ವಿಸರ್ಜನೆ ಮಾಡಲು ಕಷ್ಟ ಆಗೋದು, ಹೆಚ್ಚೆಚ್ಚು ಬಾರಿ ಮೂತ್ರ ವಿಸರ್ಜನೆಯನ್ನು ಮಾಡುವುದು ಹಾಗೂ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನೋ- ವು ಉಂಟಾಗುವುದು ಹಾಗೂ ಅನಿರೀಕ್ಷಿತವಾಗಿ ಮೂತ್ರ ವಿಸರ್ಜನೆಯ ಅನುಭವ ಕಂಡುಬರುವುದು ಇವೆಲ್ಲ ಪ್ರೋಸ್ಟೇಟ್ ಹಿಗ್ಗುವಿಕೆಯ ಗುಣಲಕ್ಷಣಗಳು ಎಂದು ಹೇಳಬಹುದು.

ಕಡ್ಡಾಯವಾಗಿ ಈ ಚಿಕಿತ್ಸೆಯನ್ನು ನೀಡಬೇಕು

ಇದಕ್ಕೆ ಚಿಕಿತ್ಸೆಯನ್ನು ನೀಡಿದೆ ಹೋದಲ್ಲಿ ನಿಮ್ಮ ಮೂತ್ರಕೋಶದಲ್ಲಿ ಕಲ್ಲುಗಳು ಕಂಡುಬರುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತವೆ. ಈ ಸಂದರ್ಭದಲ್ಲಿ ಚಿಕಿತ್ಸೆ ಮಾಡದೆ ಬಿಟ್ಟರೆ ಮೂತ್ರಪಿಂಡದ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಮೂತ್ರದ ಹಿಮ್ಮುಖ ಹರಿವು ಮೂತ್ರಪಿಂಡದ ಮೇಲೆ ಒತ್ತಡವನ್ನು ಹೆಚ್ಚು ಮಾಡುತ್ತದೆ.

ಈ ಸಂದರ್ಭದಲ್ಲಿ ಪ್ರಾಸ್ಟೇಟ್ ಹೀಗ್ಗುವಿಕೆಯನ್ನು ತಡೆಯಲು ಮಾಡಿರುವಂತಹ ಸರ್ವೆಗಳ ಪ್ರಕಾರ ಸತುವಿನ ಅಂಶದ ಅವಶ್ಯಕತೆ ಹೆಚ್ಚಾಗಿರುತ್ತದೆ ಹಾಗೂ ಸತುವಿನ ಅಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥ ಎಂದರೆ ಎಳ್ಳು. ಎಳ್ಳಿನ ಪಾನೀಯವನ್ನು ಸೇವಿಸುವುದು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಬಹುದು. ಇನ್ನು ಸಾಲ್ಮಾನ್ ಮೀನಿನಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವಂತಹ ಒಮೆಗಾ ಕಬ್ಬಿನ ಆಮ್ಲಗಳು ಇರುತ್ತವೆ. ಹೀಗಾಗಿ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ಪ್ರಾಸ್ಟೇಉ ಹಿಗ್ಗುವಿಕೆ ಹಾಗೂ ಹೃದಯ ಮತ್ತು ಕ್ಯಾನ್ಸರ್ ಸಂಬಂಧಿತ ಸಮಸ್ಯೆಗಳು ಕೂಡ ದೂರವಾಗಲಿವೆ. ಈ ಮೂಲಕ ನೀವು ನಿಮ್ಮನ್ನು ಕಾಡುತ್ತಿರುವಂತಹ ಈ ಸಮಸ್ಯೆಯಿಂದ ಆರೋಗ್ಯವಂತರಾಗಿ ಹೊರ ಬರಬಹುದಾಗಿದೆ.

Comments are closed.