Relationship: ತಾಯಿಗಾಗಿ ತನ್ನ ತೊಡೆ ಚರ್ಮದಿಂದ ಚಪ್ಪಲಿ ಮಾಡಿ ತೊಡಿಸಿದ ಮಗ; ಯಾರೂ ಮಾಡದ ಈ ಕೆಲಸ ಮಾಡಿದ್ಯಾಕೆ ಆತ!

Relationship: ಒಂದು ಕಾಲದಲ್ಲಿ ತಂದೆ ತಾಯಿಯರಿಗೆ ತ್ಯಾಗ ಮಾಡಿದ ಮಕ್ಕಳ ಕಥೆಯನ್ನು ಉದಾಹರಣೆಯಾಗಿ ಹೇಳುವಾಗ ಶ್ರವಣ ಕುಮಾರನ ಕಥೆಯನ್ನು ಪ್ರಮುಖವಾಗಿ ಎಲ್ಲರಿಗೂ ಹೇಳಲಾಗುತ್ತಿತ್ತು. ಅದರಲ್ಲಿ ವಿಶೇಷವಾಗಿ ತನ್ನ ಮಕ್ಕಳಿಗಾಗಿ ತಾಯಿ ತನ್ನ ಸರ್ವಸ್ವವನ್ನು ಕೂಡ ತ್ಯಾಗ ಮಾಡುತ್ತಾಳೆ. ಇದೇ ಕಾರಣಕ್ಕಾಗಿ ಆಕೆಯನ್ನು ಕರುಣಾಮಯಿ ಎಂಬುದಾಗಿ ದೇವಾನುದೇವತೆಗಳು ಕೂಡ ಹೇಳುತ್ತಾರೆ. ಆದರೆ ಈ ಕಲಿಯುಗದಲ್ಲಿ ಕೂಡ ತಾಯಿಯ ಋಣವನ್ನು ತೀರಿಸೋದಕ್ಕಾಗಿ ಇನ್ನೊಬ್ಬ ಮಗ ಮಾಡಿರುವುದನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡ್ತೀರಾ. ಈ ಪ್ರಪಂಚದಲ್ಲಿ ಯಾವ ಮಗ ಕೂಡ ಮಾಡದಂತಹ ಕೆಲಸವನ್ನು ಇನ್ನೊಬ್ಬ ಮಗ ತನ್ನ ತಾಯಿಗಾಗಿ ಮಾಡಿದ್ದಾನೆ.

ತಾಯಿಗಾಗಿ ಯಾರು ಮಾಡಿದ ಕೆಲಸ ಮಾಡಿದ ಈ ಮಗ

ಮಹಾರಾಷ್ಟ್ರ ರಾಜ್ಯದ ಉಜ್ಜಯಿನಿಯಲ್ಲಿ ನಡೆದಿರುವಂತಹ ಈ ಘಟನೆ ಈಗ ಎಲ್ಲರನ್ನು ಕೂಡ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದೆ. ಹೌದು, ರೋಣಕ್ ಗುರ್ಜರ್ ಎನ್ನುವಾತ ತನ್ನ ತೊಡೆಯ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿಕೊಟ್ಟಿದ್ದಾನೆ. ರಾಮಾಯಣದಿಂದ ಪ್ರೇರೇಪಿತನಾಗಿ ತನ್ನ ತಾಯಿಗೆ ಈ ರೀತಿ ಮಾಡಿದ್ದಾನೆ ಎಂಬುದಾಗಿ ಆತ ಹೇಳಿಕೊಂಡಿರುವಂತಹ ವಿಚಾರ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಮೊದಲ ಬಾರಿಗೆ ಆತ ಈ ರೀತಿ ತೊಡೆಯ ಚರ್ಮ ತೆಗೆದು ಚಪ್ಪಲ್ ಮಾಡಿಸಬೇಕು ಎಂದು ಹೇಳಿದಾಗ ಡಾಕ್ಟರ್ ಕೂಡ ಒಂದು ಕ್ಷಣ ಶಾ-ಕ್ ಆಗಿದ್ರಂತೆ.

ನಂತರ ಆತ ಶಸ್ತ್ರಚಿಕಿತೆಯ ಮೂಲಕ ಚಪ್ಪಲ್ಗಾಗಿ ಚರ್ಮವನ್ನು ತೆಗೆಸಿದ್ದಾನೆ. ವೈದ್ಯರು ಕೂಡ ತಾಯಿಗಾಗಿ ಮಗನ ಆಸೆಯನ್ನು ನೆರವೇರಿಸುವ ಕೆಲಸಕ್ಕೆ ಜೊತೆಯಾಗಿದ್ದರು. ಎರಡು ಕಡೆಯ ತೊಡೆಯ ಚರ್ಮವನ್ನು ಶಸ್ತ್ರಚಿಕಿತೆಯ ಮೂಲಕ ತೆಗೆದಿದ್ದಾರೆ. ಇನ್ನು ತಮ್ಮ ಮಗ ಈ ರೀತಿ ತಮ್ಮ ತೊಡೆಯ ಚರ್ಮವನ್ನು ಚಪ್ಪಲಿಯನ್ನಾಗಿ ಮಾಡಿರುವಂತಹ ಘಟನೆಯನ ನೋಡಿ ಆತನ ತಾಯಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕುತ್ತಲೇ ನನ್ನ ಮಗ ಈ ರೀತಿ ಮಾಡುತ್ತಾನೆ ಎಂಬುದಾಗಿ ನಾನು ಭಾವಿಸಿರಲಿಲ್ಲ ದೇವರು ಆತನ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ.

ಆತನನ್ನು ಮಗನಾಗಿ ಪಡೆದಿರುವ ನಾನು ಅದೃಷ್ಟವಂತೆ ಎಂಬುದಾಗಿ ಹೊಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಮಗ ತನ ತಾಯಿಗೆ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿರುವಂತಹ ಫೋಟೋಗಳು ವೈರಲ್ ಆಗುತ್ತಿವೆ. ಕೆಲವರಿಗೆ ಇದು ಮೂರ್ಖತನ ಎಂಬುದಾಗಿ ಕಾಣಿಸಬಹುದು ಆದರೆ ತಾಯಿಯ ಮೇಲೆ ಬೆಟ್ಟದಷ್ಟು ಪ್ರೀತಿ ಹಾಗೂ ಗೌರವವನ್ನು ಹೊಂದಿರುವಂತಹ ಆ ಮಗನಿಗೆ ತನ್ನ ತಾಯಿಯ ಋಣವನ್ನು ತೀರಿಸಲು ಇದೊಂದು ಚಿಕ್ಕ ಅವಕಾಶ ಎಂದು ಹೇಳಬಹುದಾಗಿದೆ. ತಾಯಿಯನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವಂತಹ ಮಕ್ಕಳಿಗೆ ಖಂಡಿತವಾಗಿ ಈ ಘಟನೆ ಭಾವನಾತ್ಮಕವಾಗಿ ಕಾಣಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Comments are closed.