Solar Rooftop: ನೀವು ಬಾಡಿಗೆ ಮನೆಯಲ್ಲಿದ್ದೀರಾ? ಟೆನ್ಶನ್ ಬೇಡ, ನೀವೂ ರೂಫ್ ಟಾಪ್ ಗೆ ಸೋಲಾರ್ ಹಾಕಿಸಿಕೊಳ್ಳಬಹುದು ಹೇಗೇ ನೋಡಿ!

Solar Rooftop: ಬಾಡಿಗೆ ಮನೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಬೇಕಾ ಇಲ್ವಾ ಅನ್ನೋದಾಗಿ ಸಾಕಷ್ಟು ಜನರಿಗೆ ಅನುಮಾನ ಇರಬಹುದು ಅಂತವರಿಗೆ ಇವತ್ತಿನ ಈ ಲೇಖನದ ಮೂಲಕ ನಾವು ಸಾಕಷ್ಟು ಮಾಹಿತಿಗಳನ್ನು ನೀಡುವುದಕ್ಕೆ ಹೊರಟಿದ್ದೇವೆ. 25 ವರ್ಷಗಳ ಅಗ್ರಿಮೆಂಟ್ ಇರುವಂತಹ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸುವುದಕ್ಕೆ ಬಾಡಿಗೆ ಮನೆ ಅವರಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಬಾಡಿಗೆ ಮನೆಯವರು ಸೋಲಾರ್ ರೂಫ್ ಟಾಪ್ ಹಾಕೋದಕ್ಕೆ ಮೂರರಿಂದ ನಾಲ್ಕು ಲಕ್ಷಗಳವರೆಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಇದು ಅವರಿಗೆ ಕಷ್ಟ ಸಾಧ್ಯವಾದ ಮಾತು.

ಇವತ್ತಿನ ಲೇಖನಿಯಲ್ಲಿ 20 ರಿಂದ 30 ಸಾವಿರ ರೂಪಾಯಿಗಳ ಖರ್ಚಿನಲ್ಲಿ ಕೂಡ ಬಾಡಿಗೆ ಮನೆಯವರು ಸೋಲಾರ್ ಪ್ಯಾನೆಲ್ ಅನ್ನು ಹಾಕಿಸಿಕೊಳ್ಳಬಹುದಾದ ಮಾಹಿತಿಯನ್ನು ಹೇಳಲು ಹೊರಟಿದ್ದೇವೆ. ಸೋಲಾರ್ ರೂಫ್ ಟಾಪ್ ಗ್ರೇಡ್ ಮಾದರಿಯಲ್ಲಿ ತಯಾರಿಸಿ ಅದನ್ನ ಯುಪಿಎಸ್ ಬ್ಯಾಟರಿಗಳಿಗೆ ಸಂಪರ್ಕ ಕೊಡಬಹುದಾಗಿದ್ದು ಕೇವಲ ಇಷ್ಟು ಮಾತ್ರವಲ್ಲದೆ ಈ ಸಮಯದಲ್ಲಿ ಎಸ್ಕಾಂನಿಂದ ಪಡೆಯುವಂತಹ ಕರೆಂಟ್ ಕನೆಕ್ಷನ್ ಅನ್ನು ಕಡಿತ ಗೊಳಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವ ರೀತಿಯಲ್ಲಿ ವಿದ್ಯುತ್ ಕೊರತೆ ಕಂಡುಬರುತ್ತದೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಹೀಗಾಗಿ ಈ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಸೋಲಾರ್ ಪ್ಯಾನೆಲ್ ಅನ್ನು ರೂಫ್ ಟಾಪ್ ಮೇಲೆ ಹಾಕಿಸುವುದರ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ತಮ ಮಟ್ಟದ ವಿದ್ಯುತ್ ಬಳಕೆಯನ್ನು ಮಾಡಬಹುದಾಗಿದೆ. ಇದೇ ರೀತಿ ಪ್ರತಿಯೊಬ್ಬರೂ ಕೂಡ ಇದೇ ಮಾರ್ಗವನ್ನು ಅನುಸರಿಸುವುದಕ್ಕೆ ಹೋದರೆ ಈಗಾಗಲೇ ರಾಜ್ಯ ಅಥವಾ ದೇಶದಲ್ಲಿ ಕಂಡುಬರುವಂತಹ ವಿದ್ಯುತ್ ಕೊರತೆಯನ್ನು ಸೋಲಾರ್ ರೂಪದಲ್ಲಿ ಪರಿವರ್ತಿತ ಮಾರ್ಗದ ಮೂಲಕ ಬೇಕಾಗಿರುವಂತಹ ಅಗತ್ಯ ವಿದ್ಯುತ್ ಪಡೆದುಕೊಳ್ಳುವುದರ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ.

ಕೇವಲ 25 ರಿಂದ 30 ಸಾವಿರ ರೂಪಾಯಿಗಳ ಕಡಿಮೆ ಖರ್ಜಿನಲ್ಲಿ ನೀವು ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿಕೊಂಡು ನಿಮಗೆ ಬೇಕಾಗಿರುವಂತಹ ವಿದ್ಯುತ್ ಅಗತ್ಯತೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ನೀವು ಒಂದು ವೇಳೆ ಬಾಡಿಗೆ ಮನೆಯಲ್ಲಿರುವ ಕಾರಣದಿಂದಾಗಿ ಒಂದೇ ಕಡೆ ನೆಲೆಸಿರುತ್ತೀರಿ ಎಂಬುದಾಗಿ ಹೇಳಲು ಕೂಡ ಸಾಧ್ಯವಿರುವುದಿಲ್ಲ. ಹೀಗಾಗಿ ಬೇರೆ ಕಡೆ ನೀವು ಹೋಗುವ ಸಂದರ್ಭದಲ್ಲಿ ಕೂಡ ಸೋಲಾರ್ ಪ್ಯಾನೆಲ್ ಸಿಸ್ಟಮ್ ಅನ್ನು ವರ್ಗಾವಣೆ ಮಾಡಬಹುದಾದಂತಹ ಅವಕಾಶ ಕೂಡ ಇರುವುದರಿಂದ ಇದೊಂದು ಉತ್ತಮವಾದ ಮಾಧ್ಯಮ ಎಂದು ಹೇಳಬಹುದಾಗಿದೆ. ಬೇಕಾಗಿರುವಂತಹ ಅಗತ್ಯ ವಿದ್ಯುತ್ ಪೂರೈಕೆಯನ್ನು ನೀವು ಈ ರೀತಿಯ ಅತ್ಯಂತ ಕಡಿಮೆ ಖರ್ಚಿನ ಹಾಗೂ ಪರಿಸರಸ್ನೇಹಿ ಮಾರ್ಗದ ಮೂಲಕ ಪಡೆದುಕೊಳ್ಳಬಹುದಾಗಿದೆ.

Comments are closed.