Kajol Devgan: ಶಾರುಖ್ ಖಾನ್ ಜೊತೆಗೆ ನಟನೆ ಮಾಡುವಾಗ ಕಾಜಲ್ ಗೆ ಏನಾಗಿತ್ತು ಗೊತ್ತಾ? ಅಜಯ್ ದೇವಗನ್ ಇದೇ ಕಾರಣಕ್ಕೆ ಕಪಾಳಕ್ಕೆ ಹೊಡೆದಿದ್ರಂತೆ.

Kajol Devgan: ನಿಮಗೆಲ್ಲರಿಗೂ ತಿಳಿದಿರು ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಹೀರೋ ಹಾಗೂ ಹೀರೋಯಿನ್ ಜೋಡಿಗಳು ಮಿಂಚಿ ಮೆರೆದಾಡಿವೆ. ಅಂತಹ ಸ್ಟಾರ್ ಜೋಡಿಗಳಲ್ಲಿ ಶಾರುಖ್ ಖಾನ್ ಹಾಗೂ ಕಾಜಲ್ ಜೋಡಿ ಕೂಡ ಒಂದಾಗಿದೆ. ಇವರಿಬ್ಬರ ಜೋಡಿಯಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಬಾಲಿವುಡ್ ಚಿತ್ರರಂಗದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿವೆ. ಆದರೆ ಇವರ ಜೀವನದಲ್ಲಿ ನಡೆದಿರೋ ಅದೊಂದು ಘಟನೆ ಮಾತ್ರ ಯಾವತ್ತೂ ಕೂಡ ಮರೆಯೋ ಹಾಗಿಲ್ಲ. ಈ ಕಾರಣಕ್ಕಾಗಿ ಅವರು ಕಣ್ಣೀರು ಹಾಕಿದ್ರು ಹಾಗೂ ಅಜಯ್ ದೇವಗನ್ ಕೂಡ ಕಪಾಳ ಮೋಕ್ಷ ಮಾಡಿದ್ರಂತೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸಿನಿಮಾ ತೆರೆಯ ಮೇಲೆ ಯಾವ ರೀತಿಯಲ್ಲಿ ಕಾಜಲ್ ಹಾಗೂ ಶಾರುಖ್ ಖಾನ್ ರವರ ಜೋಡಿ ಸೂಪರ್ ಹಿಟ್ ಆಗಿತ್ತೋ ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಅಜಯ್ ದೇವಗನ್ ಹಾಗೂ ಕಾಜಲ್ ಅವರ ಜೋಡಿ ಎಲ್ಲರ ಮನಸ್ಸನ್ನು ಗೆದ್ದಿತ್ತು. ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಸಂದರ್ಭದಲ್ಲಿ ಕಾಜಲ್ ಅಜಯ್ ದೇವ್ಗನ್ ಅವರನ್ನ ಮದುವೆಯಾಗಿದ್ದರು. ಇನ್ನು ಆ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನ ಶಾರುಖ್ ಕಾಜಲ್ ನೀಡಿತ್ತು. ಇನ್ನು ಈಗ ನಾವು ಹೇಳಲು ಹೊರಟಿರೋದು ಕಭಿ ಖುಷಿ ಕಭಿ ಗಮ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಡೆದಿರುವಂತಹ ಘಟನೆಯ ಬಗ್ಗೆ.

ಈ ಸಂದರ್ಭದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಾಜಲ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂಬುದಾಗಿ ತಿಳಿದು ಅಜಯ್ ದೇವಗನ್ ಚಿತ್ರೀಕರಣ ನಡೆಯುತ್ತಿರುವಂತಹ ಸ್ಥಳಕ್ಕೆ ಓಡೋಡಿ ಬಂದಿದ್ರು. ಪತ್ನಿಯ ಪರಿಸ್ಥಿತಿಯನ್ನು ನೋಡಿದಂತಹ ಅಜಯ್ ದೇವಗನ್ ಗಾಬರಿಯಾಗಿದ್ದರು. ಈ ಸಂದರ್ಭದಲ್ಲಿ ಕಾಜಲ್ ಸರಿಯಾದ ನಂತರ ಅವರ ಕಪಾಳಕ್ಕೆ ಅಜಯ್ ದೇವಗನ್ ಬಾರಿಸಿದ್ದರೂ ಎನ್ನುವಂತಹ ಮಾಹಿತಿಗಳು ಕೂಡ ವರದಿಯಾಗಿವೆ. ಈ ಹಿಂದೆ ಕಾಜಲ್ ಅವರಿಗೆ ಎರಡು ಬಾರಿ ಗರ್ಭಪಾತ ಆಗಿತ್ತು ಎನ್ನುವಂತಹ ಮಾಹಿತಿ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ಈ ಸಂದರ್ಭದಲ್ಲಿ ತಮ್ಮ ಪತ್ನಿಯ ವಿರುದ್ಧ ಅಜಯ್ ದೇವ್ಗನ್ ಕೋಪಗೊಂಡಿದ್ದರು. ಬಾಲಿವುಡ್ ನಲ್ಲಿ ಈ ಸುದ್ದಿ ಆ ಕಾಲದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು ಆದರೆ ಇಲ್ಲಿನ ಸಿನಿಮಾ ಪ್ರೇಮಿಗಳಿಗೆ ಈ ವಿಚಾರ ತಿಳಿದಿಲ್ಲ.

ಇವತ್ತು ಬಾಲಿವುಡ್ ಚಿತ್ರರಂಗದಲ್ಲಿ ಅಜಯ್ ದೇವಗನ್ ಹಾಗೂ ಕಾಜಲ್ ಇಬ್ರು ಕೂಡ ಮಾದರಿ ದಂಪತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಇಬ್ರು ಕೂಡ ಸಿನಿಮಾ ಜೋಡಿಗಳಿಗಿಂತ ಕಡಿಮೆ ಇಲ್ಲ ಎನ್ನುವಂತೆ ನಿಜ ಜೀವನದಲ್ಲಿ ಕೂಡ ಅನ್ಯೋನ್ಯವಾಗಿ ಬಾಳ್ವೆ ನಡೆಸುತ್ತಿದ್ದಾರೆ. ಇನ್ನು ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದು ಇವತ್ತಿಗೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟ ಹಾಗೂ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Comments are closed.