Home Loan: ಹೋಂ ಲೋನ್ ತಗೊಂಡ್ಕು ಮನೆ ಕಟ್ಬೇಕಾ? ಹಾಗಾದ್ರೆ ಈ ಬ್ಯಾಂಕ್ ಗಳನ್ನ ಆಯ್ಕೆ ಮಾಡ್ಕೊಳ್ಳಿ; ಕಡಿಮೆ ಬಡ್ಡಿಗೆ ಸಿಗತ್ತೆ ಲೋನ್!

Home Loan: ಪ್ರತಿಯೊಬ್ಬರಿಗೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ತಮ್ಮ ಸ್ವಂತವಾದ ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಸ್ವಂತ ಹಣದಲ್ಲಿ ಮನೆಯನ್ನು ಕಟ್ಟುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟಕರವಾದ ಕೆಲಸ. ಈ ಕಾರಣಕ್ಕಾಗಿಯೇ ಬ್ಯಾಂಕುಗಳು ಮನೆಯನು ಕಟ್ಟುವವರಿಗೆ ಹೋಂ ಲೋನ್ ನೀಡುತ್ತವೆ. ಇನ್ನು ಹೋಂ ಲೋನ್ ಮೇಲೆ ಇರುವಂತಹ ಬಡ್ಡಿದರ ಕೂಡ ಸಾಕಷ್ಟು ದುಬಾರಿಯಾಗಿರುತ್ತದೆ ಹೀಗಾಗಿ ಯಾವ ಬ್ಯಾಂಕಿನಲ್ಲಿ ಸಾಲವನ್ನು ತೆಗೆದುಕೊಳ್ಳಬೇಕು ಎನ್ನುವ ನಿರ್ಧಾರವನ್ನು ಪ್ರತಿಯೊಬ್ಬರು ಮಾಡಿಕೊಳ್ಳುವುದು ಕಷ್ಟವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಇವತ್ತಿನ ಈ ಲೇಖನದ ಮೂಲಕ ನಿಮಗೆ ಯಾವ ಬ್ಯಾಂಕಿನಲ್ಲಿ ಹೋಂ ಲೋನ್ ಪಡೆದುಕೊಂಡರೆ ಎಷ್ಟು ಬಡ್ಡಿ ಹಾಗೂ ಏನೆಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳ.

Bank Of Baroda

ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡುವಂತಹ ಬ್ಯಾಂಕುಗಳಲ್ಲಿ ಬ್ಯಾಂಕ್ ಆಫ್ ಬರೋಡ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಹೋಂ ಲೋನ್ ಪಡೆದುಕೊಳ್ಳಬೇಕು ಎನ್ನುವವರಿಗೆ ಬ್ಯಾಂಕ್ ಆಫ್ ಬರೋಡ ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಇನ್ನು ಹೋಂ ಲೋನ್ ಮೇಲೆ ಬ್ಯಾಂಕ್ ಆಫ್ ಬರೋಡ ವಾರ್ಷಿಕವಾಗಿ 8.4 ರಿಂದ 10.6% ಬಡ್ಡಿ ದರವನ್ನು ವಿಧಿಸುತ್ತದೆ. ಬೇರೆ ಬ್ಯಾಂಕುಗಳ ಹೋಲಿಕೆಯಲ್ಲಿ ಇದು ಒಂದು ಸ್ಪರ್ಧಾತ್ಮಕ ಬಡ್ಡಿ ದರವಾಗಿದೆ.

ಬ್ಯಾಂಕ್ ಆಫ್ ಇಂಡಿಯಾ

ಒಂದು ವೇಳೆ ನೀವು ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ರೆ ಹೊಸ ಮನೆಯನ್ನು ಕಟ್ಟುವಂತಹ ಯೋಜನೆಯಲ್ಲಿ ಇದ್ದರೆ ಎಲ್ಲಿ ಕೂಡ ನೀವು ಒಂದೊಳ್ಳೆ ಬಡ್ಡಿ ದರಕ್ಕೆ ಹೋಂ ಲೋನ್ ಪಡೆದುಕೊಳ್ಳಬಹುದು. ಸಾಲವನ್ನು ಪಡೆದುಕೊಂಡಲ್ಲಿ 30 ವರ್ಷಗಳವರೆಗೆ ಮರುಪಾವತಿ ಮಾಡುವಂತಹ ಸಮಯಾವಕಾಶವನ್ನು ಕೂಡ ಈ ಬ್ಯಾಂಕಿನಲ್ಲಿ ನೀಡಲಾಗುತ್ತದೆ. ಇಲ್ಲಿನ ಹೋಂ ಲೋನ್ ಬಡ್ಡಿದರ 8.30 ಪ್ರತಿಶತ ವಾರ್ಷಿಕ ಬಡ್ಡಿದರದಿಂದ ಪ್ರಾರಂಭವಾಗುತ್ತದೆ. ಒಂದು ವೇಳೆ ನೀವು ಇಲ್ಲಿ ಲೋನ್ ಪಡೆದುಕೊಳ್ಳುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಇಂದೇ ಬ್ರಾಂಚಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದಾಗಿ ಕಾಣಿಸಿಕೊಳ್ಳುತ್ತದೆ. ಗೃಹ ಸಾಲಗಳನ್ನು ನೀಡುವಲ್ಲಿ ಅತ್ಯುತ್ತಮ ಸ್ಪರ್ಧಾತ್ಮಕ ಬಡ್ಡಿ ದರವನ್ನು ಹೊಂದಿರುವುದರಿಂದಾಗಿಯೇ ಈ ಕ್ಷೇತ್ರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉತ್ತಮ ಗ್ರಾಹಕರನ್ನು ಹೊಂದಿದೆ. 30 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 80 ಲಕ್ಷ ರೂಪಾಯಿಗಳವರೆಗೆ ಕೂಡ ಹೋಂ ಲೋನ್ ನೀಡುತ್ತದೆ. 15 ವರ್ಷಗಳವರೆಗೆ ಮರುಪಾವತಿ ಮಾಡುವುದಕ್ಕೆ ಸಮಯಾವಕಾಶವನ್ನು ಕೂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡುತ್ತದೆ. ಹೋಂ ಲೋನ್ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 8.45 ರಿಂದ 10.5% ಬಡ್ಡಿ ದರವನ್ನು ವಿಧಿಸುತ್ತದೆ.

ಹೆಚ್ ಡಿ ಎಫ್ ಸಿ ಬ್ಯಾಂಕ್

ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಂತ ದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಎಚ್ ಡಿ ಎಫ್ ಸಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಈ ಬ್ಯಾಂಕಿನಲ್ಲಿ ಹೋಂ ಲೋನ್ ಪಡೆದಂತಹ ವ್ಯಕ್ತಿಗಳು ಹೆಚ್ಚೆಂದರೆ 30 ವರ್ಷಗಳ ಸಮಯವನ್ನು ಹಣವನ್ನು ಮರುಪಾವತಿ ಮಾಡುವುದಕ್ಕೆ ಪಡೆದುಕೊಳ್ಳಬಹುದಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಪ್ರಮಾಣೀಕೃತ ಹೋಂ ಲೋನ್ ಬಡ್ಡಿದರ 8.9 ರಿಂದ 9.6 ಪ್ರತಿಶತ ಆಗಿರುತ್ತದೆ. ವಿಶೇಷದ 8.55 ರಿಂದ 9.10 ಪ್ರತಿಶತ ಆಗಿರುತ್ತದೆ.

ಇನ್ನು ಹೋಂ ಲೋನ್ ಮಾಡುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಹಾಗೂ ಅದರ ಮೇಲೆ ಆಧಾರವಾಗುವ ನಿಮ್ಮ ಸಾಲದ ಮರುಪಾವತಿ ಹಾಗೂ ಇನ್ನಿತರ ಮಾಹಿತಿಗಳು ನಿರ್ಧಾರಿತವಾಗಿರುತ್ತದೆ. ಆನ್ಲೈನ್ ಹಾಗೂ ಆಫ್ಲೈನ್ 2 ಮಾದರಿಗಳಲ್ಲಿ ಕೂಡ ಹೋಂ ಲೋನ್ ಸಲ್ಲಿಸುವುದಕ್ಕೆ ಅವಕಾಶವನ್ನು ನೀಡಲಾಗುತ್ತದೆ. ಇನ್ನು ಹೋಂ ಲೋನ್ ನಲ್ಲಿ ಸರಿಯಾದ ಸಂದರ್ಭಕ್ಕೆ ಸಾಲವನ್ನು ಕಟ್ಟುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.

Comments are closed.