Raitha Siri Scheme: ಒಂದು ಎಕರೆ ಜಮೀನ್ ಇದ್ರೆ ರೈತರಿಗೆ ಸರ್ಕಾರ ಕೊಡತ್ತೆ 10 ಸಾವಿರ ರೂ. ನೇರವಾಗಿ ನಿಮ್ಮ ಖಾತೆಗೆ ಜಮಾ!

Raitha Siri Scheme: ನಮ್ಮ ಭಾರತ ದೇಶ ಅನಾದಿಕಾಲದಿಂದಲೂ ಕೂಡ ಕೃಷಿಯನ್ನು ಅತ್ಯಂತ ಪ್ರಮುಖ ಜೀವನದ ಆಧಾರ ಸ್ಥಂಭವನ್ನಾಗಿ ಅವಲಂಬಿಸಿಕೊಂಡು ಬಂದಿರುವಂತಹ ದೇಶ. ಕೆಲವು ಸಮಯ ಪ್ರತಿಯೊಬ್ಬ ಯುವಕರು ಕೂಡ ಕೃಷಿಯಿಂದ ಹಿಮ್ಮುಖವಾಗಿ ಬೇರೆ ಕೆಲಸವನ್ನು ಮಾಡುವುದಕ್ಕೆ ಪ್ರಾರಂಭ ಮಾಡಿದ್ರು ಆದರೆ ಈಗ ಮತ್ತೆ ಸರ್ಕಾರಗಳು ಪ್ರಾರಂಭ ಮಾಡಿರುವಂತಹ ಕೆಲವೊಂದು ಯೋಜನೆಗಳ ಕಾರಣದಿಂದಾಗಿ ಮತ್ತೆ ಕೃಷಿಯ ಕಡೆಗೆ ತಮ್ಮ ಒಲವನ್ನ ತೋರಿಸುತ್ತಿದ್ದಾರೆ. ಇನ್ನು ಅಕಾಲಿಕವಾಗಿ ಬರಗಾಲ ಬಂದಿರುವುದರ ಹಿನ್ನೆಲೆಯಲ್ಲಿ ಸರ್ಕಾರ ಬೆಳೆ ಪರಿಹಾರ ನೀಡುತ್ತಿರುವುದು ಕೂಡ ರೈತರಿಗೆ ಕೃಷಿಯಲ್ಲಿ ಒಲವು ಇನ್ನಷ್ಟು ಹೆಚ್ಚಾಗುವುದಕ್ಕೆ ಒಂದು ಪ್ರಮುಖ ಕಾರಣವಾಗಿದೆ.

ರೈತ ಸಿರಿ ಯೋಜನೆ (Raitha Siri Scheme)

ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ಇನ್ನಷ್ಟು ಹೆಚ್ಚಾಗಿ ವಿಸ್ತರಿಸಲು ಹಾಗೂ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಕಾರಣಕ್ಕಾಗಿ ರೈತ ಸಿರಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ಪ್ರಕಾರ ಕೃಷಿ ಸಂಬಂಧಿತ ಉಪಕರಣಗಳನ್ನು ಖರೀದಿಸುವುದಕ್ಕಾಗಿ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವುದು ಸೇರಿದಂತೆ ಸಾಕಷ್ಟು ಸಹಾಯಗಳನ್ನು ರೈತರಿಗೆ ಮಾಡುವುದಕ್ಕಾಗಿ ಸರ್ಕಾರ ಸಿದ್ಧವಾಗಿದೆ. ಕೃಷಿಗೆ ಬೇಕಾಗಿರುವಂತಹ ಬೀಜ ಹಾಗೂ ಗೊಬ್ಬರಗಳನ್ನು ರೈತರಿಗೆ ಖರೀದಿಸುವ ಸಂದರ್ಭದಲ್ಲಿ ಸರ್ಕಾರ ಅವರನ್ನು ಖಾತೆಗೆ ನೇರವಾಗಿ 10,000 ಹಣವನ್ನು ಈ ಯೋಜನೆಯ ಮೂಲಕ ಹಾಕಲಿದೆ. ಎರಡು ಹೆಕ್ಟೇರ್ ಗಳಷ್ಟು ಭೂಮಿಯನ್ನು ಹೊಂದಿರುವಂತಹ ರೈತರಿಗೆ ಈ ಯೋಜನೆಯ ಮೂಲಕ ಆರ್ಥಿಕ ಸಹಾಯವನ್ನು ಮಾಡುವಂತಹ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಕೃಷಿ ಇಲಾಖೆ ಈ ಮೂಲಕ ಸಿರಿಧಾನ್ಯಗಳ ಬಗ್ಗೆ ರೈತರಲ್ಲಿ ಅರಿವು ಹಾಗೂ ಅವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂದು ಅದರ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದೆ.

ಇಂತಹ ತರಬೇತಿಗಳಲ್ಲಿ ಕೇವಲ ಕೃಷಿಯ ಬಗ್ಗೆ ಸಾಮಾನ್ಯ ಜ್ಞಾನ ಮಾತ್ರವಲ್ಲದೆ ಮಳೆ ಬೀಳದೆ ಇರುವ ಸಂದರ್ಭದಲ್ಲಿ ಒಣಭೂಮಿಯಲ್ಲಿ ಯಾವ ರೀತಿಯಲ್ಲಿ ಬೆಳೆಯನ್ನು ಬೆಳೆಯಬಹುದು ಎನ್ನುವುದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.

ಹಣ ವರ್ಗಾವಣೆ ಯಾವ ರೀತಿಯಲ್ಲಿ

ಈ ಯೋಜನೆ ಅಡಿಯಲ್ಲಿ ಹಣವನ್ನು ಯಾವ ರೀತಿಯಲ್ಲಿ ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನು ಕೂಡ ತಿಳಿಸಲಾಗಿದೆ. ಮೊದಲನೇ ಕಂತಿನಲ್ಲಿ ರೈತರ ಖಾತೆಗೆ ಆರು ಸಾವಿರ ರೂಪಾಯಿಗಳ ವರ್ಗಾವಣೆ ಮಾಡಿದರೆ ಎರಡನೇ ಕಂತಿನಲ್ಲಿ 4000ಗಳ ವರ್ಗಾವಣೆ ಮಾಡುವ ಮೂಲಕ ಒಟ್ಟಾರೆಯಾಗಿ ಈ ಯೋಜನೆ ಅಡಿಯಲ್ಲಿ 10,000 ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಈ ಯೋಜನೆಗೆ ಬೇಕಾಗಿರುವಂತಹ ಪ್ರಮುಖ ದಾಖಲೆಗಳು

  1. ಪ್ರಮುಖವಾಗಿ ನಿಮ್ಮ ಬಳಿ ಎಷ್ಟು ಕೃಷಿ ಜಮೀನು ಇದೆ ಎನ್ನುವಂತಹ ಭೂಮಿಯ ದಾಖಲೆ ಪತ್ರಗಳು ಬೇಕಾಗಿರುತ್ತದೆ.
  2. ನಂತರ ಪ್ರಮುಖವಾಗಿ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬೇಕಾಗಿರುತ್ತದೆ.
  3. ಅಡ್ರೆಸ್ ಸರ್ಟಿಫಿಕೇಟ್ ಹಾಗೂ ಇನ್ಕಮ್ ಸರ್ಟಿಫಿಕೇಟ್ ಬೇಕಾಗಿರುತ್ತದೆ.
  4. ನಿಮ್ಮ ಬ್ಯಾಂಕ್ ಡೀಟೇಲ್ಸ್ ಹಣವನ್ನು ವರ್ಗಾವಣೆ ಮಾಡುವುದಕ್ಕೆ ಬೇಕಾಗಿರುತ್ತದೆ ಹಾಗೂ ಅದರ ಜೊತೆಗೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗಿರುತ್ತದೆ.

Comments are closed.