SBI Job: ಹಳ್ಳಿಆಗಿದ್ರೂ ಸರಿ, ಮನೆಯಲ್ಲೇ ಕೂತು sbi ಜಾಬ್; ತಿಂಗಳಿಗೆ 17,000ರೂ. ಸಂಬಳ, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!

SBI Job: ತಮ್ಮ ಜೀವನದ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಪ್ರತಿಯೊಬ್ಬರೂ ಕೂಡ ಕೆಲಸದ ಅಗತ್ಯತೆಯನ್ನು ಹೊಂದಿರುತ್ತಾರೆ. ಅಂತಹ ಕೆಲಸದ ಅಗತ್ಯತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಇವತ್ತಿನ ಲೇಖನದಲ್ಲಿ ನಾವು ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ನೀಡಲು ಹೊರಟಿದ್ದೇವೆ. ಅದರಲ್ಲಿ ವಿಶೇಷವಾಗಿ ಕಷ್ಟಪಟ್ಟು ಓದಿ ಒಂದೊಳ್ಳೆ ಕೆಲಸಕ್ಕಾಗಿ ಕಾಯುತ್ತಿರುವಂತಹ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶ.

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಆಹ್ವಾನವನ್ನು ನೀಡಲಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹಾಗೂ ದೊಡ್ಡ ಮಟ್ಟದ ವ್ಯವಹಾರವನ್ನು ನಡೆಸುವಂತಹ ಸರ್ಕಾರಿ ಬ್ಯಾಂಕ್ ಎನ್ನುವಂತಹ ಹೆಗ್ಗಳಿಕೆಯನ್ನು ಪಡೆದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಾಗ ಹೊಸ ಉದ್ಯೋಗಿಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಆಹ್ವಾನವನ್ನು ನೀಡುತ್ತದೆ. ಈ ಬಾರಿ ಕೂಡ ಇದೇ ರೀತಿಯ ಆಹ್ವಾನವನ್ನು ನೀಡಿದ್ದು ಅರ್ಹರಾಗಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ನೀಡಬಹುದಾಗಿದೆ.

ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಹಾಗೂ ಉಳಿದ ಮಾಹಿತಿಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೂಥ್ ಫಾರ್ ಇಂಡಿಯಾ ಫೆಲೋಶಿಪ್ ಹುದ್ದೆಗಳ ಬೃಹತ್ ನೇಮಕಾತಿಗೆ ಸೂಚನೆಯನ್ನು ನೀಡಲಾಗಿದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋ ಅರ್ಹತೆಯನ್ನು ಗಮನಿಸುವುದಾದರೆ 21ರಿಂದ ಗರಿಷ್ಠ 32 ವರ್ಷಗಳ ನಡುವೆ ವಯಸ್ಸು ಇರಬೇಕು ಎಂಬುದಾಗಿ ತಿಳಿಸಲಾಗಿದೆ. ಇದರಲ್ಲಿ ಎಸ್ಸಿ ಎಸ್ಟಿ ಪಂಗಡಗಳ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆಯನ್ನು ಮೂರರಿಂದ ಐದು ವರ್ಷಗಳಿಗೆ ಇರಿಸಲಾಗಿದೆ ಹಾಗೂ ಒಬಿಸಿ ಅವರಿಗೆ ಮೂರು ವರ್ಷಗಳ ವಯೋಮಾನ್ಯತೆ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ಯಾವುದೇ ಹುದ್ದೆಯನ್ನು ಪಡೆದುಕೊಂಡಿದ್ದರು ಸಾಕು ತಿಂಗಳಿಗೆ 17000ಗಳ ಸಂಬಳವನ್ನು ಪಡೆದುಕೊಳ್ಳಬಹುದಾಗಿದೆ. ಮೇ 31 ರಿಂದ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯ ಪ್ರಾರಂಭವಾಗಿದೆ.

ಈ ಕೆಲಸಕ್ಕಾಗಿ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಹೋಗುವ ಮೂಲಕ ಅರ್ಜಿ ಸಲ್ಲಿಸಿ ನಂತರ ಲಿಖಿತ ಪರೀಕ್ಷೆಯ ನಂತರ ಶಾರ್ಟ್ ಲಿಸ್ಟ್ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. SBI ಯೂಥ್ ಫಾರ್ ಫೆಲೋಶಿಪ್ ಕಾರ್ಯಕ್ರಮದ ಮೂಲಕ ಈ ರೀತಿಯ ಉದ್ಯೋಗ ನೀಡುವಿಕೆಯ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಸಬಲೀಕರಣ, ಸಾಂಪ್ರದಾಯಿಕ ಕರಕುಶಲ ಹಾಗೂ ಉದ್ಯೋಗ ಸೇರಿದಂತೆ ಒಟ್ಟಾರೆ 12 ಕ್ಷೇತ್ರಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. https://youthforindia.org/register ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಬೇರೆ ಮಾಹಿತಿಗಳನ್ನು ಹಾಗೂ ಅಗತ್ಯ ಇರುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

Comments are closed.