Relationship: ಒಂದೇ ಒಂದು ಬಟ್ಟೆಯನ್ನೂ ಹಾಕಿಕೊಳ್ಳದೇ ಈ ಜೋಡಿ ಜಿಮ್ ನಲ್ಲಿ ವರ್ಕೌಟ್ ಮಾಡ್ತಾರೆ; ಯಾಕೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

Relationship: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುವಂತಹ ಕೆಲವೊಂದು ವಿಡಿಯೋಗಳು ಅವರನ್ನ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳನ್ನಾಗಿ ಮಾಡಿಬಿಡುತ್ತದೆ. ಆದರೆ ಇವತ್ತಿನ ಲೇಕ್ಷಣದಲ್ಲಿ ನಾವು ಮಾತನಾಡೋಕೆ ಹೊರಟಿರೋದು ಒಂದು ವಿಚಿತ್ರ ವಿಡಿಯೋದ ಬಗ್ಗೆ. ಇಂದಿನ ಕಾಲದಲ್ಲಿ ಜನ ವೀವ್ಸ್ ಹಾಗೂ ಲೈಕ್ಸ್ ಗಾಗಿ ಯಾವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಅನ್ನೋದನ್ನ ನೀವೆಲ್ಲರೂ ನೋಡಿರುತ್ತೀರಿ. ಆದ್ರೆ ಇಲ್ಲಿ ಇರುವಂತಹ ಈ ಜೋಡಿಗಳು ಈಗ ಪೋಸ್ಟ್ ಮಾಡಿರುವಂತಹ ವಿಡಿಯೋ ಅಥವಾ ಕಂಟೆಂಟ್ ನೋಡಿದರೆ ನೀವು ಕೂಡ ಸ್ವಲ್ಪ ಮಟ್ಟಿಗೆ ಗರಮ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಬನ್ನಿ ಏನಾಗಿದೆ ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನೀವು ಜಿಮ್ ವರ್ಕೌಟ್ ವಿಡಿಯೋಗಳನ್ನು ನೋಡಬಹುದಾಗಿದೆ. ಕೆಲವು ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ಗಳು ಸೋಶಿಯಲ್ ಮೀಡಿಯಾದಲ್ಲಿ ಜಿಮ್ ವರ್ಕೌಟ್ ವಿಡಿಯೋಗಳನ್ನು ಇಂದಿನ ಯುವಜನತೆ ಅದರಿಂದ ಸ್ಪೂರ್ತಿ ತೆಗೆದುಕೊಂಡು ತಮ್ಮ ದೈಹಿಕ ಆರೋಗ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಕಾಳಜಿ ತೆಗೆದುಕೊಳ್ಳಲಿ ಎಂಬುದಾಗಿ ವಿಡಿಯೋ ಪೋಸ್ಟ್ ಮಾಡುತ್ತಾರೆ. ಆದರೆ ಕೆಲವು ಸೋಶಿಯಲ್ ಮೀಡಿಯಾ ಬಳಕೆದಾರರು ತಾವು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳುವುದಕ್ಕಾಗಿ ಬೇಕಾಬಿಟ್ಟಿಯಾಗಿ ವಿಡಿಯೋ ಪೋಸ್ಟ್ ಮಾಡುತ್ತಾರೆ. ಆದರೆ ಇವತ್ತಿನ ಈ ಲೇಖನದಲ್ಲಿ ನಾವು ವೈರಲ್ ಆಗಿರುವಂತಹ ವಿಡಿಯೋದ ಬಗ್ಗೆ ಮಾತನಾಡಲು ಹೊರಟಿರೋದು ಬ್ರೆಜಿಲ್ ದೇಶದ ವಿಡಿಯೋ ಬಗ್ಗೆ. ಬ್ರೆಜಿಲ್ ನ ಸಾವೋಪೋಲಾದ ಮಾಂಟೋವಾನಿ ಹಾಗೂ ವ್ಯಾಗನರ್ ಒಪೆರಾ ದಂಪತಿಗಳು ಪೋಸ್ಟ್ ಮಾಡಿರುವಂತಹ ವಿಡಿಯೋ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಅಷ್ಟಕ್ಕೂ ಜಿಮ್ ವರ್ಕ್ ಔಟ್ ವಿಡಿಯೋ ತಾನೇ ಅದರಲ್ಲಿ ಅಷ್ಟೊಂದು ಹೈಪ್ ಮಾಡುವ ರೀತಿಯಲ್ಲಿ ಏನಿದು ಎಂಬುದಾಗಿ ನೀವು ಕೇಳಬಹುದು. ಸಾಮಾನ್ಯವಾಗಿ ಜಿಮ್ ವರ್ಕೌಟ್ ಮಾಡಿದ್ರೆ ಯಾರು ಕೂಡ ಏನು ಹೇಳುವುದಿಲ್ಲ ಆದರೆ ಈ ದಂಪತಿಗಳು ಇಬ್ಬರೂ ಕೂಡ ಬೆತ್ತಲಾಗಿ ಜಿಮ್ ವರ್ಕ್ ಔಟ್ ಮಾಡಿದ್ದಾರೆ. ಕೇವಲ ವರ್ಕೌಟ್ ಮಾಡಿರೋದು ಮಾತ್ರವಲ್ಲದೆ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಪ್ಲೋಡ್ ಮಾಡಿದ್ದಾರೆ. ಅವರು ಹೇಳಿರೋ ಪ್ರಕಾರ ಇದು ಹೆಚ್ಚಾಗಿ ಕ್ಯಾಲೋರಿ ಬರ್ನ್ ಮಾಡುವುದಕ್ಕೆ ಸಹಾಯವಾಗುವುದು ಮಾತ್ರವಲ್ಲದೆ ಪರಸ್ಪರ ದಂಪತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಕೂಡ ಹೆಚ್ಚು ಸಹಾಯಕವಾಗುತ್ತದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಇದನ್ನ ನೋಡಿರುವಂತಹ ನೆಟ್ಟಿಗರು ವಿಡಿಯೋದ ಕಾಮೆಂಟ್ ಬಾಕ್ಸ್ ನಲ್ಲಿ ತಮಗೆ ಮನಸ್ಸಿಗೆ ಬಂದಹಾಗೆ ಟೀಕೆ ಮಾಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ ಆದರೆ ಇದಕ್ಕೆ ಕೂಡ ಆ ದಂಪತಿಗಳು ಯಾವುದೇ ರೀತಿಯಲ್ಲಿ ಟೀಕೆ ಮಾಡಿದರು ಕೂಡ ನಾವು ಕೇರ್ ಮಾಡೋದಿಲ್ಲ ಅನ್ನೋ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 2011ರಲ್ಲಿ ಮದುವೆ ಆಗಿರುವಂತಹ ಈ ದಂಪತಿಗಳು ಈ ರೀತಿಯ ವಿಡಿಯೋ ಮಾಡ್ತಿರೋದು ಕೆಲವರಿಗೆ ಇಷ್ಟ ಆಗ್ತಿದ್ರೆ ಸಾಕಷ್ಟು ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದನ್ನೆಲ್ಲ ಪೋಸ್ಟ್ ಮಾಡುವುದಕ್ಕೆ ನಿಮಗೆ ನಾಚಿಕೆ ಆಗುವುದಿಲ್ಲ ಅನ್ನೋ ರೀತಿಯಲ್ಲಿ ಕಾಮೆಂಟ್ ಮಾಡುವ ಹಾಗೆ ಮಾಡ್ತಿದೆ.

Comments are closed.