Astrology: 12 ರಾಶಿಗಳ ಮೇಲೆ ಸೂರ್ಯನ ಪ್ರಭಾವ ಇದ್ರೂ ಅದೃಷ್ಟ ಪಡೆದುಕೊಳ್ಳೋದು ಮಾತ್ರ ನಿಮ್ ರಾಶಿ. ಹೌದಾ ಅಲ್ವಾ ಚೆಕ್ ಮಾಡಿ!

Astrology: ಗ್ರಹಗಳ ರಾಜ ಆಗಿರುವಂತಹ ಸೂರ್ಯ ಮಾರ್ಚ್ 31ರ ಬೆಳಿಗ್ಗೆ ರೇವತಿ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಈ ನಕ್ಷತ್ರದಲ್ಲಿ ಏಪ್ರಿಲ್ 13ರವರೆಗೆ ಇರಲಿದ್ದಾರೆ. ಈ ಸಂದರ್ಭದಲ್ಲಿ ಇದೇ ಕಾರಣದಿಂದಾಗಿ ಕೆಲವು ರಾಶಿಯವರಲ್ಲಿ ಸೂರ್ಯನ ಈ ಚಲನೆ ಎನ್ನುವುದು ಅದೃಷ್ಟವನ್ನು ತರಲಿದ್ದು ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ(Taurus)

ಹಣಕಾಸಿನ ವಿಚಾರದಲ್ಲಿ ವೃಷಭ ರಾಶಿಯವರಿಗೆ ಸಾಕಷ್ಟು ಲಾಭದಾಯಕ ಬೆಳವಣಿಗೆಗಳು ಈ ಸಂದರ್ಭದಲ್ಲಿ ಕಂಡು ಬರಲಿದೆ. ಚಿಕ್ಕ ವಯಸ್ಸಿನಿಂದಲೂ ವಿದೇಶದಲ್ಲಿ ಕೆಲಸ ಮಾಡಬೇಕು ಎಂದು ಆಸೆಯನ್ನು ಹೊಂದಿರುವಂತಹ ವೃಷಭ ರಾಶಿಯವರಿಗೆ ವಿದೇಶದಲ್ಲಿ ಕೆಲಸ ಸಿಗಲಿದೆ. ದೊಡ್ಡ ಮಟ್ಟದ ವ್ಯಾಪಾರ ಮಾಡುತ್ತಿರುವವರಿಗೆ ಕೈ ತುಂಬ ಲಾಭ ಸಿಗುವಂತಹ ಹೊಸ ಡೀಲ್ ಸಿಗಲಿದೆ. ವೈವಾಹಿಕ ಜೀವನದಲ್ಲಿ ಕೂಡ ಸಂಗಾತಿಯಿಂದ ಸಂತೋಷ ಸಿಗಲಿದೆ. ಒಟ್ಟಾರೆಯಾಗಿ ಬೇರೆ ಬೇರೆ ರೂಪದಲ್ಲಿ ವೃಷಭ ರಾಶಿಯವರು ಸೂರ್ಯನ ಈ ಚಲನೆಯಿಂದಾಗಿ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಮಿಥುನ ರಾಶಿ(Gemini)

ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಕೂಡ ಮಿಥುನ ರಾಶಿಯವರಿಗೆ ತಮ್ಮ ಆತ್ಮವಿಶ್ವಾಸ ಜೊತೆ ನೀಡಲಿದೆ ಹಾಗೂ ಅದೃಷ್ಟ ಕೂಡ ಅವರ ಜೊತೆ ಇರಲಿದೆ. ವಿದೇಶಕ್ಕೆ ಹೋಗಬೇಕು ಎನ್ನುವಂತಹ ಮಿಥುನ ರಾಶಿಯವರ ಕನಸು ನನಸಾಗಲಿದೆ. ಕೆಲಸದ ವಿಚಾರದಲ್ಲಿ ಮಿಥುನ ರಾಶಿಯವರು ಸಾಕಷ್ಟು ಕಡೆ ಹೋಗಿ ಬರಬೇಕಾಗಿ ಬರುತ್ತದೆ ಆದರೆ ಇವತ್ತು ನಿಮಗೆ ಇದು ಕಷ್ಟ ಆಗಬಹುದು ಆದರೆ ಮುಂದಿನ ಭವಿಷ್ಯದ ದಿನಗಳಲ್ಲಿ ಇದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದೀರಿ. ಸಮಾಜದಲ್ಲಿ ವಿರೋಧಿಗಳ ನಡುವೆ ಕೂಡ ನೀವು ಗೆದ್ದು ಬರಲಿದ್ದೀರಿ. ನೀವು ಮಾಡಿರುವಂತಹ ಉಳಿತಾಯದ ಹಣದಿಂದಾಗಿ ನೀವು ಈ ಸಮಯದಲ್ಲಿ ಕೆಲವೊಂದು ಮಹತ್ತರವಾದ ಕೆಲಸಗಳನ್ನು ಮಾಡಲಿದ್ದೀರಿ.

ಕನ್ಯಾ ರಾಶಿ(Virgo)

ಕನ್ಯಾ ರಾಶಿಯವರಿಗೆ ಸೂರ್ಯನ ಚಲನೆ ಎನ್ನುವುದು ಸಾಕಷ್ಟು ಅದೃಷ್ಟದ ಲಾಭಗಳನ್ನು ಹೊತ್ತು ತರಲಿದೆ ಹಾಗೂ ಜೇಬಿನಲ್ಲಿ ಹಣದ ತೂಕ ಕೂಡ ಇನ್ನಷ್ಟು ಹೆಚ್ಚಾಗಲಿದೆ. ಕೇವಲ ಗಳಿಕೆ ಮಾತ್ರವಲ್ಲ ನಿಮ್ಮ ಉಳಿತಾಯ ಕೂಡ ಈ ಸಂದರ್ಭದಲ್ಲಿ ಹೆಚ್ಚಾಗಲಿದೆ. ಆರೋಗ್ಯ ಕೂಡ ಈ ಸಂದರ್ಭದಲ್ಲಿ ಸುಧಾರಣೆ ಕಂಡು ಬರಲಿದೆ ಮತ್ತು ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ನಡುವೆ ಇರುವಂತಹ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಜೊತೆ ಇರುವಂತಹ ಅದೃಷ್ಟದ ಕಾರಣದಿಂದಾಗಿ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಗೆಲುವನ್ನು ಸಂಪಾದನೆ ಮಾಡಲಿದ್ದೀರಿ. ಯಾವುದೇ ರೀತಿಯ ಹೊಸ ಉದ್ಯಮವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಯೋಜನೆಯನ್ನು ನೀವು ಹಾಕಿಕೊಂಡಿದ್ದರೆ ಸೂರ್ಯನ ಆಶೀರ್ವಾದದಿಂದಾಗಿ ಆರಂಭದಿಂದಲೇ ಅದರಲ್ಲಿ ಲಾಭವನ್ನು ಪಡೆದುಕೊಳ್ಳುವುದು ನಿಶ್ಚಿತ. ನೀವು ತೆಗೆದುಕೊಂಡಂತಹ ನಿರ್ಧಾರಗಳು ಈ ಸಂದರ್ಭದಲ್ಲಿ ನಿಮ್ಮ ಪರವಾಗಿ ಕೆಲಸ ಮಾಡಲಿವೆ.

Comments are closed.