Astrology: ಮೋಸದ ವಿಚಾರಕ್ಕೆ ಬಂದ್ರೆ ಈ ರಾಶಿಯವರು ಎಲ್ಲರಿಗಿಂತ ಮುಂಚೆ ಬರ್ತಾರೆ, ನೀವ್ ಹುಷಾರಾಗಿರಿ ಅಷ್ಟೇ!

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆ ಬೇರೆ ರಾಶಿಯವರ ಗುಣಗಳು ಹಾಗೂ ಅವರು ಜೀವನದಲ್ಲಿ ಮಾಡುವಂತಹ ಕೆಲಸಗಳು ಬೇರೆ ಬೇರೆ ಆಗಿರುತ್ತವೆ. ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು ತಮ್ಮ ಜೀವನದಲ್ಲಿ ಮೋಸವನ್ನೇ ಹೆಚ್ಚಾಗಿ ಮಾಡಿಕೊಂಡು ಬರುವಂತಹ ರಾಶಿ ಅವರ ಬಗ್ಗೆ. ದ್ವಾದಶ ರಾಶಿಗಳಲ್ಲಿ ಈ ಕೆಲವು ರಾಶಿಗಳು ಮೋಸದ ವಿಚಾರಕ್ಕೆ ಬಂದರೆ ಬೇರೆಯವರಿಗಿಂತ ಮುಂದೆ ನಿಲ್ತಾರೆ.

ಮಿಥುನ ರಾಶಿ(Gemini)

ಮಿಥುನ ರಾಶಿಯವರು ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸುವಂತಹ ಯೋಚನೆಯನ್ನು ಕೂಡ ಮಾಡುತ್ತಾರೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮುಗಿಸುವುದಕ್ಕೆ ಹೋಗೋದಿಲ್ಲ. ಮಿಥುನ ರಾಶಿಯವರನ್ನು ನಂಬಿಕೊಂಡು ಸಾಕಷ್ಟು ಜನರು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆ ನಂಬಿಕೆಯನ್ನು ಅವರು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟವಾಗಿರುತ್ತದೆ ಹೀಗಾಗಿ ಅವರಿಂದ ಮೋಸ ಕೂಡ ಹೋಗ್ತಾರೆ. ತಾವು ಕೆಲಸ ಮಾಡುವಂತಹ ಸ್ಥಳದಲ್ಲಿ ತಮ್ಮ ಕೆಲಸವನ್ನು ಪೂರ್ತಿಯಾಗಿ ಮಾಡುವುದಕ್ಕೆ ಬೇರೆಯವರ ಸಹಾಯವನ್ನು ಮಿಥುನ ರಾಶಿ ಅವರು ಪಡೆದುಕೊಳ್ಳುತ್ತಾರೆ.

ಸಿಂಹ ರಾಶಿ(Leo)

ಸಿಂಹ ರಾಶಿಯವರು ಆದಾಯವನ್ನು ನಿರೀಕ್ಷೆಗಿಂತ ಹೆಚ್ಚಾಗಿ ಪಡೆದುಕೊಳ್ಳುತ್ತಾರೆ. ತಾವು ಯೋಜನೆ ಹಾಕಿದ ರೀತಿಯಲ್ಲೇ ಕಾರ್ಯರೂಪವನ್ನು ಜಾರಿಗೆ ತರುತ್ತಾರೆ. ನಿರೀಕ್ಷಿತ ರೀತಿಯಲ್ಲಿ ಅವರು ತಾವು ಮಾಡುವಂತಹ ವ್ಯವಹಾರದಲ್ಲಿ ಲಾಭವನ್ನು ಕೂಡ ಪಡೆದುಕೊಳ್ಳುತ್ತಾರೆ. ಆದರೆ ಈ ಸಂದರ್ಭದಲ್ಲಿ ಕೆಲವೊಮ್ಮೆ ಅವರು ಅವರನ್ನು ನಂಬಿರುವಂತಹ ಜನರಿಗೆ ಸುಳ್ಳು ಹೇಳುವುದು ಅಥವಾ ಮೋಸ ಮಾಡುವಂತಹ ಸಾಧ್ಯತೆ ಕೂಡ ಇರುತ್ತದೆ. ಸಿಂಹ ರಾಶಿಯವರ ಜೊತೆಗೆ ಬೇರೆಯವರು ವ್ಯಾಪಾರದಲ್ಲಿ ಸ್ವಲ್ಪ ನೋಡಿಕೊಂಡು ವ್ಯಾಪಾರ ಮಾಡುವುದು ಒಳ್ಳೆಯದು. ಸಂಪೂರ್ಣವಾಗಿ ಮೋಸ ಮಾಡುತ್ತಾರೆ ಅಂತ ಹೇಳೋದಕ್ಕೆ ಆಗದೆ ಇದ್ದರೂ ಕೂಡ ಅವರಿಂದ ನಾವು ಮೋಸವನ್ನು ನಿರೀಕ್ಷೆ ಮಾಡಬಹುದಾಗಿದೆ.

ಕನ್ಯಾ ರಾಶಿ(Virgo)

ಕನ್ಯಾ ರಾಶಿಯವರನ್ನು ನಂಬಿಕೊಂಡು ಸಾಕಷ್ಟು ಜನರು ಉದ್ಯೋಗಕ್ಕೆ ಬರಬಹುದು ಹೀಗಾಗಿ ಕೆಲವೊಮ್ಮೆ ಆ ಜನರ ನಂಬಿಕೆಯನ್ನು ಕನ್ಯಾ ರಾಶಿಯವರು ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ವಾಣಿಜ್ಯ ವಿಚಾರಗಳಲ್ಲಿ ಕನ್ಯಾ ರಾಶಿಯವರ ಆಸಕ್ತಿ ಹೆಚ್ಚಾಗಿರುತ್ತದೆ. ತಮ್ಮ ವ್ಯಾಪಾರ ಹಾಗೂ ಕೆಲಸಗಳಲ್ಲಿ ಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಕನ್ಯಾ ರಾಶಿಯವರು ಏನು ಬೇಕಾದರೂ ಕೂಡ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ. ಇನ್ನು ಕನ್ಯಾರಾಶಿಯವರು ಅವಕಾಶವಾದಿಗಳಾಗಿರುತ್ತಾರೆ.

ವೃಶ್ಚಿಕ ರಾಶಿ(Scorpion)

ತಮ್ಮ ಕೆಲಸದಲ್ಲಿ ವೃಶ್ಚಿಕ ರಾಶಿಯವರು ಅಹಂಕಾರ ಹಾಗೂ ಮೊಂಡುತನವನ್ನು ತೋರಿಸುವುದು ಹೆಚ್ಚಾಗಿರುತ್ತದೆ. ಯಾವುದೇ ಕೆಲಸವನ್ನಾದರೂ ಕೇವಲ ಲಾಭ ಇದ್ರೆ ಮಾತ್ರ ಅವರು ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಲಾಭಕ್ಕಾಗಿ ವೃಶ್ಚಿಕ ರಾಶಿಯವರು ಬೇರೆಯವರಿಗೆ ಮೋಸ ಮಾಡುವಂತಹ ಸಾಧ್ಯತೆ ಕೂಡ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಟ್ಟವಾಗಿರುತ್ತದೆ. ವೃಶ್ಚಿಕ ರಾಶಿಯವರಿಗೆ ಮಾಡುವಂತಹ ಕೆಲಸದಲ್ಲಿ ಲಾಭ ಸಿಗಬೇಕು ಎನ್ನುವಂತಹ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಾರೆ. ಒಟ್ಟಾರೆಯಾಗಿ ಅವರು ತಮ್ಮ ಜೀವನದಲ್ಲಿ ಆರ್ಥಿಕ ಸಬಲತೆಯನ್ನು ಸಾಧಿಸುವ ಕಾರಣಕ್ಕಾಗಿಯೇ ಕೆಲಸ ಮಾಡುತ್ತಾರೆ ಎಂದು ಹೇಳಬಹುದು.

Comments are closed.