RTE: ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ. ನಿಮ್ಮ ಮಕ್ಕಳನ್ನುLKG ಯಿಂದ ಪ್ರೈವೇಟ್ ಸ್ಕೂಲ್ ನಲ್ಲಿ ಓದಿಸಬಹುದು; ಅಪ್ಲೈ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ!

RTE: ಯಾವುದೇ ಸ್ಥಳ ಇರಲಿ ಅಥವಾ ದೇಶ ಇರಲಿ ಅದು ಜಾಗತಿಕವಾಗಿ ಹೆಸರು ಮಾಡಬೇಕು ಅಥವಾ ದೊಡ್ಡ ಮಟ್ಟದ ಬೆಳವಣಿಗೆ ಕಾಣಬೇಕು ಎಂದರೆ ಅಲ್ಲಿನ ಜನರು ಪ್ರಮುಖವಾಗಿರುತ್ತಾರೆ. ಇನ್ನು ಯಾವ ದೇಶದ ಜನರು ವಿದ್ಯಾವಂತರಾಗಿರುತ್ತಾರೋ ಆ ದೇಶ ಯಾವತ್ತೂ ಕೂಡ ಸೋಲುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ಬಡವನಿಂದ ಹಿಡಿದು ಶ್ರೀಮಂತರವರೆಗೂ ಕೂಡ ಶಿಕ್ಷಣ ಎನ್ನುವುದು ಅತ್ಯಂತ ಪ್ರಮುಖವಾದ ಮೂಲಭೂತ ಹಕ್ಕು ಆಗಿರುತ್ತದೆ. ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯಿರಿ ಎಂಬುದಾಗಿ ತಮ್ಮ ಜೀವನದಲ್ಲಿ ಹಾರೈಸಿಕೊಳ್ಳುತ್ತಾರೆ.

ಆದರೆ ನಮ್ಮಲ್ಲಿ ಸಾಕಷ್ಟು ಬಡ ಕುಟುಂಬದ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗೋದಿಲ್ಲ ಎನ್ನುವ ಕಾರಣಕ್ಕಾಗಿ ಅವರು ಮುಂದಿನ ದಿನಗಳಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಪ್ರತಿಯೊಂದು ಮಗುವಿಗೂ ಕೂಡ ಬಾಲ್ಯದಿಂದಲೇ ಉತ್ತಮ ಶಿಕ್ಷಣದ ಅಗತ್ಯತೆ ಅತ್ಯಂತ ಪ್ರಮುಖವಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ RTE (Right to Education) ಯೋಜನೆ ಜಾರಿಯಲ್ಲಿದ್ದು 2024 ಹಾಗೂ 25ನೇ ವರ್ಷದಿಂದಲೇ ಮಕ್ಕಳು ಒಂದನೇ ತರಗತಿಯಿಂದಲೇ ಉಚಿತ ಶಿಕ್ಷಣವನ್ನು ಪ್ರಾರಂಭ ಮಾಡಬಹುದಾಗಿದೆ. ಮೊದಲ ಹಂತದಿಂದಲೇ ಉತ್ತಮವಾದ ಶಿಕ್ಷಣವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಭದ್ರವಾಗಿರಿಸಿಕೊಳ್ಳಬಹುದಾಗಿದೆ.

RTE ಅಂದ್ರೆ ಶಿಕ್ಷಣದ ಹಕ್ಕು. ಈ ಸಮಾಜದಲ್ಲಿ ವಾಸಿಸುವಂತಹ ಪ್ರತಿಯೊಬ್ಬ ಮಗುವಿಗೂ ಕೂಡ ಶಿಕ್ಷಣವನ್ನು ಪಡೆದುಕೊಳ್ಳುವಂತಹ ಹಕ್ಕಿರುತ್ತದೆ. ಹೀಗಾಗಿ ಒಂದು ಮಗುವಿಗೆ ಬೇಕಾಗಿರುವಂತಹ ಬೇಸಿಕ್ ಶಿಕ್ಷಣವನ್ನು ಸರ್ಕಾರ ಉಚಿತವಾಗಿಯೇ ಒದಗಿಸಲಿದೆ. ಹೀಗಾಗಿ ಈ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದ ಮಕ್ಕಳಿಗೆ ಉಚಿತವಾದ ಶಿಕ್ಷಣವನ್ನು ನೀಡುವಂತಹ ಸೌಲಭ್ಯವನ್ನು ಸರ್ಕಾರ ಮಾಡಿಕೊಡುತ್ತಿದೆ.

ಎಷ್ಟನೇ ತರಗತಿಯವರೆಗೆ ಉಚಿತ ಶಿಕ್ಷಣ

RTE ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದ ಮಕ್ಕಳಿಗೆ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ನೀಡುವಂತಹ ಯೋಜನೆ ಇದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಒಂದನೇ ತರಗತಿಗೆ ಮಗು ಸೇರೋದಕ್ಕೆ ಐದು ವರ್ಷ ಐದು ತಿಂಗಳು ವಯಸ್ಸು ಆಗಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ನೀವು ಈ ಯೋಜನೆ ಅಡಿಯಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಎರಡು ವಿಧಾನದ ಮೂಲಕ ಕೂಡ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ಸರ್ಕಾರ ನಿಮಗೆ ನೀಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ಹತ್ತಿರದಲ್ಲಿ ಇರುವಂತಹ ಸೇವಾ ಕೇಂದ್ರಗಳಲ್ಲಿ ಕೂಡ ಹೋಗಿ ನೀವು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

https://sdcedn.karnataka.gov.in/rteadmission/RTE/page1.aspx ಈ ಅಧಿಕೃತ ವೆಬ್ ಸೈಟ್ ಗೆ ಹೋಗಿ ಬೇಕಾಗಿರುವಂತಹ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಅರ್ಜಿ ಸಲ್ಲಿಸುವಂತಹ ಅವಕಾಶ ಕೂಡ ಇದೆ. ಮಗುವಿನ ಅರ್ಜಿ ಫಾರಂ ಭರ್ತಿ ಮಾಡಿ ಸಲ್ಲಿಸಬೇಕಾಗಿರುತ್ತದೆ ಹಾಗೂ ತಮ್ಮ ಆಧಾರ್ ಕಾರ್ಡ್ ಅನ್ನು ಪೋಷಕರು ಇಲ್ಲಿ ಒದಗಿಸಬೇಕಾಗಿರುತ್ತದೆ. ಇದೇ ಏಪ್ರಿಲ್ 22ರಂದು ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನಾಂಕ ಆಗಿರುತ್ತದೆ. ಏಪ್ರಿಲ್ 26 ನೇ ತಾರೀಖಿನಂದು ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್ 30 ರಂದು ಮೊದಲ ಸುತ್ತಿನ ಸೀಟ್ ಹಂಚಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದಕ್ಕೆ ಕೊನೆಯ ದಿನಾಂಕ ಮೇ 13 ಆಗಿರುತ್ತದೆ ಹಾಗೂ ಎರಡನೇ ಸುತ್ತಿನ ಆಯ್ಕೆ ಆಗಿರುವಂತಹ ವಿದ್ಯಾರ್ಥಿಗಳ ಪಟ್ಟಿಯನ್ನು ಮೇ 22 ನೇ ತಾರೀಖಿನಂದು ಬಿಡುಗಡೆ ಮಾಡಲಾಗುತ್ತದೆ.

Comments are closed.